ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊಸ ಸಂಸಾರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸಸಿಕ್ಕ ಕೆಲವು ದಿನಗಳಲ್ಲಿಯೇ ಅಕ್ಷಣರಾಯರಿಗೆ ಅವರ ಅಣ್ಣಂದಿರಾದ ರಾಮರಾಯರಿಂದ ಕೆಳಗಿನ ಪತ್ರ ಬಂದಿತು. “ನಿನಗೆ ನೌಕರಿ ಸಿಕ್ಕ ಸಂಗತಿಯನ್ನೋದಿ ಸಂತೋಷವಾಯಿತು. ನೀನು ನಿನ್ನ ಉಪಜೀವನದ ಪ್ರಶ್ನೆಯನ್ನು ಒಳ್ಳೆ ರೀತಿಯಿಂದ ಬಿಡಿಸಿಕೊಂಡ ದ್ದ ಕ್ಯಾಗಿ ನಿನಗೆ ಅಭಿನಂದನೆಗಳು. ಇನ್ನು ಮುಂದೆ ನೀನು ವಿವಾಹಿತನಾಗು ವದು ಅವಶ್ಯ, ಈ ದೃಷ್ಟಿಯಿಂದ ಕುಂದಗೋಳದ ಪಳಸುಳೆ ಮನೆತನದ, ನಿನಗೆ ಅನುರೂಪಳಾದ ಕಸ್ಯೆಯನ್ನು ಗೊತ್ತು ಮಾಡಿದ್ದೇವೆ. ಹುಡಿಗೆಯ ಹೆಸರು ನಾಗೂತಾಯಿ, ವಯಸ್ಸು ಹತ್ತು ವರುಷ, ಹುಡಿಗೆಯು ಬಂಗಾರದ ವರ್ಣದವಳಾಗಿದ್ದಾಳೆ. ನಿನ್ನ ಅಗ್ನವನ್ನು ಇದೇ ವೈಶಾಖದಲ್ಲಿ ಬೆಳಗಾವಿಯ ಸಮೀಪದಲ್ಲಿರುವ ಅಸೋಗಾ ಎಂಬ ಊರಲ್ಲಿ ಮಾಡುವದನ್ನು ನಿಶ್ಚಯಿಸಿದ್ದೇವೆ. ಮುಹೂರ್ತ ಗೊತ್ತಾದೊಡನೆಯೆ ತಿಳಿಸುವೆ. ನೀನು ನಿನ್ನ ಶಾಲೆಗೆ ಬಿಡುವು ಆದೊಡನೆಯೇ ಮನೆಯವರನ್ನೆಲ್ಲ ಕರೆದುಕೊಂಡು ಬೆಳಗಾವಿಗೆ ಬರಬೇಕು.” ಆ ಕಾಲದ ರೂಢಿಗನುಸರಿಸಿ ಪಿತೃ ಸಮಾನರಾದ ರಾಮರಾಯರು ಲಗ್ನವನ್ನು ಗೊತ್ತು ಮಾಡುವದು ಸ್ವಾಭಾವಿಕವಿದ್ದಿತು. ಅದು ಒಳ್ಳೆಯದೇ ಆಯಿತು, ಏಕೆಂದರೆ ಲಕ್ಷ್ಮಣರಾಯರು ಇಷ್ಟು ಬೇಗ ಲಗ್ನದ ವಿಚಾರವನ್ನು ಮಾಡುತ್ತಿದ್ದ ರೋ ಇಲ್ಲವೋ ಸಂಶಯ, ಲಕ್ಷಣರಾಯರ ಮನಸ್ಸು ಬಹಳ ದೊಡ್ಡದು, ಆದರೆ ಅಷ್ಟೇ ಕಠೋರವಾದುದು, ತಮ್ಮ ಮನಸ್ಸಿನ ವಿರುದ್ಧ ಜರುಗಿದ ಸಣ್ಣ-ಪುಟ್ಟ ತಪ್ಪುಗಳು ಕೂಡ ಅವರಿಗೆ ಸಹನವಾಗುತ್ತಿದ್ದಿಲ್ಲ. ಆದರೆ ಅವರ ಹೃದಯವು ಬಹಳೇ ಕೋಮಲ, ಯಾವುದೇ ಕೆಲಸವಿರಲಿ ಅದನ್ನು ಸುವ್ಯವಸ್ಥಿತವಾಗಿ, ಮನಃಪೂರ್ವಕವಾಗಿ ಮಾಡುವದೇ ಅವರ ಸ್ವಭಾವ, ನಿರುದ್ಯೋಗಿಗಳಾಗಿ ಹರಟಿ ಕೊಚ್ಚು ತ ಸಮಯ ಹಾಳು ಮಾಡುವವರನ್ನು ಕಂಡರೆ ಅವರ ಸಿಟ್ಟು ಬೆಂಕಿ. * ಲಕ್ಷಣರಾಯರೆಂದರೆ