ಪುಟ:ಕಾಮದ ಗುಟ್ಟು.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

vii “ನಹಿಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ' ಎಂಬ ಗೀತಾ ವಚನವನ್ನು ಆದರಿಸುವವರು ನಮ್ಮಲ್ಲಿ ಬಹುಜನರು ಸಿಕ್ಕಬಹುದು; ಆದರೆ ಅದನ್ನು ಆಚಾರದಲ್ಲಿಳಿಸಿದವರೆಷ್ಟೋ ! ಸರ್ವಾ೦ಗಸುಂದರ ಜ್ಞಾನಕ್ಕಾಗಿ ಎಲ್ಲ ವಿಷಯಗಳನ್ನು ಒಂದೇ ವಿಧದ ಪ್ರೇಮದಿಂದ ವ್ಯಾಸಂಗ ಮಾಡುವವರು ಸಿಗುವದು ಅಪರೂಪ. ಮನುಷ್ಯನು ಅಜ್ಞಾನದಿಂದಲೋ, ಸ್ವಾರ್ಥದಿಂದ ಲೋ, ಜ್ಞಾನದಲ್ಲಿಯೇ ಕೀಳು ಮೇಲುಗಳೆಂಬ ಎರಡು ಭೇದಗಳನ್ನು ಕಲ್ಪಿಸಿ. ಕೊಂಡಿದ್ದಾನೆ. ಈ ಕಲ್ಪನಾ ಕಾರ್ಯಗಳಲ್ಲಿ ಧರ್ಮ ಮತ್ತು ದೇವರ ವಿಷ ಯದಲ್ಲಿರುವ ಮೂಢಭಾವನೆಗಳೂ ಅವನಿಗೆ ಬಹಳಮಟ್ಟಿಗೆ ಸಹಾಯ ಮಾಡಿವೆ. ಪವಿತ್ರವಾದ ಜ್ಞಾನದಲ್ಲಿ ಪಂಗಡಗಳನ್ನು ಹುಟ್ಟಿಸುವ ದೇವ ರಾಗಲಿ ಧರ್ಮವಾಗಲಿ ಕಲವು ಆತ್ಮಪ್ರತಿಷ್ಠಿತರ ಕುಯುಕ್ತಿಗಳೇ ಹೊರತು ಬೇರೇನೂ ಅಲ್ಲ. ಅವರ ಸಿದ್ಧಾಂತಗಳಿಗೆ ವಿವೇಕದ ಆಧಾರದ ಅಗತ್ಯವಿಲ್ಲ, ಇಂಥ ಮೂಧಭಾವಿಕರ ವಾತಾವರಣದಲ್ಲಿ ಬೆಳೆದ ಜನರಿಗೆ ಈ ಪುಸ್ತಕದ ಹೆಸರನ್ನು ಕೇಳಿದ ಕೂಡಲೆ ಅಸಹ್ಯವೆನಿಸಬಹುದು. ಮತ್ತು ನಮ್ಮನ್ನು ನಾಲ್ಕು ಜನರೆದುರಿಗೆ ನೀತಿಗೇಡಿಗಳಿಂದೂ ಸಮಾಜನಾಶಕರೆಂದೂ ಬೈಯ ಬಹುದು. ಆದರೆ ಹಾಗೆ ಬೈಯುವವರಿಗೆ ಕಾಮವೇ ಇಲ್ಲವೆಂದಾಗಲಿ, ಆ ವಿಷಯದಲ್ಲಿ ಅವರು ಪೂರ್ಣ ಸುಖಿಗಳೆಂದಾಗಲಿ ಸರ್ವಥಾ ತಿಳಿಯಬಾರದು. ಏಕೆಂದರೆ 'ತಮಗೆ ತಿಳಿಯಲಿ, ತಿಳಿಯದಿರಲಿ; ಇ೦ಥ ಕಲವು ವಿಷಯಗ ಳನ್ನು ಬೈಯಲೇಬೇಕು ಮತ್ತು ಇಂಥ ಕೆಲವು ವಿಷಯಗಳನ್ನು ಹೊಗಳಲೇ ಬೇಕು' ಎಂದು ಪೂರ್ವನಿಶ್ಚಿತ ಭಾವನೆಗಳು ಕೆಲವು ಅವರಲ್ಲಿರುವವು. ಆ ಭಾವನೆಗಳ ಪರಿಣಾಮವೇ ಅವರ ವಿವೇಕರಹಿತ ಮಾತುಗಳು. ಆದರೆ ಇಂಥ ಸ್ವಾರ್ಥ ಸಾಧುಗಳು ಸಾಮಾನ್ಯವಾಗಿ ಗುಟ್ಟಾಗಿ ಇಂಥ. ಪುಸ್ತಕಗಳನ್ನು ಓದದೆ ಇರುವದಿಲ್ಲ. ಏಕೆಂದರೆ ಒ೦ದೆಡೆಗೆ ದೇವರು, ಧರ್ಮ, ಹಿರಿಯರುಗಳ ಅಂಜಿಕೆಯು ಅವರನ್ನು ಹಿಂದೆಳೆಯುತ್ತದೆ. ಇನ್ನೊ೦ ದೆಡೆಗೆ ಅವರ ಜೀವನವನ್ನೇ ದುಃಖಮಯವಾಗಿ ಮಾಡುವ, ಕಾಮದ ವಿಷಯ ದಲ್ಲಿಯ ಕೆಲವು ಪ್ರಮೇಯಗಳು ಅವರನ್ನು ಕಾಡುತ್ತಿರುವವು. ಅಲ್ಲದೆ ಮಾನುಷ ಸಹಜವಾದ ' ಅದರಲ್ಲೇನಿರಬಹುದು' ಎಂಬ ದಿಕೆಯ ಅವರನ್ನು ಪೀಡಿಸುತ್ತಿರುವದು. ಅಂತೂ ಕಾಮಶಾಸ್ತ್ರವನ್ನು ಓದುವದರ - 4