ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಶತಮಾನಕ್ಕೆ ಹಿಂದೆ]          ಶಾಂತಿನಾಧ                  9
    
   ಬನದೊಳೆತ್ತಲುಂ ಸುರುವರಗಿಳಿಗಳೆ | ಜಿನುಗಿ ರಾಗದಿಂದಂ ಮೊರೆವಳಿಗಳೆ |            
   ಪೋ ಪುಗಿಲ್ ಪುಗಿಲ್ ನಿಲ್ಲೆನುತೆ ಕರ೦|ಕಾಪುಗೊಂಡು ಜಡಿವುದು ಪಿಕನಿಕರಂ||
               
                 ವಿವಾಹಗೇಹ (ಲಲಿತರಗಳೆ)
                       
   ಮರಕತಭಿತ್ತಿಗಳಿ೦ ಭಿತ್ತಿವೆತ್ತು | ಪೊಸದೇಸೆಯೊಳೆತ್ತಂ ಭಂಗಿವೆತ್ತು |               
   ವಜ್ರದ ಕಂಭಂಗಳ ಕಾಂತಿ ಮಿಂಜೆ | ಪರಭಾಗಂಬಡೆದವಳೊಳ್ ಪಳಂಚೆ | 
   ಪೊಂಗಳಸಂಗಳ್ ತಳತಳನೆ ತೊಳಗೆ| ಕಪ್ಪುರದ ಸೊಡರ್ಗಳೋರಂತೆ ಬೆಳಗೆ| 
   ಪೊಂದಳಿರ್ಗಳ ತೋರಣದೊಳಗೆ ಪೋರಗೆ | ಕೆಂದಳಿರ್ಗಳ ಮಾಲೆಗಳೆಲಗಿ
                                              ತುಲುಗೆ | 
   ಭಾವಿಸುವಂದರು ಪುಣ್ಯಾವತಾರ | ಮಾರಯ್ವಂದದು ಸಂಸಾರಸಾರ |           
   ಈ ಲೋಕದೊಳದಲುತಪ್ಪುವಿಲ್ಲ | ಬಣ್ಣಿಸಲದನಾವನುಮದನಿಲ್ಲ ||
                      ಊಟ 
                          
   ಎಳಮಾವಿನ ಮಿಡಿ ಮಾಗುಳಿ|ಮೆಳಸಿನ ಕರೆ ಬೆತ್ತಲಟ್ಟೆಯೀಳೆಯ ಗೊಲೆಯಿಂ|                     
   ದಳವಟ್ಟಿರೆ ಲಾವಣಕಂ | ಗಳನಿಕ್ಕಿದರಾಗಳರ್ಧಿಯಿಂದಂಗನೆಯರ್ ||           
   ಇದು ಬಾಳ್ಮೊಸರಿದು ಕಳಲಿಂ|ತಿದು ರುಚಿವೆತ್ತಿರ್ದ್ದ ಪಾನಮಿದು ಮಜ್ಜಿಗೆ ತಾ|           
   ನಿದು ಶಿಖರಿಣಿಯೆನುತುಂ ತಿಂ|ಬಿ ತಿಂಬಿ ತಂದೆಲೆದರಬಲೆಯರ್ ಸಿರ್ಪುಗಳಿಂ ||
                      ಜಿನಸ್ತುತಿ  
                                                   
   ಕವಿಗಳ್ ನಿನ್ನ ಮೃದೂಕ್ತಿಯಂ ಬಯಸಿ ಕೇಳುತ್ತಿರ್ಕ್ಕೆ ಕಣ್ಗಳ್ ಮಹೋ |     
   ತ್ಸವದಿಂ ನಿನ್ನನೆ ನೋಡುತಿರ್ಕ್ಕೆ ಸಲೆ ಕೈಗಳ್ ನಿನ್ನ ಪಾದಾರವಿಂ || 
   ದವನೋತಚ್ಚಿ೯ಸುತಿರ್ಕ್ಕೆ ಸಂದ ಮನಮೆಂದುಂ ನಿನ್ನ ದಿವ್ಯಸ್ವರೂ | 
   ಪವನಾರಾಧಿಸುತಿರ್ಕ್ಕೆ ವಿಶ್ರುತವಿನೇಯಸ್ವಾರ್ಧ ಚಿಂತಾಮಣೀ ||
                   ಜಿನಸ್ತುತಿ (ವದ್ದಳಿ) 
                             
   ಜಯಜಯ ಭುವನತ್ರಯಪರಮದೇವ | ದೇವೇಂದ್ರಾಭ್ಯರ್ಚಿತಚರಣಕಮಲ | 
   ಕಮಲವಿರಹಿತನಿರುಪಮದೇಹ | ದೇಹಾಶ್ರಿತಶುಭಲಕ್ಷಣವಿನೂತ | 
   ನೂತನಸಂಗತಕೈವಲ್ಯಬೋಧ | ಬೋಧಪ್ರಕಾಶವಸ್ತುಸ್ವರೂಪ |  
   ರೂಪಾತಿಶಯಾನ್ವಿತ ವಿತತವಿಭವ | ಭವನಿವಹಪಟಲನಿರ್ಮುಕ್ತಜೀವ ||
     2