ವಿಷಯಕ್ಕೆ ಹೋಗು

ಪುಟ:ಕಾಮದ ಗುಟ್ಟು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೂರ್ಣ ನಿಲ್ಲಿಸುವದು ಯೋಗ್ಯನಂತರ ಚುಂಬನಾಲಿಂಗನಗಳನ್ನೂ ತುಂಬ ಕಾಮವನ್ನು ಉದ್ರೇಕಿಸುವಷ್ಟು ಮಾಡಬಾರದು. ಅಥವಾ ಚುಂಬನಾಲಿಂಗ ನಗಳ ಅಧಿಕಾರವನ್ನು ಆಮೇಲೆ ಹೀಗೇ ಕೊಟ್ಟು ಬಿಡುವದು ಒಳ್ಳೇದು. ಏಕೆಂದರೆ ಸ್ತ್ರೀಯರ ಮನದಲ್ಲಿ ಎಷ್ಟು ಚಿಂತೆಗಳಿದ್ದರೂ ಪ್ರೇಮಿಯಾದ ಗಂಡನ ಸಾಮಾನ್ಯದಿಂದಲೂ, ಚುಂಬನದಿಂದಲೂ, ಅವುಗಳನ್ನು ಮರೆತುಬಿಡು ವಳು. ಆದ್ದರಿ೦ದ ಚುಂಬನಾಲಿಂಗನಗಳಿಗೆ ಪೂರ್ಣ ತಡೆಯನ್ನು ಹಾಕುವ ದಗತ್ಯವಿಲ್ಲ. ಸಂಭೋಗಾಭಿಲಾಷೆಯನ್ನು ತಡೆಯುವುದಕ್ಕೆ ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವದೇ ಒಳ್ಳೆ ಉಪಾಯ. ೨೩ ನೇ ಪ್ರಶ್ನೆ:-ಹೆರಿಗೆಯಾಗಿ (ಹಡೆದಮೇಲೆ) ಎಷ್ಟು ದಿನಗ ಳಾದಮೇಲೆ ಸಂಭೋಗವನ್ನು ಪುನಃ ಕೈ ಕೊಳ್ಳಬಹುದು ? ಉತ್ತರ:- ಬಸುರಾಗುವದೂ, ಹೆರಿಗೆಯಾಗುವದೂ ಹೆಂಗಸರಲ್ಲಿ ರೋಗ ಚಿನ್ನವಲ್ಲ. ಅದು ಅವರ ದೇಹಧರ್ಮ. ಈ ದೃಷ್ಟಿಯಿಂದ ನೋಡಿದರೆ ಹೆರಿಗೆಯಾಗಿ ೧೫-೨೦ ದಿನಗಳಲ್ಲಿ ಗರ್ಭಕೋಶವು ತನ್ನ ಪೂರ್ವಸ್ಥಿತಿಗೆ ಬ೦ದುಬಿಟ್ಟಿರುತ್ತದೆ; ಮತ್ತು ಹೆರಿಗೆಯು ಸುಖವಾಗಿ ಆಗಿದ್ದರೆ, ಅವಳು ಗರ್ಭಧರಿಸುವುದಕ್ಕಿಂತ ಮೊದಲು ಇದ್ದಂತೆಯೇ ಈ ಸಮಯದಲ್ಲಿಯೂ ಆರೋಗ್ಯದಿಂದಲೇ ಇರುವಳು. ಆದರೆ ೯ ತಿಂಗಳವರೆಗೆ ೭-೮ ಪೌಂಡುಗಳ ವರೆಗೆ ಬೆಳೆದ ಮಗುವಿನ ಭಾರವನ್ನು ಹೊತ್ತ, ತನ್ನ ರಕ್ತಸಾರದಿಂದಲೆ ಅದನ್ನು ಪೋಷಿಸಿದ ಗರ್ಭಾಶಯಕ್ಕೂ, ಪ್ರಸವ ಸಮಯದಲ್ಲಿ ಅತ್ಯಂತ ಹಿಗ್ಗಿ ಬೇನೆಗಳನ್ನು ಸಹಿಸಿದ ಅವಳ ಯೋನಿ ಮತ್ತು ಶ್ರೇಣಿಯ ಅಸ್ತಿ (Pelvic bones) ಗಳಿಗೂ, ಮೊದಲಿನ ಶಕ್ತಿಯನ್ನು ಸಂಪಾದಿಸಲಿಕ್ಕೆ ತುಂಬ ವಿಶ್ರಾಂತಿಯು ಅತ್ಯಗತ್ಯ. ಅಲ್ಲದೆ ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಆಹಾರವಾಗಿರುವದರಿ೦ದ, ಗರ್ಭಾಶಯದಲ್ಲಿ ಇನ್ನೊಂದು ಮಗುವು ಉತ್ಪನ್ನವಾಗಿಬಿಟ್ಟರೆ ಅದರ ಪೋಷಣೆಯ ಕಡೆಗೆ ದೇಹದ ಲಕ್ಷವು ಹೋಗಿ ಹುಟ್ಟಿದ ಮಗುವಿಗೆ ಹಾಲು ಸಾಕಷ್ಟು ಸಿಕ್ಕದು. ಸಿಕ್ಕ ಹಾಲು ತಕ್ಕಷ್ಟು ಬಲ್ಯವೂ ಆಗಿರುವದಿಲ್ಲ. ಆದ್ದರಿಂದ ಹೆರಿಗೆಯಾಗಿ ಕನಿಷ್ಟ ೬-೭ ತಿಂಗಳವರೆಗಾದರೂ ಸಂಭೋಗವನ್ನು ಮಾಡಬಾರದು. ಮಗುವಿಗೆ ಮೊಲೆ