ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ ಚಿದಾನಂದಕವಿ 809 ರಾಜನ್ಮಪನ ಮಗ ನರಸರಾಜನ ಮಗ ಚಾಮರಾಜನು ಬಳಿಕ ಪಟ್ಟಕ್ಕೆ ಬಂ ದನು, ಈತನು ಶ್ರವಣಬೆಳುಗೊಳಕ್ಕೆ ಹೋಗಿ ಅಲ್ಲಿಯ ಶಾಸನಗಳನ್ನು ಓದಿಸಿ ಕೇಳಿ ತೆಲುಗುರಾಜನಾದ ಜಗದೇವನ ಹಾವಳಿಯಿಂದ ಗೋಮಟದೇವರ ಪೂಜೆ ನಿಂತುಹೋಗಿ ಚಾರುಕೀರ್ತಿ ಪಂಡಿತನು ಆ ಸ್ಥಳವನ್ನು ಬಿಟ್ಟು ಭಲ್ಲಾ ತಕೀಪುರಕ್ಕೆ ಹೊರಟುಹೋಗಿ ಭೈರವರಾಜನ ಪೋಷಣೆಯಲ್ಲಿ ಇರುವುದನ್ನು ತಿಳಿದು ಆತನನ್ನು ಕರೆಸಿ ಪುನಃ ಬೆಳುಗೊ ಳದಲ್ಲಿ ನಿಲ್ಲಿಸಿ ದೇವರಿಗೆ ಮಾನ್ಯಗಳನ್ನು ಬಿಟ್ಟನು. ಬಳಿಕ ರಾಜನೃಪನ ಕಿರಿಯಣುಗ ಇಮ್ಮಡಿರಾಜನೂ ಅನಂತರ ಬೆಟ್ಟದ ಚಾಮರಾಜನ ಮಗ ಕಂಠೀರವನರಸರಾಜನೂ ಆಳಿದರು, ರಾಜನೃಪನ ತಮ್ಮ ದೇವರಾಜನ ಮಕ್ಕಳು ದೊಡ್ಡ ದೇವರಾಜ, ಚಿಕ್ಕ ದೇವರಾಜ, ದೇವರಾಯ, ಮರಿದೇವ; ದೊಡ್ಡದೇವರಾಜನ ಹೆಂಡತಿ ಅಮೃತಮ್ಮ, ಮ ಕಳು ಚಿಕ್ಕದೇವರಾಜ, ಕಂಠೀರವೇಂದ್ರ, ಕಂರೀರವನರಸರಾಜನನಂತರ ದೊಡ್ಡ ದೇವ ರಾಜನ ತಮ್ಮ ದೇವರಾಜನು ಪಟ್ಟಕ್ಕೆ ಬಂದನು, ಇವನ ಆಳಿಕೆಯಲ್ಲಿ ಇವನ ಅಣ್ಣನ ಮ ಗನಾದ ಚಿಕ್ಕದೇವರಾಜನು ಬೆಳುಗೊಳಕ್ಕೆ ಹೋಗಿ ದಾನಶಾಲೆಗಾಗಿ ಮದನಯ ಎಂಬ ಗ್ರಾಮವನ್ನು ದೇವರಾಜನಿಗೆ ಹೇಳಿ ಕೊಡಿಸಿದನು. ಬಳಿಕ ಆತನೇ ಪಟ್ಟಕ್ಕೆ ಬಂದನು. ಇವನಿಗೆ ಶೃಂಗಗಕರ್ಣಾಟಚಕ್ರಿ ಎಂದು ಬಿರುದು, ಇವನ ಗ್ರಂಥ ಮುನಿವಂಶಾಭ್ಯುದಯ. ಇದು ಸಾಂಗತ್ಯದಲ್ಲಿ ಬರೆದಿದೆ; ನಮಗೆ ದೊರೆತ ಅಸಮಗ್ರಪ್ರತಿ ಯಲ್ಲಿ 5 ಸಂಧಿಗಳಿವೆ. ಈ ಗ್ರಂಥದಲ್ಲಿ ಜೈನಮುನಿಗಳ-ಮುಖ್ಯವಾಗಿ ಮೂ ಲಸಂಘದ ದೇಶೀಯಗಣದ ಕೊಂಡಕುಂದಾನ್ವಯದ ಮುನಿಗಳ-ಪರಂಪರೆ ಹೇಳಿದೆ. ಶ್ರುತಕೇವಲಿಯಾದ ಭದ್ರಬಾಹು ಬೆಳುಗೊಳಕ್ಕೆ ಬಂದು ಚಿಕ್ಕ ಬೆಟ್ಟದಲ್ಲಿ ಇದ್ದಂತೆಯೂ ಚಂದ್ರಗುಪ್ತನು ಅರ್ಹದೃಲ್ಯಾಚಾರನ ಕಾಲದಲ್ಲಿ ಬೆಳುಗೊಳಕ್ಕೆ ಬಂದು ದೀಕ್ಷೆ ಪಡೆದಂತೆಯೂ ಹೇಳಿದೆ. ಗ್ರಂಥಾವತಾರದಲ್ಲಿ ಜಿನಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆ ಯುವೆ ಆಲಿಗಲ್ಲು ಗುಡುಗು ಮದ್ದಳಿ ಗಗನವು ರಂಗಸ್ಥಳ | ಕುಡಿಮಿಂಚು ನರ್ತಕಿಯಾಗೆ | ಬಿಡದೆ ಸೂಸುವ ಮುಖ್ಯಪಷ್ಪಾಂಜಲಿಶೋಭೆ | ವಡೆದುವಂದಾಲಿಗಲ್ಲುಗಳು |