________________
ಯರ ಹಾಗೂ ಭಾವೀ ಸಂತತಿಯ ಸರ್ವಾ೦ಗಸುಂದರ ಅಭಿವೃದ್ಧಿಗೆ ಸಹಾಯ ಮಾಡುವಿರಾ ? ೧೧ ನೇ ಪ್ರಶ್ನೆ :-ಗರ್ಭಧಾರಣವಾಗುವದೆಂದರೇನು ? ಉತ್ತರ:-ಹಿಂದೆ ಹೇಳಿದಂತೆ ಪುರುಷರಲ್ಲಿ ವೀರ್ಯವು ಸಿದ್ದವಾಗಿ ವೀರ್ಯಾಶಯದಲ್ಲಿ ಸಂಗ್ರಹವಾಗುತ್ತಿರುತ್ತದೆ. ಸ್ತ್ರೀಯರಲ್ಲಿ ಡಿ೦ಭಾಣುವು ಗರ್ಭಕೋಶದಲ್ಲಿ ಕಾದು ಕೊಂಡಿರುತ್ತದೆ. ಆಗ ಸ್ತ್ರೀ ಪುರುಷರಿಬ್ಬರೂ ಕಾಮೋತ್ತೇಜಿತರಾಗಿ ಸಂಭೋಗಾಸಕ್ತರಾದರೆ ಪುರುಷನ ವೀರ್ಯದಲ್ಲಿಯ ಜೀವಾಣುವೊ೦ದು ಗರ್ಭಕೋಶವನ್ನು ಹೊಕ್ಕು ಅಲ್ಲಿರುವ ಡಿಂಭಾಣುವಿನಲ್ಲಿ ಸೇರಿಕೊಳ್ಳುತ್ತದೆ. ಭೋಗ ಸಮಯದಲ್ಲಿ ಸ್ರವಿಸಿದ ಒಂದು ಸಲದ ವೀರ್ಯ ದಲ್ಲಿ ಇಂಥಹ ಸಹಸ್ರಾರು ಜೀವಾಣುಗಳಿರುವವು. ಅವುಗಳಲ್ಲಿ ಪ್ರತಿಯೊಂದು ಸಂತತಿಯನ್ನು ಹುಟ್ಟಿಸುವಷ್ಟು ಶಕ್ತಿಯುಳ್ಳದ್ದಾಗಿರುತ್ತದೆ. ಆದರೆ ಆ ಗರ್ಭಾಶಯವನ್ನು ಹೋಗುವ ಸೌಲಭ್ಯವು, ಒಂದಕೊ ಅಪರೂಪವಾಗಿ ಎರಡಕ್ಕೂ ಲಭಿಸುತ್ತದೆ. ಹೀಗೆ ಜೀವಾಣುವು ಡಿ೦ಭಾಣುವನ್ನು ಸೇರುವ ದಕ್ಕೆ ಗರ್ಭಧಾರಣವೆಂದು ಹೆಸರು. ಅವೆರಡೂ ಸೇರಿ ಒ೦ದಾಗಿ, ಹಿ೦ದ ಡಿಂಭಾಣುವಿಗೆ ಹೇಳಿದಂತೆಯೆ: ದ್ವಿ ಧಾಭವನ ಕ್ರಮದಿಂದ ಬೆಳೆಯುತ್ತ ಹೋಗಿ, ಗರ್ಭವು ಗರ್ಭಾಶಯದ ಒಂದು ಗೋಡೆಗೆ ಅಂಟಿಕೊಳ್ಳುವದು. ೧೨ ನೇ ಪ್ರಶ್ನೆ :- ಮಕ್ಕಳಾಗದಿರುವದಕ್ಕೆ ಕಾರಣವೇನು ? ಉತ್ತರ:-ಮಕ್ಕಳಾಗದಿರುವದಕ್ಕೆ (೧) ಸ್ಮಿಯ ಕಾಮಾಂಗಗಳ ದೋಷ, (೨) ಪುರುಷನ ಕಾಮಾಂಗಗಳ ದೋಷ, (೩) ಸಂಭೋಗ ಕ್ರಮದಲ್ಲಿಯ ದೋಷ; ಹೀಗೆ ಮೂರು ಕಾರಣಗಳಿರುವವಾದರೂ, ಸಾಮಾನ್ಯ ವಾಗಿ ನೂರರಲ್ಲಿ ೯೫ ಪಾಲು ಗಂಡಸೇ ಹೆಂಗಸಿನ ಬಂಜೆತನಕ್ಕೆ ಕಾರಣ ವೆಂದು ಹೇಳಬಹುದು. ಸ್ತ್ರೀಯ ಕಾಮಾಂಗಗಳ ದೋಷ ಮತ್ತು ಸಂಭೋಗ ಕ್ರಮದಲ್ಲಿಯ ದೋಷದಿಂದ ಗರ್ಭಧಾರಣಕ್ಕೆ ಖಂಡಿತವಾಗಿ ತಡೆಯಾಗುವ ದೆಂದು ವಿಜ್ಞಾನಶಾಸ್ತ್ರವು ಒಪ್ಪುವದಿಲ್ಲ. ಎಲ್ಲಾದರೂ ಒಂದೆರಡು ವ್ಯಕ್ತಿ ಗಳಲ್ಲಿ ತಡೆಯಾದರೂ ಆಗಬಹುದು.