ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

814

                          ಕರ್ಣಾಟಕ ಕವಿಚರಿತ.
                                                                  [17 ನೆಯ

ನೆತ್ತವಾಡುವುದು ಹಣಹೊನ್ನನೊಡ್ಡು ಹಾಸಂಗಿಯ ಡಾಳಿಸು | ಎಣಿಸು ಮುಂಗಾಯನಗಲದೆ ! ಎಣೆಯಿಡುವಂತಿಡು ದ್ವಿಗುಣತ್ರಿಗುಣಚತು | ಗುಳೆ ಣವೆಂದು ನೆತ್ತವಾಡುವರು |

                             ಸ್ತ್ರೀವರ್ಣನೆ 

|ಕರವೆ ಕಾವನ ಪಾಶ ಕುರಳೆ ಕಾವನ ಬಲೆ | ಗಿರಿಕುಚ ಕವನ ಚೆಂಡು | ಕೊರಳ ಕಾವನ ಕಾಳೆ ಕಬರಿ ತುಂಬಿಯ ಮೊತ್ತ | ವರಲ ಕಂಗಳೆ ಕಾವನಂಬು || ತುಂಬುಗಳೊಲೆಯುತ ಕೊರಳುಗಲಳ್ ಕೊಂಕುತ | ಗಿರಿಕುಚಗಳು ಕುಣಿಯುತಲಿ! ಪೋರವಾರಿ ಬಣ್ಣಿಗೆ ತೊಡೆಗಳು ನಡುಗುತ | ನವಿರು ಕಮಲನೇತ್ರೆಯರು ||

                             ಬೆಳಾದಿಂಗಳಾ

ಇಳೆಯೊಳು ಮುಸುಕಿರ್ಸ್ಪ ನಿಶಿಗೆ ಕುಮುದಸಖಿ | ಬೆಳುವಟ್ಟೆ ಮುಸುಕಿದಂತಿಹುದು| ತಳಮೇಲುದಡಗಳನೊಳಕೊಂಡು ಪರಿವಂತ | ತಿಳಿವಾಲಿನಂತಿರೆ ಜೊನ್ನ |

                        ಪದ್ಮನಾಭ ಸು 1680 

ಇವನು ಪದ್ಮಾವತಿಚರಿತೆಯನ್ನು ಬರೆದಿದ್ದಾನೆ. ಈ ಗ್ರಂಥಕ್ಕೆ ಜಿನದತ್ತರಾಯಚರಿತೆ, ಅಮ್ಮನವರ ಚರಿತೆ ಎಂಬ ಹೆಸರುಗಳೂ ಆರವಂತೆ ತೋರುತ್ತದೆ. ಈತನು ಜೈನಕವಿ; ತನ್ನ ಮತ್ತು ತನ್ನ ದೇಶದ ದೊರೆಯ ವಿಷಯವಾಗಿ ಹೀಗೆ ಹೇಳಿದ್ದಾನೆ- ತುಳುವದೇಶದ ಮಧ್ಯದಲ್ಲಿ ಮೂಲಿಕೆ ಎಂಬ ಪಟ್ಟಣವಿರುವುದು.ಆ ಪಟ್ಟಣಕ್ಕೆ ಅಯಕಳ, ಒಳಲಂಕೆ ಎಂಬ ಹೆಸರುಗಳೂ ಉಂಟು.ವಿಜಯಣ್ಣವರ್ಣಿಯ ಶಿಷ್ಯನಾದ ದುರ್ಗಣಸಾಮಂತರಾಯನ ತಂಗಿ ದೇವಮ್ಮಾಜೆಗೂ ಇವಳ ಗಂಡ ಪಶ್ಚಿಮವೇಣುಪುರಪತಿ ಮಾಲಿಂಗರಾಜನಿಗೂ ಕಿನ್ನಿಗಸಾಮಂತ, ತಿರುಮಲೇಂದ್ರ, ಚೆನ್ನಿಗ, ಚೆನ್ನಮಾಂಬಿಕೆ, ಶಂಕರನೃಪತಿ, ತಿರುಮಲರಸ, ಅಬ್ಬಕದೇವಿ ಎಂಬ 7 ಮಕ್ಕಳಿದ್ದರು. ತುಳುವದೇಶದಲ್ಲಿ ಅಳಿಯಸಂತಾನವಾದುದರಿಂದ ಕಿನ್ನಿಗನು ದೊರೆಯಾದನು.ಅವನ ಕಾಲಕ್ಕೆ ಅನಂತರ ತಿರುಮಲರಾಯನು ಪಟ್ಟಕ್ಕೆ ಬಂದನು. ಇವನಿಗೆ ಕಾದಂಬಕುಲ