ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು | “ಅರ್ಟ್ಟ ಸ್ಕೂಲಿನಲ್ಲಿ ಕಲಿತ ಚಿತ್ರಕಲೆಯೇ ಬೇರೆ, ಯಂತ್ರಗಳ ರಚನೆಯ ನಕಾಶವನ್ನು ತೆಗೆಯಲು ಬೇಕಾಗುವ ಜ್ಞಾನನೇ ಬೇರೆ. ಅಂದಮೇಲೆ ಇಂಜಿನಿಯರರಾಗುವ ವಿದ್ಯಾರ್ಥಿಗಳಿಗೆ ಡ್ರಾಯಿಂಗ ಕಲಿಸುವ ಕಾರವು ನಿಮ್ಮಿಂದ ಹೇಗೆ ಸಾಧ್ಯ” ಎಂದು ತಮ್ಮ ಸಂಶಯವನ್ನು ವ್ಯಕ್ತಪಡಿಸಿದರು. ಆಗ ಲಕ್ಷಣರಾಯರು “ತಾವು ನನಗೆ ಒಂದು ಕೆಲಸವನ್ನು ಕೊಟ್ಟು ಪ್ರತ್ಯಕ್ಷ ನನ್ನ ಪರೀಕ್ಷೆಯನ್ನೇ ತೆಗೆದುಕೊಳ್ಳಬಹುದು” ಎಂದು ಉಪಾಯವನ್ನು ಸೂಚಿಸಿದರು. ಮರುದಿನ ಲಕ್ಷಣರಾಯರು ಪ್ರಿನ್ಸಿಪಾಲರು ಕೊಟ್ಟ ಡ್ರಾಯಿಂಗಿನ ಪ್ರತಿಯನ್ನು ಅತ್ಯಂತ ವ್ಯವಸ್ಥಿತವಾಗಿ ಸಿದ್ದಪಡಿಸಿ, ಅವರ ಎದುರಿಗೆ ಇಡಲು ಇನ್ಸಿಪಾಲರಿಗೆ ಆನಂದವಾಗಿ ಬಹಳ ಚೆನ್ನಾಗಿದೆ. ತಿಂಗಳಿಗೆ ೩೫ ರೂ. ಸಂಬಳದ ಮೇಲೆ ನಿಮ್ಮನ್ನು ಡ್ರಾಯಿಂಗ ಮಾಸ್ತರರೆಂದು ನೇಮಿಸಿಕೊಳ್ಳುವೆ. ನೀವು ನಿಮ್ಮ ಕೆಲಸಕ್ಕೆ ಇಂದೇ ಪ್ರಾರಂಭಿಸಿರಿ” ಎಂದು ಹೇಳಿದರು. ಉತ್ಕರ್ಷವನ್ನು ಬಯಸುವ ಪ್ರತಿಯೊಬ್ಬರು ತಮ್ಮ ಆಯುಷ್ಯದಲ್ಲಿ ಒದಗುವ ಪ್ರತಿಯೊಂದು ಸಂಧಿಯ ಉಪಯೋಗವನ್ನು ಶಕ್ಯವಿದ್ದಷ್ಟು ಹೆಚ್ಚು ಮಾಡಿಕೊಳ್ಳಬೇಕು, ಇಂತಹ ಸಂಧಿಗಳು ಹೇಗೆ, ಯಾವ ಸಮಯಕ್ಕೆ ಬರುತ್ತವೆಂಬುದನ್ನು ಹೇಳಲು ಬರುವದಿಲ್ಲ. ಆದುದರಿಂದ ನಾವು ಯಾವಾಗಲೂ ಜಾಗರೂಕರಾಗಿದ್ದು ಚಿಕ್ಕದೆಂದು ಕಂಡರೂ ಅದನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ವ್ಯರ್ಥ ಹೋಗಗೊಡಬಾರದು, ಲಕ್ಷಣರಾಯರು ಮುಂದೆ ಸುಪ್ರಸಿದ್ದ ಮಹಾರಾಷ್ಟ್ರದ ಕಾರಖಾನೆದಾರರೆಂದು ಕೀರ್ತಿ ಪಡೆದರು. ಆದರೆ ಈ ಉಜ್ವಲ ಕೀರ್ತಿಯು ತನ್ನಷ್ಟಕ್ಕೆ ತಾನೇ ಬಂದಿದೆಯೇ ? ಅವರು ಒದಗಿದ ಪ್ರತಿಯೊಂದು ಸಂಧಿಯ ಪೂರ್ಣ ಉಪಯೋಗವನ್ನು ಮಾಡಿ ಕೊಂಡು ಒಂದೊಂದೇ ಮೆಟ್ಟಿಲು ಮೇಲಕ್ಕೇರಿದರು. - ಇನ್ಸ್ಟಿಟ್ಯೂಟಿನಲ್ಲಿ ನವಕು ಸಿಕ್ಕೊಡನೆಯೇ ಲಕ್ಷ್ಮಣರಾಯರು ತಮ್ಮ ಸಹೋದ್ಯೋಗಿಗಳಂತೆ ಗತಾನುಗತಿಕೋಲೋಕಃ ಎಂಬಂತೆ ತಮ್ಮ ಆಯುಷ್ಯ ವನ್ನು ಕಳೆಯಲಿಲ್ಲ. ಆ ಸಂಸ್ಥೆಗೆ ಒಂದು ವರ್ಕ್ಕಶಾಪ ಜೋಡಿಸಲ್ಪಟ್ಟಿತ್ತು. ಅದರಲ್ಲಿ ಲೇಥ, ಡ್ರಿಲಿಂಗ ಮಶಿನ್‌, ಸೇಸಿಂಗ ಮಶಿನ್ನ ಮತ್ತು ಸ್ಟಾಟಿಂಗ ಮಶಿನ್ನ ಮೊದಲಾದ ಯಂತ್ರಗಳಿದ್ದವು, ಯಂತ್ರಪ್ರಿಯರಾದ ಲಕ್ಷಣ ರಾಯರು ಆ ಯಂತ್ರಗಳ ಬಗ್ಗೆ ಜ್ಞಾನಮಾಡಿಕೊಳ್ಳಲು ನಿಶ್ಚಯಿಸಿದರು. ಆದರೆ ಅದನ್ನು ಸಾಧಿಸುವದು ಸುಲಭವಿರಲಿಲ್ಲ. ಆ ಮಾರ್ಗದಲ್ಲಿ ಎರಡು