ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12

    ಡಿರುವಂತೆ ತೋರುತ್ತದೆ, ಹನ್ನೊಂದನೆಯ ಶತಮಾನಕ್ಕೆ ಹಿಂದೆ ಇದ್ದ ಅಮೃತಸಾಗರನೆಂಬ ಕವಿಯಿಂದ ರಚಿತವಾದ 
   ಯಾಪ್ಪರುಂಗಲಕ್ಕಾರಿಹೈ ಎಂಬ ತಮಿಳು ಛಂದೋಗ್ರಂಥದಿಂದ ಕನ್ನಡದಲ್ಲಿ ಗುಣಗಾಂಕಿಯಂ ಎಂಬ ಬಂದು 
   ಛಂದೋಗ್ರ೦ಥವು ಇದ್ದಂತೆಯೂ ಅದರಲ್ಲಿ ಕವಿ ತನ್ನ ವಿನಯವನ್ನು ಸೂಚಿಸಿರುವುದಲ್ಲದೆ ಬಬ್ಬ ಸ್ತ್ರೀಯನ್ನು 
   ಸಂಬೋಧಿಸಿ ಗ್ರಂಥವನ್ನು ಬರೆದಿರುವಂತೆಯೂ ಇದೇ ರೀತಿಯನ್ನು ತಮಿಳು ಗ್ರಂಥಕಾರನೂ ಅನುಸರಿಸಿರುವಂತೆಯೂ 
   ತಿಳಿಯುತ್ತದೆ 1 ಕನ್ನಡ ಗ್ರಂಥವನ್ನು ಬರೆದ ಕವಿಯ ಹೆಸರು ಹೇಳಿಲ್ಲ ಅವನು ತನ್ನ ಗ್ರಂಥವನ್ನು ಗುಣಗ, 
   ಗುಣಗಾಂಕ, ಗುಣಕೆನಲ್ಲ ಎಂಬ ವಿಶೇಷಣಗಳುಳ್ಳ 3ನೆಯ ವಿಜಯಾದಿ ತ್ಯನೆಂಬ (844-888) 
   ಮಡಣಚಾಲುಕ್ಯರಾಜನಿಗೆ ಅಂಕಿತಮಾಡಿರುವಂತೆ ತೋರುತ್ತದೆ. ಈ ಗ್ರಂಥವು ನಮಗೆ ದೊರೆತಿಲ್ಲ
       ಕನ್ನಡನುಡಿಯ ವೈಲಕ್ಷಣ್ಯವನ್ನು ಸೂಚಿಸುವ ಕೆಲವು ವಿನೋದಕರವಾದ ಪದ್ಯಗಳನ್ನು ಕೆಳಗೆ ಬರೆಯುತ್ತೇನೆ_
          ಎತ್ತಂ ಹೇಜಂಬರ್‌ ಹೇ | ಅತ್ತೆ೦ಬರ್ ಕಲ್ಲ,ಮಣ್ಣೂಳಿಕ್ಕಿದ ಕೋಟೆಯ |
          ಮುತ್ತೆಂಬರ್ಗ್ ಮರನೊಂದಂ | ಹತ್ತೆಂಬ‌ರ್ ನೋಡ ಕನ್ನಡಂ ವಿಸ್ಮಯದಂ ||
          ಹುರಿಯೋಡ ಸಿರಿವಂತಿಗಯೆಂದೆಂಬುದು | ನರನ ಪಾರುವನೆಂದೆಂಬುದು |
          ಮರಗೆತ್ತುವನನೋಜನೆಂದೆಂಬುದೇನ | ಚ್ವರಿ ರಂಗ ಕನ್ನಡದೊಳ್ಪು ||
          ಸರಸನನರಸನೆಂಬುದು ಪೂರ್ಣಗೃಹವನು | ಅರಮನೆಯೆಂದುಸಿರುವುದು | 
          ನರಪಕುಮಾರನನರಮಗನೆಂಬುದೇ | ನೊರೆ ರಂಗ ಕನ್ನಡದೊಳ್ಪ2 ||
                      ಕನ್ನಡನುಡಿಗೆ ಪ್ರೋತ್ಸಾಹ
         ಕನ್ನಡನುಡಿ ಪೂರ್ವದಿಂದಲೂ ರಾಜರುಗಳ ಮತ್ತು ಮಂಡಲಿಕರ ಪ್ರೋತ್ಸಾಹದಿಂದ ಏಳಿಗೆಯನ್ನು 
   ಹೊಂದಿರುತ್ತದೆ ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಕಾಕತೀಯರು, ಹೊಯ್ಸಳರು, ಮೂಡಣಚಾ
      1. ಗುಣಗಾ೦ಕಿಯನೆನ್ನು೦ ಕರುನಾಟಕಚ್ಚಂದಮೇ ವೋಲ್ ಮಹಡೂಮನ್ನಿಲೈಯುಡೈತ್ತಾಯ್ ಅವೈಯಡಕ್ಕ 
    ಮುಡೈತ್ತಾಯ.
      2. ಕೊನೆಯ ಎರಡು ಪದ್ಯಗಳು ಚಿಕ್ಕುಪಾಧ್ಯಾಯನಿ೦ದ (1672) ರಚಿತವಾದುವು.