ಈ ಪುಟವನ್ನು ಪರಿಶೀಲಿಸಲಾಗಿಲ್ಲ.
27
ಇನ್ನು ನಾಗವರ್ಮನು ದಕ್ಷಿಣೋತ್ತರಮಾರ್ಗಗಳ ವಿಷಯವಾಗಿ ಏನು ಹೇಳುತ್ತಾನೆ ನೋಡುವ ಕಾವ್ಯಾವಲೋಕನದ 3 ನೆಯ ಅಧಿಕರಣದ ಮಾರ್ಗವಿಭಾಗದರ್ಶನವೆಂಬ 1ನೆಯ ಪ್ರಕರಣದಲ್ಲಿ ನಾಗ ವರ್ಮನು ನೃಪತುಂಗನಂತೆಯೇ ಕಾವ್ಯಗುಣಗಳ ವಿವರಣೆಯಲ್ಲಿ ದಂಡಿ ಯನ್ನು ಅನುಸರಿಸಿ ಕೊನೆಗೆ ದಂಡಿಯ ಇತಿ ವೈದರ್ಭಮಾರ್ಗಸ್ಯ ಪ್ರಾಣಾ ದಶಗುಣಾಃ ಸ್ಮೃತಾಃ | ಏಷಾಂ ವಿಪರಯಃ ಪ್ರಾಯೋ ದೃಶ್ಯತೇ ಗೌಡವತ್ಮರ್ನಿ || ಎಂಬ ಶ್ಲೋಕವನ್ನು ಪರಿವರ್ತಿಸಿ ಕೆಳಗಣ ಪದ್ಯವನ್ನು ಬರೆದಿದ್ದಾನೆ - ಇವು ನಿಯತಂ ದಕ್ಷಿಣದೇ | ಶವರ್ತಿ ಕವಿರಾಜಮಾರ್ಗದೊಳಂ ನೆಗಳ್ಗುಮ | ತ್ತವರ ವಿಪರ್ಯಯವೃತ್ತಿಯೆ | ಬಮಸುಗುಮುದೀಚ್ಯ ಮಾರ್ಗದೊಳ್ ಪ್ರಚು ರತೆಯಿಂ || ಇದರ ಮುಂದಣ ಪದ್ಯವಾದ ವೈದರ್ಭಗೌಡಮಾರ್ಗವಿ | ಭೇದಂ ಬಗೆವೊಡೆ ಗತಾನುಗತಿಕವಿದೆಂದೊ | ಲ್ದಾ ದರಿಪರ್ ಕೆಲಬರ್ ಸಂ | ವಾದದೊಳೆರಡುಂ ಸವ ರ್ಧ ಮಪ್ಪುದರಂದಂ || ಎಂಬುದರಲ್ಲಿ ಭಾಮಹನ ಕಾವ್ಯಾಲಂಕಾರದಲ್ಲಿಯ ಗೌಡೀಯಮಿದಮೇತತ್ತು ವೈದರ್ಭಮಿತಿ ಕಿಂ ಸೃಧಕ್ | ಗತಾನುಗತಿಕನ್ಯಾಯಾನ್ನಾ ನಾಖ್ಯೇಯಮವೇಧಸಾಂ || ಎಂಬ ಶ್ಲೋಕದ ಅರ್ಥವನ್ನು ಹೇಳಿ ಆ ಪ್ರಕರಣವನ್ನು ಮುಗಿಸಿ ದ್ದಾನೆ. ಇದರಿಂದ ನಾಗವರ್ಮನು ಹೇಳುವ ದಕ್ಷಿಣೋತ್ತರಮಾರ್ಗ ಗಳು ವೈದರ್ಭಗೌಡಮಾರ್ಗಗಳೇ ಹೊರತು ಕನ್ನಡದ ಭೇದಗಳಲ್ಲ ಎಂಬು ದು ವ್ಯಕ್ತವಾಗುತ್ತದೆ. ಆಧುನಿಕನಾದ ಭಟ್ಟಾಕಳಂಕನು ತನ್ನ ಕರ್ಣಾಟಕ ಶಬ್ದಾನುಶಾಸ ನದ “ ಆದೆನಃ ” ಎಂಬ 288 ನೆಯ ಸೂತ್ರದ ವ್ಯಾಖ್ಯಾನದಲ್ಲಿ ರ್ನಾ ಎಂಬ ರೂಪವನ್ನು ಉತ್ತರ ಮಾರ್ಗದ ಕವಿಗಳು ಅಂಗೀಕರಿಸಿದ್ದಾರೆ, ದ ಕ್ಷಿಣಮಾರ್ಗದ ಕವಿಗಳು ಅದನ್ನು ಬಿಟ್ಟು ಆ೯ ಎಂಬ ರೂಪವನ್ನು ಅಂ ಗೀಕರಿಸಿದ್ದಾರೆ ಎಂದು ಹೇಳಿ, ದಕ್ಷಿಣೋತ್ತರಮಾರ್ಗಭೇದಸೂಚಕವಾದ ಪ್ರಯೋಗಗಳನ್ನು ನೃಪತುಂಗನ ಗ್ರಂಥದಲ್ಲಿ ನೋಡಬಹುದು' ಎನ್ನು ತಾನೆ. ಇಲ್ಲಿಯ ದಕ್ಷಿಣೋತ್ತರಶಬ್ದಗಳು ಕನ್ನಡದ ಭೇದಗಳಿಗೆ ಅನ್ಯ