ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೪೭ ಸ್ನೇಶರನ ಸವಿಾಪದಲ್ಲಿ ಇರಿಸಿದ್ದು, ಆ ಸ್ವಾಮಿಯ ದರ್ಶನದಿಂದ ಕೋಟ ಲಿಂಗದರ್ಶನವಂ ಮಾಡಿದ ಫಲವುಂಟು ; ಬಡಖೆಯ ಮುಖದಿಂ ದ ಪಟ್ಟದ ಅಗ್ನಿ ಶ್ರದ ತುದು ನಾಳೇಶ್ವರನ ಸಮಿಾಪದಲ್ಲಿ ಇರಿಸಿದೆನು, ಆ ಸಮಯಂ ಪೂಜಿಸಲು ಇದನಿದಿಯಹುದು ಅಗ್ನಿ ಭಯವಿಲ್ಲ ; ಅಗಸ್ಯವಿಜಯವೆಂಬ ತೀರ್ಥದಿಂದ ತ್ರಿಲೋಚನೇಶರನ ತಂದು ತಿನಿ ಪೇಶರನ ಸಮಿಾಪದಲ್ಲಿ ಇರಿಸಿದೆನು, ಆ ಸ್ವಾಮಿಯ ಪೂಜೆಯಿಂದ ಮನೋರಥಸಿದ್ಧಿಯಹುದು ಅಮರಕಟಕವೆಂಬ ಕ್ಷೇತ್ರದಿಂದ ಓಂಕಾ ರೇಸ್ಸರನು ಬಂದು ಏಪ್ಪಲ ತೀರ್ಥದ ಸವಿಾಪದಲ್ಲಿ ಪ್ರಸನ್ನನಾದನು, ಈ ಕಾಶೀಗೆ ಗಂಗೆ ಬಾರದ ಮುನ್ನ ಸಕಲಲೋಕ ಜೀವರಿಗೆ ಮುಕ್ತಿ ಯಸಿತ್ತು ರಕ್ಷಿಸುವದಕ್ಕೋಸ್ಕರ ಓಂಕಾರೇಶ್ಚರನು ಪ್ರಸನ್ನನಾದನು, ಆ ಸಮಿಯ ಮಹಿಮೆಯನ್ನೂ ಸ್ವಾಮಿಯವರಲ್ಲದೆ ಮಿಕ್ಕಾದವರರಿಯ ರ; ಎಲೈ ಪಾರ್ವತೀವಾ ಣನಾಯಕನಾದ ಪರಮೇಶ್ವರನೆ ! ಈಗ ನಾನು ಹೇಳಿದ ಸಕಲ ಲಿಂಗಗಳು ತಮ್ಮ ತಮ್ಮ ಕ್ಷೇತ್ರಗಳ ಒಂದು ಅಂಶವನ್ನು ಇರಿಸಿ ಇಲ್ಲಿಗೆ ಬಂದವು, ಈ ಸ್ವಾಮಿಗಳ ಶಿಖರ ಕಲಶುಗಳ ದರ್ಶನ ಮಾ ತ್ರದಲ್ಲಿಯೇ ಮುಕ್ತಿಯನೀವ ನಾನಾರತ್ನ ಮಯವಾದ ಘನವಾದ ಉಪ್ಪರಿ ಗೆಗಳು ಈ ಲಿಂಗಗಳ ನಾಮಮಾತ್ರವು ಕೀರ್ತಿಸಲು ಸಹಸ್ರಜನ್ಯ ಪಾಪ ಪರ ; ಎಲೈ ಸ್ವಾಮಿ ! ಇನ್ನೂ ಈ ಸ್ಥಳದಲ್ಲಿ ಆರಾರಕರತಂದು ವಾಸ ದ ಮಾಡಿಸಬೇಕು, ಅದು ಬುದ್ದಿ ಗಲಿಸಿ ಆ ಕಾರವು ಆಗಲೇ ಆಯಿತೆಂದು ಚಿತ್ರದಲ್ಲಿ ಇರಲಿ, ಹೀಗೆಂದು ಬಿನ್ನಹವಮಾಡಿದ ಸುದಿಕೇಶ್ವರನ ವಾಕ್ಯ ಮಕೇಳಿ ಪರಮೇಶ್ವರನು ಸಂತೋಷಪಟ್ಟು ಇಂತೆಂದನು--ಎಲೈ ನದಿ ಹೇಶ್ವರ ? ಎನಗೆ ಆನಂದಕರಮಪ್ಪ ನೀವಾಡಿದ ಪ್ರಯೋಜನವು ಮಹಾ ಚನ್ನಾಯಿತು, ಇನ್ನೊಂದು ಪ್ರಯೋಜನ ಬೇಕು ಅದಾವುದೆನೆ- ಸವ ಸ್ವಶಕ್ತಿ ದೇವತೆಗಳು ಕರೆತಂದು ಅವರ ವಾಹನ ಪರಿವಾರ ಆಯುಧಂಗಳು ಸಹಾ ಪ್ರತಿ ಕೋಟೆ ಕೊತ್ತಲುಗಳಲ್ಲಿಯೂ ನಿವಾಸವ ಮಾಡಿ ಎಂದು ನಂದಿಕೇಶ್ವರಗೆ ನಿರೂಪಿಸಿ, ವರಮೇಶ್ವರನು ಪಾರ್ವತೀಸಮೇತನಾಗಿ ವಿವಕ್ಷೇತ್ರಕ್ಕೆ ಚಿತ್ತೈಸಲು, ನಂದಿಕೇಶ್ವರನು ಪರಮೇಶ್ವರನ ಆಜ್ಞೆ