ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಕರ್ನಾಟಕ ಗತವೈಭವ

ತನ್ನ ವಂಶಕ್ಕೆ ಪೂರ್ವದಿಂದಲೂ ಶತ್ರುಗಳಾದ ಪಲ್ಲವರೊಡನೆ ಹೋರಾಡಿ, ಮಾಣಿಕ್ಯದ ರಾಶಿಯನ್ನೂ, ಗಜ-ತುರಗಗಳನ್ನೂ, ಯಥೇಚ್ಚವಾಗಿ ತೆಗೆದುಕೊಂಡು ಅವರ ರಾಜಧಾನಿಯಾದ ಕಂಚಿಯನ್ನು ಹೊಕ್ಕ ಸಂಗತಿಯು ಮಾತ್ರ ನೆನಪಿನಲ್ಲಿಡ ತಕ್ಕುದಾಗಿದೆ. ಏಕೆಂದರೆ, ಈ ವಿಕ್ರಮಾದಿತ್ಯನು ಮಿಕ್ಕವರಂತೆ, ಆ ಪಟ್ಟಣವನ್ನು ಹಾಳುಮಾಡದೆ, ದೇವ ಬ್ರಾಹ್ಮಣರಿಗೂ ಬಡಬಗ್ಗರಿಗೂ ಅನೇಕ ದಾನ ಮುಂತಾದವುಗಳನ್ನು ಮಾಡಿ, ಅಲ್ಲಿಯ ರಾಜಸಿಂಹೇಶ್ವರ ಮುಂತಾದ ದೇವಾಲಯಗಳನ್ನು ಉದ್ದರಿಸಿದನು. ಇವನ ಹೆಂಡತಿಯಾದ ಲೋಕಮಹಾದೇವಿಯೆಂಬವಳು ಈತನ ಈ ಜಯದ ಸೂಚನಾರ್ಥವಾಗಿ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷನ ಅತಿ ವಿಸ್ತಾರವಾದ ದೇವಾಲಯವನ್ನು (೬೫೬, ಶಕ) ಕಟ್ಟಿಸಿದಳು, ಇವಳು ಆ ಕಾಲದಲ್ಲಿ 'ಕಿಸುವೊಳಲ್' ಎಂದರೆ ಪಟ್ಟದಕಲ್ಲಿನಲ್ಲಿ ಆಳುತ್ತಿದ್ದಳು. ಆದರೆ, ಇವನ ಮಗನ ಕಾಲಕ್ಕೆ, ಏಳೆಂಟು ತಲೆಗಳಿಂದ ಅವಿಚ್ಛಿನ್ನವಾಗಿ ನಡೆಯುತ್ತ ಕೈವಶವಾಗಿದ್ದ ರಾಜ್ಯಲಕ್ಷಿಯು ಈ ವಂಶವನ್ನು ಬಿಟ್ಟು ಹೋದಳು. ರಾಷ್ಟ್ರಕೂಟದ ಅರಸನಾದ ದಂತಿದುರ್ಗನೆಂಬವನು ಇವನ ರಾಜ್ಯವನ್ನು ಸೆಳೆದುಕೊಂಡು, ರಾಷ್ಟ್ರಕೂಟವಂಶ ವನ್ನು ಸ್ಥಾಪಿಸಿದನು.
ಬಗೆಯಾಗಿ, ಕರ್ನಾಟಕವನ್ನಲ್ಲ ಒಂದೇ ಛತ್ರದ ಕೆಳಗೆ ತಂದು ಕರ್ನಾಟಕದ ಕೀರ್ತಿಯನ್ನು ದಶ ದಿಕ್ಕುಗಳಲ್ಲಿ ಪಸರಿಸುವಂತೆ ಮಾಡಿದ ಈ ಚಾಲುಕ್ಯರು ಕೆಲವು ಕಾಲ ಇತಿಹಾಸದಿಂದ ಮರೆಯಾದರು. ಆದರೆ, ಚಾಲುಕ್ಯರು ಮುಳುಗಿದರೂ, ಕರ್ನಾಟಕ ವೈಭವವು ಮುಳುಗಲಿಲ್ಲ, ಏಕೆಂದರೆ, ಇವರ ತರುವಾಯ ಬಂದ ಅರಸರೂ ಕರ್ನಾಟಕಸ್ಥರೇ. ಅವರೂ ಏಕಛತ್ರಾಧಿಪತಿಗಳೇ. ಇರಲಿ. ಅವರ ಇತಿಹಾಸವನ್ನು ಮುಂದಿನ ಪ್ರಕರಣದಲ್ಲಿ ಕೊಡುವೆವು, ಈ ಚಾಲುಕ್ಯ ವಂಶದ ೨ನೆಯ ಪುಲಿಕೇಶಿ, ಅವನ ಸೊಸೆಯಾದ 'ವಿಜಯಭಟ್ಟಾರಿಕೆ' ಮತ್ತು ೨ನೆಯ ವಿಕ್ರಮಾದಿತ್ಯನ ಹೆಂಡತಿಯಾದ 'ಲೋಕಮಹಾದೇವಿ' ಮುಂತಾದವರು ಕನ್ನಡಿಗರ ಸ್ಮೃತಿಪಥದಿಂದ ಮರೆಯಾಗುವುದೆಂತು ! ಹ್ಯುವೆನ್‌ತ್ಸಂಗನು ವರ್ಣಿ ಸಿದ ಕನ್ನಡಿಗರ ಸ್ವಭಾವವೂ, ಶೌರ್ಯವೂ, ಕನ್ನಡಿಗರಲ್ಲಿದ್ದ ಅವರ ವಿಷಯ ದಲ್ಲಿಯ ಅನಾದರವನ್ನು ಓಡಿಸಲಾರವೇ! ಬಾದಾಮಿಯ ಗವಿಗಳೂ, ಅಜಂತ ಯಲ್ಲಿಯ ಅತ್ಯಂತ ಸುಂದರವಾದ ಚಿತ್ರಗಳೂ ಈ ಚಾಲುಕ್ಯ ವಂಶದೀಪಕರನ್ನು