ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ದಿಂದ ತರಿಸಿದ ಸಾಗವಾನಿ ತೊಲೆಗಳು ಮತ್ತು ಉಂಬರಗಾವದಿಂದ ಬಂದ ವೈರದ ಗಡ್ಡಿಗಳೂ ಬಿಸಿಲಿಗೆ ಬಿರುಕು ಬಿಡಹತ್ತಿದವು. ಈ ಕಟ್ಟಿಗೆಗಳ ಗುಣ ಹಾಗೂ ಅವುಗಳನ್ನು ಸಂಗ್ರಹಿಸುವಲ್ಲಿಯ ತೊಂದರೆಗಳು ಲಕ್ಷಣರಾಯರ ಲಕ್ಷಕ್ಕೆ ಬಂದಿರಲಿಲ್ಲ. ಕಬ್ಬಿಣವು ಕೈ ಹಿಡಿದಂತೆ ಕಟ್ಟಿಗೆಯ ಸಾಮಾನುಗಳನ್ನು ಮಾಡುವದರಲ್ಲಿಯೂ ತಮಗೆ ಯಶ ದೊರೆಯುವದೆಂಬ ರಾಯರ ಕಲ್ಪನೆ ಸತ್ಯ ಸೃಷ್ಟಿಗೆ ಇಳಿಯಲಿಲ್ಲ. ಆದುದರಿಂದ ಗಾಲಿಗಳನ್ನು ಮಾಡುವ ಕೆಲಸವನ್ನು ನಿರುಪಾಯರಾಗಿ ನಿಲ್ಲಿಸಬೇಕಾಯಿತು. ಯುದ್ದ ಸುರುವಾದಂದಿನಿಂದ ಕಾರ್ಖಾನೆಯ ಎಲ್ಲ ಸರಕುಗಳಿಗೂ ಪೆಟ್ಟು ಬಿದ್ದಿತು. ಇತ್ತೀಚೆಗೆ ರಂಟೆಗಳಿಗೆ ಬೇಕಾಗುವ ಉಕ್ಕನ್ನು ದೊಡ್ಡ ಪ್ರಮಾಣ ದಲ್ಲಿ ಜರನಿಯಿಂದ ತರಿಸುವ ಪರಿಪಾಠವನ್ನು ಹಾಕಿದ್ದಿತು, ಅದರಂತೆಯ ಹ್ಯಾಂಬರ್ಗದಿಂದ ಎರಡು ಹಡಗಗಳಲ್ಲಿ ತುಂಬಿಬರುವ ಕಬ್ಬಿಣದ ದಾರಿಯನ್ನೇ ಲಕ್ಷ ಣರಾಯರು ಕಾಯುತ್ತಿದ್ದರು, ಆದರೆ ಬ್ರಿಟಿಶರು ನಡುವೆಯೇ ಭೂಮಧ್ಯ ಸಮುದ್ರದಲ್ಲಿ ಆ ಹಡಗಗಳನ್ನು ಹಿಡಿದು ಜಪ್ತಮಾಡಿದರು. ಎಷ್ಟು ಪ್ರಯತ್ನಿ ನಿದರೂ ಆ ಕಬ್ಬಿಣವು ಕಾರಖಾನೆಗೆ ದೊರೆಯಲಿಲ್ಲ. ಆದುದರಿಂದ ಪೇಟೆಯಲ್ಲಿ ಯಾವ ಬೆಲೆಗೇ ಸಿಗಲಿ, ಆ ಕಬ್ಬಿಣದಿಂದಲೇ ಕಾರಖಾನೆ ನಡೆಸುವ ಪ್ರಸಂಗ ಬಂದಿತು. ಗಿರಾಕಿಗಳಿಗೆ ಶಕ್ಯವಿದ್ದಷ್ಟು ಕಡಿಮೆ ಬೆಲೆಯಲ್ಲಿ ಅವರಿಗೆ ಪೂರೈಸುವ ಧಾರಣಿಯಿಂದ ಸರಕು ಒದಗಿಸುವದೇ ಲಕ್ಷಣರಾಯರ ಮುಖ್ಯ ಸೂತ್ರವಿ ದ್ವಿತು.: ಲಾಭವನ್ನು ಕಡಿಮೆ ಇಟ್ಟು ಮಾಲಿನ ಪ್ರಸಾರವು ಹೆಚ್ಚಾಗುವಂತೆ ಮಾಡಿದರೆ ಹನಿ ಹನಿ ಕೂಡಿ ಹಳ್ಳವಾಗುವಂತೆ, ನಮಗೂ ಲಾಭವಾಗುವದಲ್ಲದೆ ಗಿರಾಕಿಗಳೂ ಸಂತುಷ್ಟರಾಗುವರು ಎಂಬ ಹೆನ್ರಿಫೋರನ ತತ್ವವನ್ನೇ ರಾಯರು ಪ್ರತಿಪಾದಿಸುತ್ತಿದ್ದರು. ಆದರೆ ಕಬ್ಬಿಣದ ಧಾರಣಿಯೇ ವಿಪರೀತ ಏರಿದಮೇಲೆ ಮಾಡುವದೇನು ? ಲಕ್ಷ್ಮಣರಾಯರು ತಮ್ಮ ರಂಟೆಯ ಬೆಲೆಯನ್ನು ೩೯ ರಿಂದ ೬೦ಕ್ಕೆ ಏರಿಸಬೇಕಾಯಿತು.

  • ಇನ್ನು ಬೀಡಿನ ಪ್ರಶ್ನೆ, ಅದಕ್ಕಾಗಿ ರೇಲ್ವೆಯ ಸ್ಟಾಪ್ ಹಾಗೂ ಕೈಗೆ ಸಿಕ್ಕಂತಹ ಬೀಡಿನ ಮುರುಕು ತುಂಡುಗಳನ್ನು ಕೂಡಿಸಹತ್ತಿದರು. ಇದರಿಂದ ಕಾರಖಾನೆಯ ಹಸಿವು ತುಂಬುವ ಬಗೆ ಹೇಗೆ ? ಕೊಲ್ಲಾಪುರದ ಕಿಲ್ಲೆಯಲ್ಲಿ ಅನೇಕ ಹಳೆಯ ತೋಫುಗಳು ಜಂಗುತಿನ್ನುತ್ತ ಬಿದ್ದಿವೆ ಎಂದು