ಪುಟ:ಕರ್ನಾಟಕ ಗತವೈಭವ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೩೪

ಕರ್ನಾಟಕ-ಗತವೈಭವ


ಮಾಡುವುದು ಇವರ ಕೆಲಸವಾಗಿರಲಿಲ್ಲ. ಅದು ಪ್ರಾಂತಿಕ ಸರಕಾರದವರ ಕೆಲಸ ಎಂದು ಸರಕಾರದವರ ತಿಳುವಳಿಕೆಯಾಗಿತ್ತು. ಪ್ರಾಂತಿಕ ಸರಕಾರದವರ ಲಕ್ಷ್ಯದಲ್ಲಿ ಈ ಕಟ್ಟಡಗಳ ಸಂರಕ್ಷಣೆಯ ವಿಷಯವು ಚನ್ನಾಗಿ ಬರದುದೇನೂ ಆಶ್ಚರ್ಯವಲ್ಲ. ಆದ್ದರಿಂದ, ದೊಡ್ಡ ದೊಡ್ಡ ಸುಂದರವಾದ ಕಟ್ಟಡಗಳು ಕೂಡ ಬಿದ್ದು ಹೋಗಹತ್ತಿದುವು. ಈ ಮಾತು Lord Lytton ಇವರ ಲಕ್ಷ್ಯದಲ್ಲಿ ೧೮೭೮ ನೆಯ ಇಸವಿಯಲ್ಲಿ ಮೊದಲಿಗೆ ಬಂದಿತು. ಅವರು ಹೇಳಿದ್ದೇನೆಂದರೆ “The preservation of the National Antiquities and works of art ought not to be exclusively left to the charge of Local Governments, which may not always be alive to the importance of such a duty. Lieut. Governors who combine aesthetic culture with administrative energy are not likely to be very common and I can not conceive any claim upon the administrative initiative and financial resources of the supreme Government more essentially imperial than this." ಸಾರಾಂಶ:- ರಾಷ್ಟ್ರೀಯ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಕಾರ್ಯವನ್ನು ಸ್ಥಾನಿಕ ಸರಕಾರಗಳ ಕಡೆಗೆ ಒಪ್ಪಿಸುವುದು ಯೋಗ್ಯವಾಗಲಾರದು. ಯಾಕಂದರೆ, ಅವರಿಗೆ ಅವುಗಳ ಮಹತ್ವವು ಚನ್ನಾಗಿ ಲಕ್ಷ್ಯದಲ್ಲಿ ಬರುವ ಸಂಭವವಿಲ್ಲ. ಸೌಂದರ್ಯದ ಅಭಿರುಚಿ ರಾಜಕಾರಸ್ಥಾನದ ಶಕ್ತಿ ಇವೆರಡೂ ಉಳ್ಳ ಲೆಫ್ಟಿನೆಂಟ ಗವರ್ನರ ಜನರು ತೀರಕಡಿಮೆ. ಇದಲ್ಲದೆ, ಇದು ವರಿಷ್ಟ ಸರಕಾರದವರು ತಾವೇ ಕೈಕೊಂಡು ತಮ್ಮ ಹಣವನ್ನು ವೆಚ್ಚ ಮಾಡಿ ಮಾಡತಕ್ಕ ವಿಷಯವು. ಇದರ ಪರಿಣಾಮವೇನಾಯಿತಂದರೆ- ಮುಂದೆ ಕ್ಯುರೇಟರ್ ಆಫ್ ಏನ್ಸೆಂಟ ಮೊನ್ಯೂಮೆಂಟ್ಸ್(Curator of ancient Monuments) ಎಂಬ ಅಧಿಕಾರಿಯು ನೇಮಿಸಲ್ಪಡಬೇಕೆಂದು ಹಿಂದುಸ್ಥಾನ ಸರಕಾರದವರು ಇಂಗ್ಲಂಡಿಗೆ ಸೂಚಿಸಿದರು. ಅದಕ್ಕೆ, ಆಗ ಸೆಕ್ರಿಟರಿ ಆಫ್ ಸ್ಟೇಟ್‌ (Secretary of State) ಇವರು ಒಪ್ಪಲಿಲ್ಲ. ಮುಂದೆ, ೧೮೯೧ನೆಯ ಇಸವಿಯಲ್ಲಿ ಮಾತ್ರ ಮೇಜರ್ ಕೋಲ್‌ (Major