ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೨೬) ಮಲಗುವ ಮುಂಚೆ ಲಿಂಗದ ಮಣಿಯ ಮೇಲೆ ಸುಮಾರು ೪-೫ ಅಂಗುಲ ಎತ್ತರದಿಂದ ಸಣ್ಣಧಾರೆಯಾಗಿ ಒಂದೆರಡು ತಂಬಿಗೆ ತಣ್ಣೀರನ್ನು ಹೊಯ್ದು ಕೊಳ್ಳಬೇಕು. (೨೭) ಮಲಗುವಾಗ ತನ್ನ ಧೈಯವನ್ನು ಜ್ಞಾಪಿಸಿ ಕೊಂಡು, ಅದನ್ನು ಗಳಿಸುವ ಕಾರ್ಯದಲ್ಲಿ ತಾನು ಮಾಡಿದ ತಪ್ಪುಗಳನ್ನೆಲ್ಲ ವಿವೇಚಿಸಿ, ಇನ್ನೊಂದು ಸಲ ಅ೦ಥ ತಪ್ಪುಗಳನ್ನು ಮಾಡುವದಿಲ್ಲವೆಂದು ನಿರ್ಧರಿಸಿ, ಧೈಯಸಾಧನೆಯಲ್ಲಿ ಗುರುಹಸ್ತವು, ತನ್ನ ತಲೆಯ ಮೇಲಿದೆ ಯೆಂದು ಧ್ಯಾನಿಸುತ್ತೆ ನಿದ್ದೆ ಹೋಗಬೇಕು. (೨೮) ಒಟ್ಟಿಗೆ ಹೇಳಬೇಕಾ ದರೆ :- ಕೇವಲ ಬುದ್ಧಿಶಕ್ತಿಯ ವೈಶಿಷ್ಟ್ಯದಿಂದಲೇ ಇತರ ಪ್ರಾಣಿಗಳ ಗಿಂತ ಶ್ರೇಷ್ಠನೆನಿಸಿದ ಮಾನವನು, ಮನಸ್ಸು ಮಾಡಿದರೆ ಸಾಧ್ಯವಾಗದ್ದು ಯಾವದೂ ಇಲ್ಲ, ಆಗಿ ಹೋದದ್ದಕ್ಕೆ ಅಳುತ್ತ ಕೂಡುವದಕ್ಕಿಂತ ಈಗಿನಿಂ ದಲೇ ಉಚ್ಛ ಜೀವನವನ್ನಿಡಿಸುವದು ಮೇಲು. ತನ್ನ ಗುಣಕಾರ್ಯ ಗಳಿಂದ ನಾಲ್ಕು ಜನರನ್ನು ಮಾರುವ ವ್ಯಕ್ತಿಯು ತಾನಾಗಿಯೇ ಬಿಟ್ಟೆ ನೆಂದು ನಿಶ್ಚಯಿಸಿದರೆ ಸರ್ವವೂ ಸಾಧ್ಯ, ಕೃತ್ರಿಮ ಮೈಥುನದಿಂದ ಹುಟ್ಟಿದ ರೋಗಗಳೇನಾದರೂ ಇದ್ದರೆ ಔಷಧಗಳಿಗಾಗಿ ಈ ಪುಸ್ತಕದ ಕೊನೆ ಭಾಗದಲ್ಲಿ ನೋಡಿರಿ, ೮ ನೇ ಪ್ರಶ್ನೆ :- ಸ್ವ ಲನವು ಒಂದು ರೋಗವೇ ? ಅದನ್ನು ನಿಲ್ಲಿಸುವದು ಹೇಗೆ ? ಉತ್ತರ:-ಸ್ವಪ್ನ ಸ್ವಲನದಲ್ಲಿ ರೋಗಜವೆಂದೂ, ಸಹಜವೆಂದೂ ಎರಡು ಭೇದ, ರೋಗಜವಾಗಿರುವ ಸೋಲನವು ಕೇವಲ ಸ್ವಪ್ನದಲ್ಲಿ ಆಗು ತಿರುವದಿಲ್ಲ. ಬೇರೆ ಸಮಯದಲ್ಲಿಯೂ ಆಗಬಹುದು. ಸಹಜವೆಂದರೆ ದೇಹದ ಅಂಗಗಳೆಲ್ಲ ಆರೋಗ್ಯ ಸ್ಥಿತಿಯಲ್ಲಿ ಇರುವವು. ಅದರೆ ಆಹಾರ ವಿಹಾರಗಳಲ್ಲಿಯ ದೋಷದಿಂದ ಅಯೋಗ್ಯರೀತಿಯಲ್ಲಿ, ಅಕಾಲದಲ್ಲಿ ಸ್ವಲನ ವಾಗುವದಷ್ಟೆ. ಇದರಲ್ಲಿ ಆಹಾರವಿಹಾರಗಳನ್ನು ಕ್ರಮಪಡಿಸಿಕೊಂಡು ಬಿಟ್ಟರೆ ಸ್ವಪ್ನ ಸ್ವಲನವೂ ನಿಲ್ಲುವದು. ರೋಗಜದಲ್ಲಿ ಕೆಲವು ವೀರ್ಯಾ೦ಗ ಗಳೇ ದೋಷಯುಕ್ತವಾಗಿರುವವು. ಅವುಗಳಿಗೆ ಆಹಾರವಿಹಾರ ಕ್ರಮಗಳ ಲ್ಲದೆ ಕೆಲವುದಿನ ಔಷಧವನ್ನೂ ಕೊಡಬೇಕಾಗುವದು. ಸಹಜ ಸೋಲನದಲ್ಲಿ