ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಹಳೇ ಮುದ್ರಣಾಲಯವಿದ್ದಿತು, ಅಲ್ಲಿ ಕುರಾನ ಮುದ್ರಿಸಲ್ಪಡುತ್ತಿತ್ತು, ಅದಕ್ಕೆ ಭಾರತ ಹಾಗೂ ಹೊರದೇಶಗಳಿಂದ ಬೇಡಿಕೆ ಬಹಳ ಇದ್ದಿತು, ಲಕ್ಷಣ ರಾಯರು ಇದೇ ಕೆಲಸವನ್ನು ಹೊಸ ಯಂತ್ರಗಳ ಮೇಲೆ ಮಾಡಿದರೆ, ಬಹು ಸ್ವಲ್ಪ ವೇಳೆಯಲ್ಲಿ ಇದಕ್ಕಿಂತ ಅಗ್ಗವಾಗಿಯೂ ಮಾಡಬಹುದೆಂದು ಆ ಯಂತ್ರದ ಒಡೆಯನ ತಲೆಯಲ್ಲಿ ತುಂಬಿದರು. ಅವನು ಹೊಸ ಯಂತ್ರವನ್ನು ತರಿಸುವ ಹಾಗೂ ಅದನ್ನು ಕೂಡಿಸುವ ಕೆಲಸವನ್ನು ಲಕ್ಷ್ಮಣರಾಯರಿಗೇ ಒಪ್ಪಿಸಿದನು. ಲಕ್ಷ್ಮಣರಾಯರು ಆನಂದದಿಂದ ಅದಕ್ಕೆ ಒಪ್ಪಿದರು. ಹತ್ತು ಅಶ್ವಶಕ್ತಿಯ ಎಣ್ಣೆಯ ಇಂಜಿನವನ್ನೂ ಸುಧಾರಿಸಿದ ಮುದ್ರಣ ಯಂತ್ರವನ್ನೂ ತರಿಸಿ, ವ್ಯವಸ್ಥಿತವಾಗಿ ಕೂಡಿಸಿ ಕೊಟ್ಟರು. ಇದರಿಂದ ಲಕ್ಷ್ಮಣರಾಯರ ಯಾಂತ್ರಿಕ ಜ್ಞಾನವು ವ್ಯಕ್ತವಾಗುವದು.
- ಇನ್ಸ್ಟಿಟ್ಯೂಟ್ ದಲ್ಲಿ ಕೆಲಸ ಹಿಡಿದ ಸ್ವಲ್ಪು ದಿನಗಳಲ್ಲಿ ಒಬ್ಬ ಪಾರ್ಸಿಯು ಎರಡುಗಾಲಿಯ ಒಂದು ವಿಚಿತ್ರ ವಾಹನವನ್ನು ಏರಿ ಬೀದಿಯಲ್ಲಿ ಹೋಗುತ್ತಿರು ವುದನ್ನು ಲಕ್ಷ್ಮಣರಾಯರು ಕಂಡರು. ಒಂದು ಗಾಲಿಯು ಆಳುದ್ದ ಎತ್ತರ ಬಿದ್ದಿತು. ಇನ್ನೊಂದು ಗಾಲಿಯು ಒಂದು ಮೊಳದಷ್ಟು ಎತ್ತರ ಇದ್ದಿತು. ಇದು ಈಗಿನ ಸಾಯಕಲ್ಲಿನ ತಂದೆ. ಈ ಯಂತ್ರವು ರಾಯರ ಮನಸ್ಸನ್ನು ಸೆಳೆಯಿತು. ಅದರ ಬಗೆಗೆ ಇಂಗ್ಲಂಡ ಹಾಗೂ ಅಮೇರಿಕೆಯಿಂದ ಎಲ್ಲ ಸಂಗತಿಯನ್ನು ಸಂಗ್ರಹಿಸಿದರು. ಈ ಹಳೇ ಸಾಯಕಲ್ಲೇ ಸುಧಾರಿಸುತ್ತ, ಈಗಿನ ಸೇಫ್ಟಿ ಸಾಯಕಲ್ಲಾಗಿದೆ, ಲಕ್ಷ್ಮಣರಾಯರು ಒಂದನ್ನು ತರಿಸಿ ಹತ್ತಲು ಕಲಿತರು. ಆ ಮೇಲೆ ಅಂತಹವೇ ಎರಡು ಸಾಯಕಲ್ಲುಗಳನ್ನು ತರಿಸಿ ಬೆಳಗಾವಿಯಲ್ಲಿದ್ದ ತಮ್ಮ ಅಣ್ಣಂದಿರಾದ ರಾಮೂ ಅಣ್ಣಾ ಅವರಿಗೂ ಅಜರೇ ಕರ ಕೇಶವರಾಯರಿಗೂ ಕೊಟ್ಟು, ಅವರಿಗೂ ಅವುಗಳನ್ನೇರಲು ಕಲಿಸಿದರು.
" ಮೊದಮೊದಲು ಸಾಯಕಲ್ಲುಗಳು ಜೋಡಿಸಿ ಬರುತ್ತಿರಲಿಲ್ಲ. ಅದರ ಭಾಗಗಳನ್ನೆಲ್ಲ ಜೋಡಿಸುವ, ಕೆಟ್ಟರೆ ನೆಟ್ಟಗೆ ಮಾಡುವ ಕಾಠ್ಯವನ್ನು ಲಕ್ಷ್ಮಣ ರಾಯರೇ ಕೈಕೊಂಡರು. ಮುಂಬಯಿಯಲ್ಲಿ ನಾಚ್ಯಾ ಬಂಧುಗಳು ಸಾಯ. ಕಲ್ಲಿನ ವ್ಯಾಪಾರಿಗಳಾಗಿದ್ದರು. ಆ ಕಾಲಕ್ಕೆ, ರಾಯರು ಅವರಿಂದಲೇ ಸಾಯ ಕಲ್ಲುಗಳನ್ನು ಕೊಂಡುಕೊಳ್ಳುತ್ತಿದ್ದರು. ಮುಂದೆ ಬೇಡಿಕೆಯು ಹೆಚ್ಚಾದಂತೆ ಸಾಯಕಲ್ಲುಗಳನ್ನು ಪೂರೈಸುವ ಇಂಗ್ಲಂಡಿನ ಏಜೆಂಟನ ಗೊತ್ತುಹಚ್ಚಿ ಕಿರ್ಲೋಸ್ಕರ ಬಂಧುಗಳು ಎಂಬ ಹೆಸರಿನಿಂದ ಪ್ರತ್ಯಕ್ಷವಾಗಿ ಕಾರಖಾನೆಯ,