ಪುಟ:ಕಾಮದ ಗುಟ್ಟು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಷ್ಟು ಒಳ್ಳೇದು. ಇನ್ನು ಸಂಭೋಗದಲ್ಲಿ ತಾವು ಮಿತಿಯಿಂದ ಇರು ವೆವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಚಾರಗ ಇನ್ನು ಜ್ಞಾಪಕದಲ್ಲಿಡಬೇಕು:-(೧) ಸ೦ಭೋಗವಾದಮೇಲಾಗಲಿ, ಮರು ದಿನ ಬೆಳಗಿನಲ್ಲಾಗಲಿ ಆಯಾಸ ನಿತ್ರಾಣಗಳಿರಬಾರದು. (೨) ಸಂಭೋಗ ವಾದ ಕೂಡಲೆ ನಿದ್ರೆಯು ಚನ್ನಾಗಿ ಇಂದು ಬೆಳಿಗ್ಗೆ ಮನಸ್ಸು ತುಂಬ ಉಲ್ಲಾಸದಿಂದಿರಬೇಕು. (೩) ಮರುದಿನ ಬೆಳಿಗ್ಗೆ ಮಲಶುದ್ಧಿಯು ಚನ್ನಾಗಿ ಆಗಬೇಕಲ್ಲದೆ ಜೀರ್ಣಶಕ್ತಿಯು ಕುಂದಬಾರದು. (೪) ಲಿ೦ಗ, ಸೊಂಟ, ಯೋನಿ ಮೊದಲಾದ ಭಾಗಗಳಲ್ಲಿ ನೋವು ಕೊಲೆಗಳೇಳಬಾರದು. (೫) ಮೂತ್ರವು ಕೆಂಪಾಗಬಾರದು. (೬) ಸಂಭೋಗದಲ್ಲಿ ವೀರ್ಯವು ಯಥೇ ಡ್ರೈಯಾಗಿ (೧ ರಿಂದ ೨ ಡ್ರಾಮು) ಪತನವಾಗಬೇಕಲ್ಲದೆ, ಆ ಸಮಯದಲ್ಲಿ ಅಂಡಗಳು ನೋಯಬಾರದು. (೭) ಸಂಭೋಗದಲ್ಲಿ ಮೈಮರೆಯುವಷ್ಟು ಇಬ್ಬರಿಗೂ ಆನಂದವಾಗಬೇಕು. (೮) ವೀರ್ಯ ಪತನವಾದ ಕೂಡಲೆ ಶಿಶ್ನವು ಮುದುಡಿಕೊಳ್ಳಬಾರದು. ಸ್ವಲ್ಪ ಹೊತ್ತಾದರೂ ಉದ್ರಿಕ್ತ ಸ್ಥಿತಿಯಲ್ಲೇ ಇರಬೇಕು, ೨೧ ನೇ ಪ್ರಶ್ನೆ:-ಬ್ರಹ್ಮಚರ್ಯೆಗೂ ದೇಹ ಮನಸ್ಸುಗಳ ಆರೋಗ್ಯಕ್ಕೂ ಸಂಬಂಧವೇನು ? ಮದುವೆಯಾದವರು ಬ್ರಹ್ಮ ಚರ್ಯೆಯಿಂದ ಇರಲಾಗದೋ ? ಉತ್ತರ:- ಬ್ರಹ್ಮಚಾರೀತು ಶಿಲೇನ ಸದಾ ಚ ರತಿ ಬ್ರಹ್ಮಣಿ ಎಂಬ ಶಾಸ್ತ್ರದಂತೆ ಈ ಬ್ರಹ್ಮಚರ್ಯೆ'ಯ ಶಬ್ದಾರ್ಥವು 'ಬ್ರಹ್ಮನಲ್ಲಿ ತಿರುಗು ವದು' ಎಂದಾಗುವದು. ಪ್ರತಿಯೊಂದು ಜೀವವೂ ಬ್ರಹ್ಮನ (ವಿಶ್ವ ತತ್ವದ) ಒಂದಂಶವು, ಅ೦ಶದಲ್ಲಿ ಪೂರ್ಣದ ಎಲ್ಲ ಗುಣಗಳಿವೆ. ಆದರೆ ಅಂಶಕ್ಕೆ ಅದರ ಪರಿವೆಯಿಲ್ಲ. ಆದ್ದರಿಂದ ತನ್ನ ಪವಿತ್ರತೆಯು ಅಥವಾ ಹೊಣೆಗಾ ರಿಕೆಯ ಎಚ್ಚರವೂ ಅದಕ್ಕಿಲ್ಲ. ಈ ವಿಷಯವನ್ನು ಪ್ರತಿಜೀವಿಯ ಅಭ್ಯಾ ಸದಿಂದ ತಿಳಿದು ಧ್ಯಾನಿಸಿ ಮನಗಂಡಿತೆಂದರೆ ಬ್ರಹ್ಮನಲ್ಲಿಯೂ ತನ್ನಲ್ಲಿಯೂ ಇರುವ ಸಾಮರಸ್ಯವು ಅದಕ್ಕೆ ಗೊತ್ತಾಗುವದು. ನಾವು ಮಾಡುವ ಅಯೋಗ್ಯ ತಾಮಸಿಕ ಕಾರ್ಯಗಳೆಲ್ಲ ಅಂಶಭಾವನೆಯಿಂದಲೇ ಹುಟ್ಟು ಇವೆ. ಪೂರ್ಣತ್ವವನ್ನು ಸಾಕ್ಷಾತ್ಕರಿಸಿಕೊಂಡ ಬುದ್ದಿಯಲ್ಲಿ ಅಂಶಭಾವನೆ