ಪುಟ:ಕರ್ನಾಟಕ ಗತವೈಭವ.djvu/೧೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೪೧
೧ನೆಯ ಪೂರಕ ಪ್ರಕರಣ – ಕರ್ನಾಟಕ-ಇತಿಹಾಸ-ಸಂಶೋಧನ

ಯಕ್ಕೆ ೧೧೪ ಪ್ಲೇಟಗಳುಳ್ಳ ಒಂದು ರಿಪೋರ್ಟು ಮುದ್ರಿತವಾಗಿದೆ. ೧೮೯೭ನೆಯ ಇಸವಿಯಲ್ಲಿ ಮಿ. ಕೌಝನ್ಸ್‌ (Mr. Cousens) ಇವರು ಮುಂಬಯಿ ಇಲಾಖೆಯಲ್ಲಿಯ “ಮೊನ್ಯುಮಂಟಲ್ ಆ್ಯಂಟಿಕ್ವಟೀಜ್ ” (Monumental Antiquities) ಎಂಬ ಹೊಸ ಪಟ್ಟಿಯನ್ನು ತಯಾರಿಸಿದ್ದಾರೆ. ಅವರು ಇದೇ ವಿಷಯವಾಗಿ ಹೊಸದೊಂದು ಪುಸ್ತಕವನ್ನು ಬರೆಯ ಹತ್ತಿದ್ದಾರೆ. ಅಜಂತಾ ಗವಿಯಲ್ಲಿಯ ಚಿತ್ರಗಳು ೧೮೬ನೆಯ ಇಸವಿಯಲ್ಲಿ ಸುಟ್ಟು ಹೋದ ಸಂಗತಿಯನ್ನು ನಾವು ಮೇಲೆ ತಿಳಿಸಿರುವೆವಷ್ಟೆ, ಆದರೆ ಮುಂದೆ ಪುನಃ ಜಾನ್ ಗ್ರಿಫಿಥ್ (John Griffith) ಎಂಬವರು ಪುನಃ ಅವುಗಳನ್ನು ಪರಿಶ್ರಮಪಟ್ಟು ತೆಗೆದುಕೊಂಡಿದ್ದರು. ಆದರೆ ನಮ್ಮ ಕಡುತರವಾದ ದುರ್ದೈವದಿಂದ ಅವರು ತಗೆದುಕೊಂಡ ೩೩೪ ಚಿತ್ರಗಳಲ್ಲಿ ೧೭೫ ಚಿಕ್ಕ ದೊಡ್ಡ ಚಿತ್ರಗಳು ನಾಶವಾದವು, ಇಲ್ಲವೆ ಕೆಟ್ಟು ಹೋದವು. ಇತ್ತ ಕಡೆಗೆ ಮಿ. ಗ್ರಿಫಿಥ್ (Mr. Griffith) ಇವರು ೧೫೯ ಪ್ಲೇಟುಗಳುಳ್ಳ ಆ ವಿಷಯಕವಾದ ಒಂದು ಪುಸ್ತಕವನ್ನು ಮುದ್ರಿಸಿದ್ದಾರೆ.

೧೮೭೨ನೆಯ ಇಸವಿಯಲ್ಲಿ ಇಂಡಿಯನ್ ಆಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯನ್ನು ಡಾ. ಬರ್ಗೆಸ್ (Dr. Burgess) ಇವರು ಪ್ರಾರಂಭಮಾಡುವ ಪೂರ್ವದಲ್ಲಿ ಬಹುಶಃ ಲಿಪಿಗಳನ್ನು ಎಲ್ಲ ರಾಯಲ್ ಏಶಿಯಾಟಿಕ್ ಸೊಸೈಟಿಯ ಮುಂಬಯಿ ಶಾಖೆ (Bombay Branch of the Royal Asiatic Society)ಯವರೇ ಮುದ್ರಿಸಿರುತ್ತಾರೆಂದು ಹೇಳಿರುವವಷ್ಟೆ. ಅವರು ಮುದ್ರಿಸಿರುವ ಲೇಖಗಳ ವಿವರವನ್ನು ಇಲ್ಲಿ ಕೊಡುವೆವು. ಮುಂಬಯಿ ಇಲಾಖೆಯಲ್ಲಿ ಎಲ್ಲಕ್ಕೂ ಪುರಾತನ ಲಿಪಿಗಳೆಂದರೆ ಅಶೋಕನ ಜುನಾಗಡದಲ್ಲಿಯ ಲಿಪಿಗಳು (ಕ್ರಿ.ಶ.ಪೂ. ೨೪೫). ಅವು ಒಂದನೇ ಸಂಪುಟದಲ್ಲಿ ಮುದ್ರಿತವಾಗಿವೆ. ಅನಂತರದ ಲಿಪಿಗಳೆಂದರೆ, ಗುಡ್ಡದ ಗವಿಯೊಳಗಿನ ಲಿಪಿಗಳು. ಈ ಲಿಪಿಗಳು ಶಾತವಾಹನ ಅಥವಾ ಶಾಲಿವಾಹನ ಮನೆತನಕ್ಕೆ ಸಂಬಂಧಿಸಿರುತ್ತವೆ. ಇವು ನಾಸಿಕ, ಕಾರ್ಲೆ, ನಾನಘಾಟ, ಕಾನ್ಹೆರಿ, ಭಾಜಾ, ಜುನ್ನರ ಕೂಡ ಮುಂತಾದ ಸ್ಥಳಗಳಲ್ಲಿ ದೊರೆಯುತ್ತವೆ. ಅವುಗಳೊಳಗೆ ಎಲ್ಲಕ್ಕೂ ಪುರಾತನ ಲಿಪಿಗಳೆಂದರೆ ನಾಸಿಕದ ಲಿಪಿಗಳು, ಈ ಲಿಪಿಗಳಲ್ಲಿ ಶಾತವಾಹನ ಮನೆತನಕ್ಕೆ ಸೇರಿದ ಕೃಷ್ಣರಾಜನ ಹೆಸರು ದೊರೆಯುತ್ತದೆ. ಕಾನ್ಹೆರಿ, ನಾಸಿಕ, ಭಾಜಾ