ಪುಟ:ಕವಿಯ ಸೋಲು.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಂಡಿಗೆ ಮೊರೆ
ಚಂಡಿ! ನೀ ಗುಣವಂತೆ ಬರಿದೆ ದೂರಿದನವನು,
ಮುದಿಗೂಬೆ ಹೇಳಿದುದೆ ಲೋಕಮೆಚ್ಚಿಕೆಯಾಯ್ತು
ಕಂಡ ಕಂಡವರೆಲ್ಲ ಚಂಡಿತನವೆನಲಾಯು,
ನಿನ್ನಂಧ ಸುಗುಣಿಗಳು ಈಗೆಲ್ಲಿ ದೊರೆಯುವರು !
ವಿಧಿಯ ಕಾರ್ಪಣ್ಯವಂ ಸೃಷ್ಟಿ ವೈರಸ್ಯವಂ
ಈ ಯುಗದ ಹೆಂಗಳಂ ಬಣ್ಣಿಸಲುಮಳವಲ್ಲ.
ಬಾರೆಂದೊಡಂ ಇಲ್ಲ ಹೋಗೆಂದೊಡಂ ಇಲ್ಲ
ಬೇಕೆಂದೊಡಂ ಬೇಡೆಂದೊಡಂ ಇಲ್ಲ
ಕಪ್ಪಕಾಣಿಕೆಗಿಲ್ಲ ನುಡಿಗೆ ಮೊದಲಿಲ್ಲ
ಕೋಪತಾಪಕುಮಿಲ್ಲ ಬೇಡಿಕೆಗೆ ಮುನ್ನಿಲ್ಲ
ಏನೇನ ಸೇಳ್ಕೊಡಂ ಅವರಲ್ಲಿ ನಿಷ್ಫಲಂ
ಅವರ ಕೈವಿಡಿದರ್ಗೆ ಇಹದಿ ನಾಯಕ ನರಕ.
ಜಗದ ಮೊಂಡುಗಳೆಲ್ಲ ಒಳಸಂಚು ಮಾಡಿಹರೂ
ಹಿರಿಯ ಗುರು ಬೋಧಕಳು ಆವ ದೇವತೆಯಿಹಳೊ
ಶಿಷ್ಯಯರು ಇಂತಿರಲು ಮಾತಾಯಿ ಎಂತಿಹಳೊ
ಇದ್ದಿದ್ದು ಆಕೆಗೇನಪರಾಧ ಮಾಡಿದೆವೋ !
ನಿನ್ನ ಗುಣವರಿತರಿತು ವಿಪರೀತಮಂ ನುಡಿದು
ಬಾಳಲಾರದೆ ತಾನು ಕೋಪದಿಂ ಶಾಪಮಂ
ಕೊಟ್ಟ ತಾಪಸನನುದ್ಧಾಲಕನ ಬುದ್ಧಿಯಂ
ದುರ್ಬುದ್ಧಿಯಂ ಜರೆದು ನಿನ್ನ ಮನ್ನಿಸರಮ್ಮ !
ಸೂಯ್ಯೋದಯಕೆ ಚನ್ನಕೋವಳೆಯು ನಗಲೇನೊ
ಚಂದ್ರೋದಯಕೆ ಚನ್ನ ತಾವರೆಯು ನಗಲೇನೆ
ನಿಯಮ ಪಲ್ಲಟವಾಗಿ ಬೇರೊಂದು ವಿಧಿಯಾಗಿ

೬೭