- (೩) ಕನ್ನಡ ಕೋಗಿಲೆಯ ಸಂಪಾದಕರಾದ ಎಮ್. ತಿಮ್ಮಪ್ಪಯ್ಯ.
ಚೌಪದಿ||ಮನೆ ಮುರಿಯಲಡಿಗೆಟ್ಟು ವಾತದಿಂ ನೋಂದು |
ತನುಜರಾ ಕವತಿಣಿಕ ವಿತ್ತದಿಂ ನವೆದು||
ಕೊನೆಗೀಗ ನುಡಿಯಲಾರದೆ ಬಂದ ಕಫದಿಂ |
ಮನಗುದಿವಳಕಟ! ಕನ್ನಡಮಾತೆ, ನೋಡಿ ||
ಕರ್ನಾಟಕ ಗತವೈಭವ ಈ ಪುಸ್ತಕವನ್ನು ಕರ್ನಾಟಕ ಇತಿಹಾಸಮಂಡಲದ ೧ನೆಯ ಗ್ರಂಥವನ್ನಾಗಿ ಮ|ರಾ|ವೆಂಕಟೇಶ ಭೀಮರಾವ ಅವರ್ಗಳ್ ಬಿ.ಎ., ಎಲ್.ಎಲ್.ಬಿ ಇವರು ರಚಿಸಿದರು. ಈ ಮಹನೀಯರೆ ಮಂಡಲದ ಅಧ್ಯಕ್ಷರು. ಆದಿಯಲ್ಲಿ ಬಾಳಾಚಾರ್ಯ ಸಕ್ಕರಿ (ಶಾಂತಕವಿ) ಇವರಿಂದ ರಚಿತವಾದ ಭರ್ತೃಹರಿಯ ವೈರಾಗ್ಯ ಶತಕದಿಂದ ಪರಿವರ್ತಿಸಿದ ೧ ಶ್ಲೋಕವೂ ಕಡೆ ಯಲ್ಲಿ ಕರ್ನಾಟಕ ಪರಮಹಂಸರಾದ ಶ್ರೀ ವಿದ್ಯಾರಣ್ಯರ ಇಷ್ಟ ದೇವತಾ ಸ್ತುತಿಯ ಕಾಲನ ಪ್ರಾರ್ಥನೆಯೂ ಇವೆ. ಆಕರ್ಷಕ ಮತ್ತು ಅವಶ್ಯವಾದ ಅನೇಕ ಚಿತ್ರಗಳಿಂದ ಕೂಡಿದೆ. ಅವುಗಳಲ್ಲಿ ಪರಮೇಶ್ವರ ಶ್ರೀ ಸತ್ಯಾಶ್ರಯ, ಪುಲಿಕೇಶಿ ಮಹಾರಾಜ, ವೇರೂಳಿನ ಪ್ರಸಿದ್ಧ ಕೈಲಾಸ ದೇವಾಲಯ ಈ ಚಿತ್ರಗಳನ್ನೂ ಇವುಗಳ ವಿಷಯ ವಿಮರ್ಶೆಯನ್ನೂ ಈಗಿನ ಸ್ಥಿತಿಯನ್ನೂ ಎಣಿಸಿ ನಮಗೇನೋ ಕಣ್ಣಿನಲ್ಲಿ ನೀರು ತುಂಬಿತು. ಈ ಗ್ರಂಥದಲ್ಲಿ ನಮ್ಮ ಎಂದರೆ ವಿಜಯನಗರದ ಹಿಂದಿನ ವೈಭವವೂ, ಆ ವಿಷಯವಾಗಿ ಆಗ ಇಲ್ಲಿಗೆ ಬಂದಿದ್ದ ಹುಯಿನ್‌ತ್ಸಾಂಗ ಮುಂತಾದ ಪರದೇಶೀಯ ಪ್ರವಾಶಿಗಳ ಸುವರ್ಣಾಭಿಪ್ರಾಯಗಳೂ ನಮ್ಮ ವಾಙ್ಮಯ ವೈಭವವೂ ಧಾರ್ಮಿಕಾದಿ ಎಲ್ಲ ವಿಷಯವೂ ಅನನ್ಯ ಸಾಧಾರಣವಿತ್ತೆಂಬುದೂ ಸರಸವಾಗಿ ಮನಮುಟ್ಟುವಂತೆ ವರ್ಣಿಸೋಣಾಗಿದೆ.
ಪುಲಕೇಶಿ ವಿಕ್ರಮ ಮೊದಲಾದವರ ಸೌಜನ್ಯವನ್ನೂ ಸಾಮರ್ಥ್ಯವನ್ನೂ ಮನಗಂಡರೆ ಈಗಿನ ಧೊರೆಗಳೂ ತಳಮಳಿಸುವಂತಿತ್ತು. ಎಂದ ಮೇಲೆ ಆಗಿನ ನಾಡೆಲ್ಲ ಅನಾಗರಿಕತೆಯ ಕಾಡಾಗಿತ್ತೆಂದು ಈಗಿನ ಬಡನಾಡಿನ ಕಣ್ಣಿಗೆ ಮಣ್ಣೆರಚುವದೂ, ಅದಕ್ಕೆ ನಾವು ಕಣ್ಣೆರೆವುದೂ ಹೇಗೆ ನ್ಯಾಯವೊ ದೇವರೇ ಬಲ್ಲ. ಕನ್ನಡ ದೇಶದ ರಕ್ತವು ಒಂದೇ ಒಂದು ಬೊಟ್ಟಾದರೂ ಮೈಯಲ್ಲಿ ಹರಿಯುತ್ತಿದ್ದರೆ ಅವನು ಈ ಗ್ರಂಥವನ್ನು ಓದಲೇ ಬೇಕು, ಆದರೆ ಹೋದ ವೈಭವವು ಇನ್ನು