ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


440 ಕರ್ಣಾಟಕ ಕವಿಚರಿತೆ [17 ನೆಯ ಚನ್ನಪ್ಪ ಸು 1650) ಈತನು ಒಂದು ಕಾಲಜ್ಞಾನವನ್ನು ಬರೆದಿದ್ದಾನೆ, ಅವನು ವೀರ ಶೈವಕವಿ; ಸುಮಾರು 1650ರಲ್ಲಿ ಇದ್ದಿರಬಹುದು. ಇವನ ಗ್ರಂಥ ಕಾಲಜ್ಞಾನ ಇದರಲ್ಲಿ ಸುಮಾರು 285 ಹಾಡುಗಳಿವೆ. ಆರಂಭದಲ್ಲಿ ಮುಂದೆ ಚೆನ್ನ ಬಸವೇಶ್ವರರು ನಿರೂಪಿಸಿದಂಧ ಕಾಲಜ್ಞಾನದ ಸೂಚನೆಯ ಪೇ ಯುತಿರ್ದೆನದೆಂತನೆ ಎಂದಿದೆ, ಕೊನೆಯಲ್ಲಿ ಭಾನುಕೋಟಿಪ್ರಕಾಶ ಪರಶಿವ | ತಾನು ತನ್ನೊಳಗಿದ್ದ ಕಾರಣ | ದೇವಕವಿ ಚೆನ್ನಪ್ಪ ಪೇಳಿದ ಕಾಲಜ್ಞಾನವನು ಎಂದಿದೆ. ಮಂಚಯ್ಯ ಸು. 1650 ಈತನು ಭಕ್ತಿರಸಸೋನೆಯನ್ನು ಬರೆದಿದ್ದಾನೆ. ಇವನು ವೀರಪ್ಪ ವಕವಿ, ಇವನ ಕಾಲವು ಸುಮಾರು 1650 ಆಗಿರಬಹುದು. ಇವನ ಗ್ರಂಧ - ಭಕ್ತಿರಸಸೋನೆ ಇದು ಸಾಂಗತ್ಯದಲ್ಲಿ ಬರೆದಿಗೆ ಅನ್ನದಾನಿವಲ್ಲಿಕಾರ್ಜುನಾಚಾರ್ ಸು. 1650 ಇವನು ತಾತ್ಪಯ್ಯಸಂಗ್ರಹಟೀಕೆಯನ್ನು ಬರೆದಿದ್ದಾನೆ. ಇತನ್ನ ವೀರಶೈವಕವಿ, ವಿರೇಶನ ಪೌತ್ರನು, ಸೋಮನಾಧಾಚಾರ್ನ ಪುತ್ರನು. ಇವನ ಕಾಲವು ಸಮಾರು 1650 ಆಗಿರಬಹುದೆಂದು ತೋರುತ್ತದೆ. ಟೀ ಕಯ ಕೊನೆಯಲ್ಲಿ ಈ ಗದ್ಯವಿದೆ ಶ್ರೀಮದನವದ್ಯವಿದ್ಯಾ ವಿದ್ಯೋತಮಾನಾಂತಃಕರಣ ಶ್ರೀಪಂಡಿತಾರಾಧ್ಯ ವಂಶ ವಾರಿಧಿಸುಧಾಕರ ಶ್ರೀವೀರೇಶಸುತಸೋಮನಾಧಾಚಾರ ತದ್ಭವ ಸಕಲವೀರಶೈವಾ