ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ - [17 ನೆಯ ನಂಜಣಾರ, ಸು 1650 ಈತನು ನೀತಿರತ್ನಾಭರಣವನ್ನು ಬರೆದಿದ್ದಾನೆ. ಇವನು ವೀರಶೈ ವಕವಿ ; ಹರವಿಹಳ್ಳಿಯ ಗುರು ಚೌಡೇಶ್ವರನ ಮಮ್ಮಗನು, ಪರಮ. ಗುರು ಸಿದ್ದ ಶಾಂತೇಶ್ವರನು ರಚಿಸನ ಪೇಂ” ಎಂದು ಹೇಳುತ್ತಾನೆ ಇವನ ಕಾಲವು ಸುಮಾರು [650 ಆಗಿರಬಹುದು. ಇವನ ಗ್ರಂಥ ನೀತಿರತ್ಯಾಭರಣ ಇದು ಕಂದದಲ್ಲಿ ಬರೆದಿದೆ ; ಪದ್ಯ 169, ಶೇಷ ಸು 1650 ಇವನು ರುಕ್ನಾಂಗದಚರಿತ್ರೆಯನ್ನು ಬರೆದಿದ್ದಾನೆ. ಈತನು ರಾಜ ವಂಶಕ್ಕೆ ಸೇರಿದವನಂತೆ ಕಾಣುತ್ತಾನೆ, ತನ್ನ ತಂದೆ ತಿಪ್ಪೇಂದ್ರ, ಅಣ್ಣ ರಾಘವಭೂವರ ಎಂದು ಈ ಪದ್ಯದಲ್ಲಿ ಹೇಳಿದ್ದಾನೆ ತಿಪ್ಪೇಂದ್ರ ತನಯ ರಾಘವಭೂವರನನಜ | ನಸ್ರತಿಮವರದ ಶೇಷ | ಒಪ್ಪವ ಕುಮಾಂಗದಚರಿತೆಯ ಲೋಕ | ಕಪ್ರತಿಯೆನೆ ಎರಚಿಸಿದ | ಇವನು ಸುಮಾರು 1650 ರಲ್ಲಿ ಇದ್ದಿರಬಹುದೆಂದು ತೋರುತ್ತದೆ. ಇವನ ಗ್ರಂಧ ರುಕ್ಕಾಂಗದಚರಿತ್ರೆ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಥಿ 7, ಪದ್ಯ 313. ಮರುಳುಸಿದ್ದೇಶ ಸು 1650 ಈತನು ಗುರುಲಿಂಗಜಂಗಮಚಾರಿತ್ರವನ್ನು ಬರೆದಿದ್ದಾನೆ. ಇವ ನು ವೀರಶೈವಕವಿ; 'ಶರಣುಪುರಾಧೀಶ್ವರ ಗುರುಮೂರ್ತಿಯ ಕರಜಾತ' ಎಂದು ಹೇಳಿಕೊಂಡಿದ್ದಾನೆ. ಇವನ ಕಾಲವು ಸುಮಾರು 1650 ಆಗಿ ಬಹುದು. ಇವನ ಗ್ರಂಥ