484 ಕರ್ಣಾಟಕ ಕವಿಚರಿತೆ [17 ನೆಯ ಇವನು ವೀರಶೈವಕವಿ; ತನ್ನ ಗುರುಪರಂಪರೆಯನ್ನು ಹೀಗೆ ಹೇಳಿಕೊ೦ಡಿದ್ದಾನೆ - ಶ್ರೀಮತ್ಸಚ್ಚಿದಾನಂದನಿತ್ಯಪರಿಪೂರ್ಣ ನಿರಂಜನಪರಂಜ್ಯೋತಿಸ್ವರೂಪರಾದ ತೋಂಟದಸಿದ್ದಲಿಂಗಪ್ರಭುವೆಂಬಾಚಾರ್ಯರು ; ಅವರ ನಿಜದಅರಿವಿನಾಚರಣೆಯನುಭವಿಯೆ ಬೋಳಬಸವೇಶ್ವರನು ; ಅವರ ನಿಜದರೆವಿನಾಚರಣೆಯನುಭವಿಯ ಹರತಾಳ ಚೆನ್ನಂಜೆದೇವರು ; ಅವರನುಭವದ ಅಖಂಡತೇಜೋವಿಗ್ರಹವೆ ಎಳಮಲೆಯ ಗುರು ಶಾಂತದೇವರು ; ಅವರ ಭಕ್ತಿ ಜ್ಞಾನವೈರಾಗ್ಯದ ಸಮರಸಾನಂದಾನುಭಾವಿಯ ಸಂಪಾದನೆಯ ಸಿದ್ದ ವೀರಣಾಚಾರ್ಯರು; ಅವರಂಗಲಿಂಗದನುಭಾವದಾಚರಣೆಯ ನಿಜದ ನಿರೆಗೆ ವಿಡಿದು ಸ್ವಲೀಲಾನಂದದಲ್ಲಾಚರಿಸಿದವರೇ ಸಂಪಾದನೆಯ ಬೋಳಬಸವದೇವರು ; ಅವರ ಲಿಂಗಾಂಗಸಂಗಸಮದರುಹಿನ ಪ್ರಸಾದಪರಿಪೂರಿತಹೃದಯರಾದ ಸಂಪಾದನೆಯ ಗುರುಲಿಂಗದೇವರು ಲಿಂಗಾಂಗಪ್ರಣವಸಂಯೋಗವೆಂಬ ಶಾಸ್ತ್ರದ ಗರ್ಭಗರ್ಭೀ ಕೃತಮಾಗಿರ್ದ ಮಂತ್ರಾರ್ಧವನು ಕರ್ಣಾಟಭಾಷೆಯಿಂದ ಟೀಕಿಸಿದರು. ಈ ಪರಂಪರೆಯಪ್ರಕಾರ ಕವಿ ತೋಂಟದಸಿದ್ದಲಿಂಗನಿಂದ (ಸು, 1470) 7ನೆಯವನಾಗುತ್ತಾನೆ. ಇವನ ಕಾಲವು ಸುಮಾರು 1670 ಆಗಬಹುದು. 1698 ರಲ್ಲಿ ಚತುರಾಚಾರ್ಯಪುರಾಣವನ್ನು ಬರೆದ ಸಂವಾದನೆಯ ಪರ್ವತೇಶ್ವರನೂ ತೋಂಟದನಿದ್ದಲಿಂಗನ ಶಿಷ್ಯ ಪರಂಪರೆಯಲ್ಲಿ ತಾನು 7ನೆಯವನೆಂದು ಹೇಳಿಕೊಂಡಿದ್ದಾನೆ. ಶಾಂತಲಿಂಗದೇಶಿಕ. 1672 ಈತನು ಭೈರವೇಶ್ವರಕಾವ್ಯದ ಕಧಾಸೂತ್ರರತ್ನಾಕರವನ್ನು ಬರೆದಿದ್ದಾನೆ. ಇವನು ವೀರಶೈವಕವಿ. “ಭಕ್ತಿಜ್ಞಾನವೈರಾಗ್ಯವೇ ರೂಪುವೆತ್ತ ಪಟ್ಸ್ಥಲಾಚಾರ್ಯವಿರಕ್ತನಮಶ್ಚಿವಾಯದೇವರೆಂಬ ಸದ್ಗುರುಮೂರ್ತಿಯಲ್ಲಿ ಅವರ ಮಹಾನುಭಾವವಾಕ್ಯಪ್ರಸನ್ನಪ್ರಸಾದಾಮೃತಮ೦ ಸ್ವೀಕರಿಸಿ ತೃಪ್ತ ನಾದ ಶಾಂತಲಿಂಗದೇಶಿಕನು” ಎಂಬುದರಿಂದ ಈತನ ಗುರು ವಿರಕ್ತನಮಶ್ಚಿವಾಯದೇವನೆಂದು ತಿಳಿಯುತ್ತದೆ. ಆತನ ಆಜ್ಞಾನುಸಾರವಾಗಿ ಈ ಗ್ರಂಥವನ್ನು ಶಕ 1594 ಪರೀಧಾವಿಯಲ್ಲಿ-ಎಂದರೆ 1672 ರಲ್ಲಿ-ಬರೆದಂತೆ ಹೇಳುತ್ತಾನೆ, ಇವನ ಗ್ರಂಥ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೯
ಗೋಚರ