ಪುಟ:ಕರ್ನಾಟಕ ಗತವೈಭವ.djvu/೧೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೪೯
೧ನೆಯ ಪೂರಕ ಪ್ರಕರಣ - ಕರ್ನಾಟಕ-ಇತಿಹಾಸ-ಸಂಶೋಧನ

ಮುಂಬಯಿ ಇಲಾಖೆಯಲ್ಲಿಯ ಕನ್ನಡ ರಾಜಮನೆತನಗಳು (The Dynasties of the Kanarese District of the Bombay Presidency). (೨) ಡಾ. ಭಾಂಡಾರಕರ ಇವರು ೧೮೮೪ನೆಯ ಇಸವಿಯಲ್ಲಿ ಬರೆದ ದಕ್ಷಿಣಾ ಪಥದ ಪ್ರಾಚೀನ ಇತಿಹಾಸ (The early history of the Dekkan). (೩) ಸಿವೆಲ್‌ರ 'ಮರೆತುಹೋದ ಸಾಮ್ರಾಜ್ಯ' (Forgotten Empire by Sewell), (೪) ಬಿ. ಸೂರ್ಯನಾರಾಯಣ ರಾಯರ “ಎಂದೂ ಮರೆಯದ ಸಾಮ್ರಾಜ್ಯ” (The Never to be Forgotten Empire by B. Surya-Narayanrao). (೫) ರಾ. ವೆಂಕಟ ರಂಗೋ ಕಟ್ಟಿಯವರು ಭಾಷಾಂತರಿಸಿದ "ಕರ್ನಾಟಕ ಗ್ಯಾಝಟಿಯರ್.” (೬) "ಮೈಸೂರು ಗ್ಯಾಝಿಟೀರ್” (Mysore Gazitteer) ಇವೇ ಮೊದಲಾದುವುಗಳು.

ಕರ್ನಾಟಕದ ಹಳೆಯ ಇತಿಹಾಸವನ್ನು ಇತಿಹಾಸ ದೃಷ್ಟಿಯಿಂದ ಅಭಿಮಾನ ಪೂರ್ವಕವಾಗಿ ಡಾ. ಭಾಂಡಾರಕರರು ಮೊದಲು ಬರೆದರು. ಡಾ. ಫ್ಲೀಟರು ಕೇವಲ ಕನ್ನಡ ಪ್ರಾಂತದ ಇತಿಹಾಸವನ್ನು ಬರೆದಿದ್ದರೂ, ಅವರು ಅದನ್ನು ಶಿಲಾಲಿಪಿಗಳ ದೃಷ್ಟಿಯಿಂದ ಮಾತ್ರವೇ ಶೋಧಿಸಿರುವರು. ಅವರು ತಮ್ಮ ಇತಿಹಾಸದಲ್ಲಿ ಒಟ್ಟು ಸುಮಾರು ೨೦೦ ಶಿಲಾಲಿಪಿಗಳಿಂದ ಹೊರಡುವ ಇತಿಹಾಸವನ್ನು ಸಂಗ್ರಹಿಸಿದ್ದಾರೆ. ಡಾ. ಫ್ಲೀಟರು ನಮ್ಮ ಇತಿಹಾಸಕ್ಕೆ ಮಾಡಿದ ಉಪಕಾರವನ್ನು ಅಷ್ಟಿಷ್ಟೆಂದು ಹೇಳಲಳವಲ್ಲ. ಇವರು ಈ ಪ್ರಾಂತದ ಕಮಿಶನರಾಗಿದ್ದರು. ಇವರು ತಾವು ಹೋದ ಹೋದಲ್ಲಿ ಕಂಡ ಶಿಲಾಲಿಪಿಗಳ ಮುದ್ರೆಗಳನ್ನು ತೆಗೆದು ಕೊಂಡಿರುವರು. ಅವರು ಈ ಇತಿಹಾಸವನ್ನು ಬರೆದು ಮೂರು ತಪಗಳಾಗಿ ಹೋದರೂ ಇಂದಿನವರೆಗೂ ಯಾವ ಕನ್ನಡಿಗನೂ ಅತ್ತ ಸಾಭಿಮಾನದಿಂದ ದೃಷ್ಟಿ ತಿರುಗಿಸಲಿಲ್ಲವೆಂಬುದಕ್ಕಿಂತ ಹೆಚ್ಚು ಕರುಣಾಸ್ಪದವಾದ ಸಂಗತಿಯು ಮತ್ತಾವದಿದೆ?

ಡಾ. ಭಾಂಡಾರಕರರವರು ಬರೆದ ಪುಸ್ತಕವು ಕನ್ನಡಿಗರಿಗೆ ಬಹಳ ಬೆಲೆಯುಳ್ಳದ್ದಾಗಿದೆ. ಆದರೆ ಡಾ.ರವರು ಕರ್ನಾಟಕದ ಅಭಿಮಾನದಿಂದ ಅದನ್ನು ಬರೆಯಲಿಕ್ಕೆ ಪ್ರವರ್ತಿಸಿಲ್ಲವೆಂಬುದನ್ನು ಮರೆಯಕೂಡದು. ಈ ಕಾರಣಕ್ಕೋಸ್ಕರವೇ, ಆ ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೆ ಓದಿದರೂ ಅದು ಕರ್ನಾಟ