ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಅರವತ್ತೆರಡನೇ ಅಧ್ಯಾಯ ಎಂಟುಕೋಟಿ ಯಕ್ಷರು, ಐವತ್ತುಕ್ತ ರಾಕ್ಷಸರು ಐವತ್ತು ಲಕ್ಷ ವಿದ ಧರರು, ಎರಡುಲಕ್ಷವೂ ಹತ್ತು ಸಾವಿರ ಅಪ್ಪರಸ್ತಿಯರು, ಅರವತ್ತು ಸಾವಿರ ಕಾಮಧೇನುಗಳು, ಎಂಟುಲಕ ಗರುಡರು, ಅರವತ್ತು ಸಾವಿರ ಅನರ್ಥ್ಯವಾದ ರತ್ನಗಳಂ ಕಂಡು ಬಂದ ಸಪ್ತಸಮುದ್ರಂಗಳು, ಅರ ವತ್ತುನಾಲ್ಕು ದಿವ್ಯನದಿಗಳು, ಅರವತ್ತು ಸಾವಿರ ವವತಂಗಳು ಎಂಟು ಸಾವಿರ ಅಷ್ಟದಿಗ್ಗಜಗಳು, ಇವರೇ ಮೊದಲಾದ ಸಕಲರೂ ಬಂದು ಸ್ಕೂತ್ರವಂ ಮಾಡಲು, ಪರಮೇಶ್ವರನು ಅವರೆಲ್ಲರನ್ನೂ ಕೃಪಾದೃಷ್ಟಿ ಯಿಂ ನೋಡಿ, ಪಾರ್ವತೀಸಮೇತನಾದ ಪರಮೇಶ್ವರನು ಛಂದೋಮಯ ವಾದ ರಥಾರೂಢನಾಗಿ ತ್ಯಲೋಕಕ್ಕಿಂತ ಅಧಿಕವಾಗಿ ಮನಸ್ಸಿಗೆ ಸಂ ತೋಷವಾದ ಕಾಶೀಪಟ್ಟಣವಂ ಶುಭಲಗ್ನದಲ್ಲಿ ಪ್ರವೇಶವಾದನು, ಕೇಳ್ಳೆ ಅಗಸ್ಯನೆ ? ಈ ಅಧ್ಯಾಯದ ಕಥೆಯನ್ನು ಶುಚಿತ್ವದಿಂ ಕೇಳಿದವರ್ಗೆ ಕೋಟಜನ್ಮದ ಪಾಪಹರ, ಈ ಕಥೆಯಂ ಕೇಳಿದವರು ಶಿವಸಾಯುಜ್ಯ ವಂ ವೊಂದುವರು, ಈ ಅಧ್ಯಾಯವಂ ಶಾದ ಕಾಲದಲ್ಲಿ ಪಠಿಸಲು ಪಿತೃ ಗಳಿಗೆ ಗಯಾಶಾದ್ಯದಿಂದಧಿಕತೃಪ್ತಿಕರ, ವೃಷಭಧ್ವಜಸ್ವಾಮಿಯವು ದೆ ಈ ಕಥೆಯಂ ಭಕ್ತಿಯಿಂದ ಒಂದು ವರುಷ ಪಠಿಸಲು ವುತರಿಲ್ಲದವ ರಿಗೆ ಸುಪುತ್ರ ರಹರು, ಎಂದು ಕುಮಾರಸ್ವಾಮಿ ಅಗಸ್ಯ೦ಗೆ ನಿರೂ ಪಿಸಿದರೆಂದು ವ್ಯಾಸರು ತನಿಗೆ ಹೇಳಿದರೆಂದು ಸೂತರು ಶೌನಕಾದಿಗಳಿಗೆ ವಿವರಿಸಿದಲ್ಲಿಗೆ ಅಧ್ಯಾಯ ೬.೦ | * * * * - ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರಪುರವರಾಧೀಶ ಶ್ರೀಕೃವ್ಯರಾಜವಡೆಯರವರು ಲೋಕೋ ಪಕಾರಾರ್ಥವಾಗಿ ಕರ್ನಾಟಭಾಷಯಿಂ ವಿರಚಿಸಿದ ಕೃತ್ಮರಾಜವಾಣಿ ವಿಲಾಸಮಬ ಸ್ಕಂದಪುರಾಣಕ್ಕೆ ಕಾಶೀಮಹಿಮಾರ್ಥದರ್ಪಣದಲ್ಲಿ ವಿಚ್ಛೇಶ್‌ರನು ಕಾಶೀಕ್ಷೇತ್ರ ಪ್ರವೇಶವಂಮಾರಿ ಮೊದಲು ತನ್ನಿಂದ ಕಳು ಹಿಸಿದ ಪರಿವಾರವೆಲ್ಲರಿಗೂ ಯಥಾಕ್ರಮವಾಗಿ ಮನ್ನಿಸಿದ ವಿವರಗಳಂ ಪೇಳಿರುವ ಅರವತ್ತೆರಡನೆ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗ ಇವಹಾ.