ಪುಟ:ಕರ್ನಾಟಕ ಗತವೈಭವ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೩೨

ಕರ್ನಾಟಕ-ಗತವೈಭವ


ವುದು. ಅವರ ರಿಪೋರ್ಟುಗಳು ಕಾಲಕಾಲಕ್ಕೆ ಹೊರಡುತ್ತಿರಲಿಲ್ಲ, ಸಾಕಷ್ಟು ಸಲಕರಣೆಗಳು ಕೂಡಿದನಂತರ ಒಂದೊಂದು ಪುಸ್ತಕವು ಬೈಲಿಗೆ ಬರುತ್ತಿತ್ತು. ೧೮೭೪ನೇ ಇಸವಿಯಿಂದ ೧೯೦೨ ಇಸವಿಯವರೆಗೆ ಅಂದರೆ ೨೯ ವರ್ಷಗಳಲ್ಲಿ ೩೨ ಪುಸ್ತಕಗಳು ಹೊರಬಿದ್ದಿರುತ್ತವೆ. ಅದಕ್ಕೆ ವಾಲ್ಯುಮ್ಸ್ ಆಫ್ ದಿ ಇಂಪೀರಿಯಲ್ ಸಿರೀಸ್ (Volumes of the Imperial Series) ಎಂದೆನ್ನುತ್ತಾರೆ. ಒಮ್ಮೊಮ್ಮೆ ೫ ವರ್ಷಕ್ಕೊಮ್ಮೆ ಒಂದು ಪುಸ್ತಕವು ಹೊರಟಿತು. ಒಮ್ಮೊಮ್ಮೆ ಒಂದೇ ವರ್ಷದಲ್ಲಿ ೫ ಪುಸ್ತಕಗಳು ಹೊರಬಿದ್ದುವು. ಡಾ. ಬರ್ಗೆಸ್ (Dr. Burgess) ಇವರ ಜೊತೆಗೆ ಮತ್ತೆ ೯ ಜನರು ಕೆಲಸ ಮಾಡುವವರಿದ್ದರು. ಆದರೆ, ಈ ೩೨ ಪುಸ್ತಕಗಳಲ್ಲಿ ೧೯ ಪುಸ್ತಕಗಳನ್ನು ಡಾ. ಬರ್ಗೆಸ್‌ (Dr. Burgess) ಇವರೊಬ್ಬರೇ ಬರೆದಿರುತ್ತಾರೆ.
ಜನರಲ್ ಕನಿಂಗಹ್ಯಾಮ್ (General Cunningham) ಇವರ ಡಿಸ್ಟ್ರಿಕ್ಟ್ ರಿಪೋರ್ಟುಗಳೆಂದರೆ, ಇವರು ತಮ್ಮ ಪ್ರವಾಸದಲ್ಲಿ ತೆಗೆದುಕೊಂಡ ಟಿಪ್ಪಣಿಗಳು. ೧೮೬೨ರಿಂದ ೧೮೮೪ರ ವರೆಗೆ ಇಂಥ ರಿಪೋರ್ಟುಗಳು ಮುದ್ರಿಸಲ್ಪಟಿವೆ. ಇವು ಡಾ. ಬರ್ಗೆಸ್ (Dr. Burgess) ಇವರ ರಿಪೋರ್ಟುಗಳಿಗಿಂತ ಹೆಚ್ಚು ವಿಸ್ತ್ರತವಾಗಿರುತ್ತವೆ. ಆದರೆ ಇವರ ರಿಪೋರ್ಟುಗಳೂ, ಮಧ್ಯ ಮತ್ತು ಉತ್ತರ ಹಿಂದುಸ್ಥಾನಕ್ಕೆ ಸಂಬಂಧಿಸಿರುತ್ತವೆ. ಆದುದರಿಂದ ಕರ್ನಾಟಕದ ಇತಿಹಾಸದ ವಿಷಯವಾಗಿ ಪ್ರತ್ಯಕ್ಷವಾಗಿ ಏನೂ ಮಾಹಿತಿಯು ಈ ಬರ್ಗೆಸ್ ಮತ್ತು ಕನಿಂಗಹ್ಯಾಮ್ ಇವರ ರಿಪೋರ್ಟುಗಳಲ್ಲಿ ಸಿಕ್ಕುವುದಿಲ್ಲ.
ಸರಕಾರದವರು ಪುರಾತನ ವಸ್ತು ಸಂಶೋಧನದ ವಿಷಯಕ್ಕಾಗಿ ಎಲ್ಲಕ್ಕೂ ಮೊದಲು ಮಾಡಿದ ಪ್ರಯತ್ನವೇನೆಂದರೆ ೧೮೬೨ನೆಯ ಇಸವಿಯಲ್ಲಿ ಜನರಲ್ ಕನಿಂಗಹ್ಯಾಮ್‌ (Major General Cunningham) ಇವರನ್ನು ಡಾಯರೆಕ್ಟರ್‌ ಆಫ ಆರ್ಕಿಆಲಾಜಿ (Director of archaeology) ಎಂಬ ಹುದ್ದೆಗೆ ನೇಮಿಸುವುದೇ. ಅಂದಿನಿಂದಲೇ ನಮ್ಮ ಸರಕಾರದ ಈ ಖಾತೆಗೆ ಪ್ರಾರಂಭವಾಗಿರುತ್ತದೆ. ಅವರನ್ನು ನೇಮಿಸುವಾಗ ಈ ಶಾಖೆಯನ್ನು ಶಾಶ್ವತವಾಗಿ ಇಡುವುದು ಸರಕಾರದವರ ಉದ್ದೇಶವಿರಲಿಲ್ಲವೆಂಬುದು ಈ ಮುಂದಿನ ಉದ್ಗಾರಗಳ ಮೇಲಿಂದ ಗೊತ್ತಾಗುವುದು, “To make an accurate description