ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ನಿರಾಲಂಬಶರಣ ಪಲ್ಲವಿ|| ಬೆರೆಯಬಾರದೇ | ತಿಳಿದು | ಬೆರೆಯಬಾರದೇ | ಅನುಪಲ್ಲವಿ| ಮಣಿದು ಬಾಹ್ಯವನ್ನು ತನ್ನ | ಕರದಖಂಡತೇಜದೊಡನೆ || ತಿಳಿವೆನಿಸುವ ಸುರಭಿಗೂಡಿ | ನಳನಳಿಸುವ ವಿಕಚಹೃದಯ | ನಳಿನದಮಲಕಣಿ ಕೆಯೊಳು ! ಬೆಳಗುವಿಷ್ಟಲಿಂಗದೊಡನೆ ||೨|| ಸರಿವ ಗಂಗೆಯಮುನೆಯೆರಡು ! ಬೆರೆದ ಸಂಗಮಸ್ಥಳದೊಳ | ಗಿರುವ ಗಗನಗಿರಿಯ ತುದಿಯೊ ಳುರಿವ ಪ್ರಾಣಲಿಂಗದೊಡನೆ Rz| ಮಹಿಳಶ್ರೀಗುರುಸಿದ್ದನೊಲಿದು | ವಿಹರಿಸುವ ಸುಷುಮ ನಾಡಿ | ಕುಹರದರದಚಲಸರಸಿ | ರುಹದ ಭಾವಲಿಂಗದೊಡನೆ |3|| ನಿರಾಲಂಬಶರಣ ಸು, 1700 ಇತನು ಅಖಂಡೇಶ್ವರವಚನವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ; ಇವನನ್ನು ಶ್ರೀಮತ್ಪರಮಹಂಸಪರಿವ್ರಾಜಕ ಸದ್ದು ರುಸತ್ಸಂ ಪ್ರದಾಯಕ ಸಿದ್ದಯೋಗೀಂದ್ರ' ಎಂದು ವಿಶೇಷಿಸಿ ಹೇಳಿದೆ, ಇವನ ಕಾ ಲವು ಸುಮಾರು 17oo ಆಗಿರಬಹುದೆಂದು ತೋರುತ್ತದೆ. ಇವನ ಗ್ರಂಥ ಅಖಂಡೇಶ್ವರವಚನ ಇದರಲ್ಲಿ ಸ್ಥಳಗಳನ್ನಿಟ್ಟು ವಚನಗಳು ಹೇಳಿವೆ; ಪ್ರತಿವಚನದ ಲ್ಲಿಯ ಅಖಂಡೇಶ್ವರ ಎಂಬ ಅಂಕಿತವಿದೆ. ಕೆಲವು ವಚನಗಳನ್ನು ಉದ್ದ ರಿಸಿ ಬರೆಯುತ್ತವೆ. ಸುಡು ಸುಡು ಇದೇಹದ ರೂಪು ನೋಡಿದರೇನುಹುರುಳಿಲ್ಲವಯ್ಯ; ಎಲುವಚ ರ್ಮನರಮಾಂಸಮಲಮೂತ್ರಯುಕ್ತವಾದ ಅನಿತ್ಯದೇಹವ ನೆಚ್ಚಿ ನಿಮ್ಮ ನಿಜವನು ಮ ಇದು ಭವಭಾರಿಯಾದೆನಯ್ಯ ಅಖಂಡೇಶ್ವರಾ, ತನ್ನ ಎಡೆಯಲ್ಲಿ ನೊಣವನಳಿಸುತ ಮರುಳುಮಾನವನಂತೆ ತನ್ನಂಗದ ಮನದ ಅವಗುಣಂಗಳ ತೋಲಗನೂಕಲು' ಯದೆ ಅನ್ಯರಲ್ಲಿಯವಗುಣಂಗಳ ಸಂಪಾದನೆಯಮಾ ಡುವ ಕುನ್ನಿಗಳ ಎನಗೊಮ್ಮೆ ತೋರಿದಿರಯ್ಯ ಅಖಂಡೇಶ್ವರ, ಅನುಭಾವಿಗಳಸಂಗ ಕೀಟಕ ಭ್ರಮರವಾದಂತೆ ಕೇಳಿರೋ; ಅನುಭಾವಿಗಳ ಸಂಗ. ಪರುಷಲೋಹದಂತೆ ಕೇಳಿರೋ; ನಮ್ಮ ಅಖಂಡೇಶ್ವರಲಿಂಗದೊಡನೆ ಬೆರೆದ ಶಿವಾನುಭಾವಿ ಗಳ ಸಂಗ ಕರ್ಪೂರಜ್ಯೋತಿಯಂತೆ ಕಾಣಿರೋ.