________________
ಮು ನ್ನು ಡಿ ಈ ಪುಸ್ತಕದ ಗುಣವನ್ನು ಬಣ್ಣಿಸಲಿಕ್ಕಲ್ಲ ಈ ಬರೆಹ; ಆದರ ಅವಶ್ಯ ಕತೆಯನ್ನು ತೋರಿಸುವದಕ್ಕಾಗಿ ಮಾತ್ರ ಇದನ್ನು ಬರೆಯಬೇಕಾಗಿದೆ. ಅರ್ಥವಿಲ್ಲದ, ಅಷ್ಟೇ ಅಲ್ಲ, ಅನರ್ಥವನ್ನು ಸಹ ಉಂಟುಮಾಡುವ ನೂರಾರು ರೀತಿನೀತಿಗಳು ಪ್ರತಿ ಸಮಾಜದಲ್ಲಿಯೂ ಇವೆ. ಅವುಗಳಲ್ಲೊಂದನ್ನು ಹೇಳ ಬೇಕಾದರೆ-ಜೀವಿತಕ್ಕ ಯಾವದರ ಜ್ಞಾನವು ಅತ್ಯವಶ್ಯಕವಾಗಿದೆಯೋ ಅದನ್ನು ಕೊಡುವದಕ್ಕೆ ಹಿಂಜರಿಯುವದು ಎಂದು ಹೇಳತಕ್ಕದ್ದು, ಜೀವಿಯ ಸಾಮಾನ್ಯ ಗುಣವೇ ಆಗಿರುವ ಆಹಾರ, ನಿದ್ರಾ, ಭಯ, ಮೈಥುನಗಳ ವಿವರ ವನ್ನೂ ಲಾಭ ನಷ್ಟಗಳನ್ನೂ ಉಪಯೋಗ ದುರುಪಯೋಗಗಳನ್ನೂ ಜೀವಿಗೆ ಚನ್ನಾಗಿ ಹೇಳಿಕೊಡುವದೇ ಮೊದಲನೆ ಧರ್ಮ ಎಂಬುದಕ್ಕೆ ಯಾವ ವಿವೇಕಿ ಯಾದರೂ ಒಪ್ಪದಿರಲಾರನು. ಹೀಗಿರುವಾಗ ಈ ಧರ್ಮವನ್ನು ನಡೆಸುವ ದಕ್ಕೆ ಹಿಂಜರಿಯುವದೆಂದರೇನು ? ಅದನ್ನು ತಪ್ಪಿಸುವದೇ ಅಧರ್ಮ, ಅನಾ ಡಿಗಳ ಹಾದಿ. ಇದನ್ನು ಬರೆದವರು ಕನ್ನಡಿಗರಿಗೊಂದು ದೊಡ್ಡ ಉಪಕಾರವನ್ನು ಮಾಡಿರುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿಯೂ ಈರೀತಿಯಿಂದ ಬರೆದ ಪುಸ್ತಕಗಳು ಅಪರೂಪವೇ ಎಂದೆನ್ನಬಹುದು. ಪ್ರಾಚೀನ ಅರ್ವಾಚೀನ ಶಾಸ್ತ್ರಗಳ ದೃಷ್ಟಿಯಿಂದಲೂ ಇವರು ವಿಷಯವನ್ನು ವಿವರಿಸಿದ್ದಾರೆ. ಬ್ರಹ್ಮ ಚರ್ಯವನ್ನೂ ಗಾರ್ಹಸ್ಥ ವನ್ನೂ ಸುಭಗವಾಗಿ ಸುಲಲಿತವಾಗಿ ಪೂರೈಸಿ ಮುಂದಿನ ಮೆಟ್ಟಿಲುಗಳನ್ನೇರಬೇಕೆಂದು ನಿಜವಾಗಿ ಇಚ್ಚಿಸುವವರಿಗೆ ಈ ಪುಸ್ತಕವು ಸುಲಭವಾದ ಪ್ರಶೋತ್ತರ ರತ್ನ ಮಾಲಿಕಯಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. -ತಾರಾನಾಥ,