ಪುಟ:ಕಾಮದ ಗುಟ್ಟು.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಡಿಸುತ್ತಿರುವವರೆಗೆ ಅಂದರೆ ಸುಮಾರು ಒಂದು ವರ್ಷದವರೆಗೆ ಸಾಧ್ಯ ವಿದ್ದಷ್ಟು ಹೆಚ್ಚು ದಿನಗಳಿಗೊಮ್ಮೆ ( ಅಪರೂಪವಾಗಿ) ಸಂಭೋಗಿಸಬೇಕು. ಆದರೂ ಒಂದು ಮಗುವು ಹು ಕನಿಮ್ಮ ಮುಂದೆ ಮೂರು ವರ್ಷಗಳವರೆಗೆ ಗರ್ಭವು ನಿಲ್ಲದಂತೆ ಎಚ್ಚರವನ್ನು ತೆಗೆದು ಕೊಳ್ಳಬೇಕು. - ೨೪ ನೇ ಪ್ರಶ್ನೆ:-ಗರ್ಭವು ನಿಲ್ಲದಂತೆ ಏನು ಉಪಾಯ ಮಾಡ ಬೇಕು ? ಹಾಗೆ ಮಾಡಿದ ಉಪಾಯಗಳು, ಸಂಭೋಗಾಭಿಲಾಷೆ ಯನ್ನು ಹೆಚ್ಚಿಸಿ, ಸ್ತ್ರೀಯರ ವ್ಯಭಿಚಾರವನ್ನೂ ಬೆಳೆಸಿ ಸಮಾಜದ ನೀತಿಯನ್ನು ಕೆಡಿಸಲಿಕ್ಕಿಲ್ಲವೇ? ಉತ್ತರ:- ಈ ಪ್ರಶ್ನೆ ದ. ಇತ್ತಿಚೆ ಬಹುಜನರ ತಲೆಯನ್ನು ಕಾಡು ತಿದೆ. ಸಂತಾನ ನಿರೋಧ : (Contraception) ದ ಅವಶ್ಯಕತೆಯು ಬಹುಜನರಿಗೆ ಅನಿಸುತ್ತಿದ್ದರೂ ಆ ಉವಾಯದ ದುರುಪಯೋಗವಾದೀತೆಂಬ ಭಯದಿಂದ ಅದರ ಪ್ರಚಾರವೂ ಆಗಬೇಕಾದಷ್ಟು ಆಗುತ್ತಿಲ್ಲ. ಆದರೆ ಇಲ್ಲಿ ಸಹಜವಾಗಿ ತಿಳಿಯಬಹುದಾದ ಮಾತೆಂದರೆ, ಯಾವದಾದರೊಂದು ಉಪಾ ಯದ ದುರುಪಯೋಗ ಮಾಡುವವರ ತಪ್ಪೇ ಹೊರತು, ಉಪಾಯದ ತಪ್ಪೆಂದೂ ಆಗಲಾರದು. ಸಂತಾನ ಸಂಯಮವನ್ನು ಪ್ರತಿವಾದಿಸುವವರು ಅದರ ಸದುಪಯೋಗದಿಂದ ಆಗುವ ಸತ್ಪರಿಣಾಮವನ್ನು ಒಪ್ಪುತ್ತಾರೆ. ಆದರೆ ಅವರಿಗೆ ಮನುಷ್ಯನ ಸದ್ದು ಣಗಳ ವಿಷಯದಲ್ಲಿ ನಂಬಿಗೆಯಿಲ್ಲ. ಅಥವಾ ಸಂತಾನ ಸಂಯಮಕ್ಕೆ ಬೇಕಾಗಿರುವ ಮೂಲಕಾರಣಗಳನ್ನೂ ಸಮಾಜದಿಂದ ಕಿತ್ತೊಗೆಯಲು ಅವರು ಯತ್ನಿಸುವದಿಲ್ಲ. ರೋಗದ ಕಾರಣ ನನ್ನಾದರೂ ನಿರ್ನಾಮಗೊಳಿಸಬೇಕು. ಇಲ್ಲವೇ ರೋಗ ಬಂದಮೇಲೆ ಆದಕ್ಕೆ ಯೋಗ್ಯ ಚಿಕಿತ್ಸೆಯನ್ನಾದರೂ ಮಾಡಬೇಕು. ಇವೆರಡೂ ಇಲ್ಲದ ಉಪದೇಶಕರ ಮಾತು ಹೆಚ್ಚು ದಿನ ನಡೆಯಲಾರದು.

  • ಈ ವಿಷಯವನ್ನೂ, ಇದಕ್ಕೆ ಬ೦ದ ಆಕ್ಷೇಪಣೆಗಳ ಸಮಾ ಧಾನಗಳನ್ನೂ, ಸ೦ತಾನ ನಿರೋಧ ದ ಉಪಾಯಗಳನ್ನೂ ತಿಳಕೊಳ್ಳಬೇಕಾದರೆ ಪಂಡಿತ ತಾರಾ ನಾ ಥರು ಬರೆದ “ಸಂ ತಾನಸ೦ಯುನ” ವನ್ನು ಓದಿ.