ಪುಟ:ಕರ್ನಾಟಕ ಗತವೈಭವ.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೫೩
೭ ನೆಯು ಪ್ರಕರಣ – ಬಾದಾಮಿಯ ಚಾಲುಕ್ಯರು

ರಣ ನೋಡಿರಿ), ಪ್ರತಿಯೊಬ್ಬ ಕನ್ನಡಿಗನು ಅದನ್ನು ತನ್ನದೆಯ ಮೇಲೆ ಬರೆದಿಟ್ಟು ಕೊಳ್ಳಬೇಕು. ಈ ಪುಲಿಕೇಶಿಯಂಥ ವೈಭವ ಸಂಪನ್ನರಾದ ಅರಸರು ಹಿಂದುಸ್ಟಾನದ ಇತಿಹಾಸದಲ್ಲಿ ಬೆರಳಿನಿಂದೆಣಿಸುವಷ್ಟು ಸಹ ಸಿಕ್ಕುವುದು ಅಪೂರ್ವ. ಇವನ ವರ್ಚಸ್ಸು ಇರಾಣ ಮುಂತಾದ ಪರರಾಷ್ಟ್ರಗಳ ಮೇಲೆಯೂ ಇತ್ತೆಂದು ಗೊತ್ತಾಗುತ್ತದೆ. ಆರಬೀ ಭಾಷೆಯ ಒಂದು ಪುಸ್ತಕದಲ್ಲಿ ಈತನು ಇರಾಣದ ಅರಸನಾದ 'ಖುಸ್ತು'ವಿನ ಕಡೆಗೆ ತನ್ನ ರಾಯಭಾರಿಯನ್ನು ಕಳುಹಿಸಿದ್ದನೆಂದು ಉಲ್ಲೇಖವಿದೆ. ಮೇಲಾಗಿ, ಇರಾಣದ ರಾಯಭಾರಿಗಳು ಇವನ ಒಡೋಲಗಕ್ಕೆ ಬಂದಿದ್ದರೆಂಬುದು 'ಅಜಂತೆ' ಯಲ್ಲಿಯ ಗವಿಯೊಳಗಿನ ಒಂದು ಚಿತ್ರದಿಂದ ಗೊತ್ತಾಗುತ್ತದೆ. ಈ ಪುಲಿಕೇಶಿಯ ಪ್ರತ್ಯಕ್ಷ ದರ್ಶನವು ಆ ಚಿತ್ರದಲ್ಲಿ ಕನ್ನಡಿಗರಿಗೆ ಆಗುವಂತಿದೆ. ಕನ್ನಡಿಗರ ದುರ್ದೈವದಿಂದ, ಅದರಲ್ಲಿಯ ಪುಲಿಕೇಶಿಯ ಮುಖವನ್ನೇ ಯಾವನೊಬ್ಬ ದುಷ್ಟನು ಕೆಡಿಸಿರುವನು (ಚಿತ್ರವನ್ನು ನೋಡಿರಿ). ಆದರೆ ಅದೇ ಅಜಂತೆಯಲ್ಲಿರುವ ಮತ್ತೊಂದು ಗವಿಯಲ್ಲಿ ಒಂದು 'ರಾಜವಿಲಾಸ' ನೌಕೆಯ ಚಿತ್ರವಿದ್ದು, ಅದರಲ್ಲಿಯ ಮೂರ್ತಿಯು ಪುಲಿಕೇಶಿಯದೇ ಇರಬಹುದೆಂದು ನನಗೆ ತೋರುತ್ತದೆ. ಇರಲಿ! ಮುಖ್ಯವಾಗಿ ಹೇಳುವುದೇನೆಂದರೆ, ಈ ಪುಲಿಕೇಶಿಯ ಹೆಸರನ್ನು ಯಾವ ಕನ್ನಡಿಗನೂ ಎಂದಿಗೂ ಮರೆಯಕೂಡದು. ಇವನ ಪರಾಕ್ರಮದ ಮತ್ತು ರಾಜನೀತಿಯ ಕೃತ್ಯಗಳನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ! ಇವನ ಕಾಲದಲ್ಲಿ ಇವನ ಹಿರೆಯ ಸೊಸೆಯಾದ ವಿಜಯಭಟ್ಟಾರಿಕಾ ಎಂಬವಳು ಸಾವಂತವಾಡಿಯನ್ನಾಳಿದಳು. ಪುಲಿಕೇಶಿಯ ಮಗನ ಆಳಿಕೆಯಲ್ಲಿ ದಕ್ಷಿಣ ಗುಜರಾಥದಲ್ಲಿ ಚಾಲುಕ್ಯರದೊಂದು ಶಾಖೆಯು ಸ್ಥಾಪಿಸಲ್ಪಟ್ಟಿತು, ಇವನ ಮಗ, ಮೊಮ್ಮಗ, ಮರಿಮಕ್ಕಳು, ಇವರೆಲ್ಲ ಶೂರರಾದ ಅರಸರೇ. ಅವರು, ಈ ವಂಶದ ಹುಟ್ಟುಹಗೆಗಳಾದ ಪಲ್ಲವರೊಡನೆಯೂ, ಚೋಳ, ಪಾಂಡ್ಯ, ಹೈಹಯ ಮುಂತಾದವರೊಡನೆಯೂ ಕಲಿತನದಿಂದ ಕಾದಿ, ಚಾಲುಕ್ಯ ವಂಶದ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿರುವರು. ಆದರೆ, ಇತಿಹಾಸವನ್ನು ಕೊಡುವುದು ನಮ್ಮ ಮುಖ್ಯ ಉದ್ದೇಶವಿರದೆ, ವೈಭವವನ್ನು ಕಣ್ಣೆದುರಿಗೆ ತಂದಿಡುವುದೇ ನಮ್ಮ ಮುಖ್ಯ ಮನೋಗತವಿರುವುದರಿಂದ, ನಾವು ಹೆಚ್ಚಿನ ಸಂಗತಿಗಳನ್ನು ಇಲ್ಲಿ ಹೇಳಿರುವುದಿಲ್ಲ. ಈ ಮಹಾಪುಲಿಕೇಶಿಯಿಂದ ನಾಲ್ಕನೆಯ ತಲೆಯವನಾದ ೨ನೆಯ ವಿಕ್ರಮಾದಿತ್ಯನು