ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

488 ಕರ್ಣಾಟಕ ಕವಿಚರಿತೆ [17 ನೆಯ ಆಜ್ಞಾನುಸಾರವಾಗಿ ಬರೆದಂತೆ ಹೇಳುತ್ತಾನೆ. ಇದರಲ್ಲಿ ಚಂದ್ರಾಲೋಕ, ವಾಮನವೃತ್ರಿ, ಕಾವ್ಯಪ್ರಕಾಶ ಮೊದಲಾದ ಸಂಸ್ಕೃತಗ್ರಂಧಗಳಿಂದ ಲಕ್ಷಣಗಳನ್ನು ತೆಗೆದುಕೊಂಡು ಅವಕ್ಕೆ ಕನ್ನಡದಲ್ಲಿ ವೃತ್ತಿಯನ್ನು ಬರೆದು ಸ್ವನಿರ್ಮಿತವಾದ ಉದಾಹರಣಪದ್ಯಗಳನ್ನು ಕೊಟ್ಟಿದ್ದಾನೆ. ಈ ಯುದಾ ಹರಣಪದ್ಯಗಳೆಲ್ಲಾ ಚಿಕ್ಕದೇವರಾಜನ ಸ್ತುತಿರೂಪವಾಗಿವೆ. ಇವುಗಳಲ್ಲಿ ಹಲವು ಚಿಕ್ಕದೇವರಾಜವಿಜಯದಿಂದ ಅನುವಾದಮಾಡಲ್ಪಟ್ಟಿವೆ. ಅಪ್ರ ತಿಮವೀರ ಎಂಬುದು ಚಿಕ್ಕದೇವರಾಜನ ಬಿರುದುಗಳಲ್ಲಿ ಒಂದು.

    ಗ್ರಂಧಾವತಾರದಲ್ಲಿ ವಿಷ್ಣು ಸ್ತುತಿ ಇದೆ. ಬಳಿಕ ಕವಿ, ಚಂದ್ರವಂ ಶದಲ್ಲಿ ಕೃಷ್ಣನು ಅವತರಿಸಿದನು, ಆ ಕೃಷ್ಣ ವಂಶೋದ್ಭವನಾದ ರೊಡ್ಡದೇ ವರಾಜನಿಗೆ ಯಾದವಗಿರಿಯ ನಾರಾಯಣಸ್ವಾಮಿಯೇ ಚಿಕ್ಕದೇವರಾಜನೆಂಬ ಹೆಸರಿನಿಂದ ಪುತ್ರನಾದನು, ಈ ರಾಜನು, ಗೋಲಕೊಂಡ, ವಿಜಯಾಪುರ ಈ ಸಂಸ್ಥಾನಗಳ ಸೇನೆಗಳನ್ನೂ ಮರಾಟರನ್ನೂ ಇತರರಾಜರನ್ನೂ ಜಯಿಸಿ ವಿದ್ವತ್ಪಕ್ಷಪಾತಿಯಾಗಿ ತನ್ನಲ್ಲಿ ವಿಶೇಷಾಭಿಮಾನವನ್ನಿಟ್ಟಿದ್ದನೆಂದು ಹೇಳಿ, ಗ್ರಂಥವನ್ನು ಆರಂಭಿಸಿದ್ದಾನೆ. ಪ್ರಕರಣಗಳ ಕೊನೆಯಲ್ಲಿ ಈ ಗದ್ಯವಿದೆ..
    ಇದು ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪಾಪ್ರತಿ ಮವೀರನರಪತಿ ಶ್ರೀಚಿಕದೇವಮಹಾರಾಒಕೃಪಾಪರಿಪಾಲಿತ ಶ್ತೀತಿರುಮಲಾರ್ಯ ವಿರಚಿ ತಮಪ್ಪ ಶ್ರೀಮದಪ್ರತಿಮವೀರಚರಿತಮೆಂಒಲಂಕಾರಗ್ರಂಧದೊಳ್ 
     ಈ ಗ್ರಂಧದಿಂದ ಕೆಲವು ಭಾಗವನ್ನು ತೆಗೆದು ಬರೆಯುತ್ತೇವೆ-
                          ಭಾರತೀವೃತ್ತಿ. ಅದ್ಭುತರಸ 
    ವಸುಮತಿ ಸೆತ್ತುದೋ ದೆಸೆಗಳೀಂದುವೊ ನೇಸರುಗುಳ್ಪುದೋ ಕಡಲ್ | 

ಮಸಗಿ ನೆಗಳ್ಳತೋ ಮೂಗಿಲದಿರ್ಚಿತೊ ಪೋಳ್ತು ಪೊದಳ್ದು ಸಾರ್ಚಿತೋ || ಪೊಸಯಿಸಿಯಾಗಸಂ ನೆಲಕುರುಳ್ಚಿತೊ ಪೆರ್ಚಿತು ಪೆರ್ಚಿತೆಂಬಿನಂ | ಪಸರಿಸುವಾಮರಾಟಭಟರು ಸದೆದಂ ಚಿಕದೇವಭೂವರಂ ||

                         ಉಕ್ತವಸ್ತೂತ್ಪ್ರೇಕ್ಷೆ 
ಪದಪಿಂ ಮೆಯ್ವೆತ್ತ ಚಂದ್ರಾನ್ವಯದ ಮಹಿಮೆಯೋ ಗಂಡುರೂಪಾಂತ ಭೂಲೋ 
ಕದ ಪೆಂಪೋ ಬೇರೆ ವೇಷಂದಳೆದ ಯದುಕುಲೋತ್ಸಾಹಮೋ ತಳ್ತ ಕರ್ಣಾ |