ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶನ? ಬಸವಲಿಂಗವಿ 50! ಯಶಾಂತೇಶ್ವರ, ಈ ಕಾಂತೇಶ್ವರನ ಮತ್ತು ಷಡಕ್ಷರದೇವನ ಅನುಗ್ರಹದಿಂದ ತನ್ನ ಗ್ರಂಥವನ್ನು ಬರೆದಂತೆ ಹೇಳುವುದರಿಂದ ಕವಿ ಷಡಕ್ಷರದೇವನ ಸಮಕಾಲದವನು ಎಂದು ತಿಳಿಯುತ್ತದೆ. ತನ್ನ ಗ್ರಂಥವನ್ನು ಶಕ 1600 ನೆಯ ಕಾಲಯುಕ್ತಿವರ್ಷದಲ್ಲಿ ಎಂದರೆ 1679ರಲ್ಲಿ ಬರೆದಂತೆ ಹೇಳುತ್ತಾನೆ. ಪೂರ್ವಕವಿಗಳಲ್ಲಿ ಬಾಣ, ಕಾಳಿದಾಸ, ಪಾಲ್ಕುರಿಕೆ ಸೋಮ, ಭೀಮ, ಹರೀಶ, ಪಂಡಿತೇಂದ್ರ, ತೋಂಟದಸಿದ್ದಲಿಂಗ, ಸಿದ್ದ ನಂಜೇಕ ಷಡಕ್ಷರದೇವ ಇವರುಗಳನ್ನು ಸ್ಮರಿಸಿದ್ದಾನೆ. ಇವನ ಗ್ರಂಥ ಕೊಟ್ಟೂರು ಬಸವೇಶ್ವರಪುರಾಣ ಇದು ವಾರ್ಧಕಷಟ್ಪದಿಯಲ್ಲಿ ಬರೆದಿದೆ; ಸಂಧಿ 19, ಅದರಲ್ಲಿ ಕೂಟ್ಟೂರು ಬಸವೇಶ್ವರ ಎಂಬ ಶಿವಭಕ್ತನ ಚರಿತೆ ಹೇಳಿದೆ. - ಕಥಾಸಾರ--ಇವನು ಶಿವನ ಆಜ್ಞೆಯಿಂದ ಭೂಮಿಯಲ್ಲಿ ಅವತರಿಸಿ ಸದ್ಗುರು ಕರುಣಮಂ ಪಡೆದು ಬ್ರಾಹ್ಮಣರಿಗೆ ಮೃಡನ ಮಹಿಮೆಯನರಿಸಿ ಲಿಂಗತ್ರಯಾರಾಧ ನಾರ್ಥ೦ ಶಿಖಾಪುರದಲ್ಲಿ ನೆಲಸಿ ಅಗಣಿತಮಹಿಮೆಗಳ ಮೆರೆದು ಅಕುಬರಂಗೆ ನಿಜಮಂ ತೋರಿಸಿ ಮೋಳಿಗಯ್ಯ ಮೊದಲಾದವರನ್ನು ಶಿವಲೋಕಕ್ಕೆ ಕಳುಹಿ ಕೋಲಶಾಂತೇ ಶಂಗೆ ತಾನು ನೆಲಸಿದ ಕ್ಷೇತ್ರದ ಮಹಿಮೆಯನೊರೆದು ಲಿಂಗದಲ್ಲಿ ನಿಜಸಮಾಧಿಯ ನಾಂತನು. ಪೂರ್ವದಲ್ಲಿ ಇದೇ ಕಥೆಯನ್ನು ಬಸವಲಿಂಗ, ಸಿದ್ದನಂಜೇಶ, ಗರುಣಿಯಮಹೇಶ ಬಸವರಾಜ ಇವರುಗಳು ವರ್ಣಕವಾಗಿ ಬರೆದಿರುವುದನ್ನು ನೋಡಿ ಕವಿ ಈ ಗ್ರಂಥವನ್ನು ಬರೆದಂತೆ ತಿಳಿಯುತ್ತದೆ. ಗ್ರಂಥಾವತಾರದಲ್ಲಿ ಶಿವಸ್ತುತಿಯಿದೆ, ಬಳಿಕ ಕವಿ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ, ಭೃಂಗಿ, ವೀರಭದ್ರ, ಅಲ್ಲಮ, ಬಸವ, ಚೆನ್ನ ಬಸವ, ಮಡಿವಳಮಾಚ, ನೀಲಾಂಬೆ, ಗಂಗಾಂಬೆ ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವುಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ: ತೋಂಟದ ಸಿದ್ಧಲಿಂಗನ ಸ್ತುತಿ. ಶರಣಜನಪರಿಭವಲತಾಳಿಯಂ ಕಿಟ್ಟು ದು | ಷ್ಕರಕುಜನರುಜನಿತಾನಂಗಳ ತಂದುದು |