ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ಮಿಂಚಿನಬಳ್ಳಿ ರಾಯರು ಉತ್ಸಾಹದಿಂದ ಬಡೋದೆಗೆ ಧಾವಿಸಿದರು, ಆದರೆ ಅವರಿಗಿಂತ ಅವರ ದೈವವು ಮುಂದೆ ಓಡಿತ್ತು.

  • ಸಾಹುಕಾರನು ಲಕ್ಷ್ಮಣರಾಯರ ಕಲ್ಪಕತೆಯನ್ನೂ ಯಾಂತ್ರಿಕ ಜ್ಞಾನ ವನ್ನೂ ಬಾಯಿತುಂಬ ಹೊಗಳಿ ಯೋಜನೆಯನ್ನು ಮೆಚ್ಚಿ “ನಿಮ್ಮ ಕಾರಖಾನೆಗೆ ನಾನು ಭಂಡವಲು ಒದಗಿಸಬಲ್ಲೆ. ಆದರೆ ಒಂದು ಕರಾರಿನಮೇಲೆ ಮಾತ್ರ” ಎಂದು ಅಂದನು.

“ತಮ್ಮ ಕರಾರು ಯಾವುದು ? " ಎಂದು ಲಕ್ಷಣರಾಯರು ಉತ್ಸುಕತೆ ಯಿಂದ ಕೇಳಿದರು. ಅದಕ್ಕೆ ಸಾಹುಕಾರನು “ನೀವು ನಿಮ್ಮ ಕಾರಖಾನೆಗೆ ಒಬ್ಬ ಯುರೋಪಿಯನ್ ಮ್ಯಾನೇಜರನನ್ನು ತರಬೇಕು, ಅಂದರೆ ನಿಮಗೆ ಬೇಕಾಗುವ ಭಂಡವಲು ತೊಡಗಿಸಲು ನಾನು ಸಿದ್ಧನಿರುವೆ. ಕಾರಖಾನೆಗಳನ್ನು ನಡೆಯಿಸುವ ಯೋಗ್ಯತೆಯು ನಮ್ಮ ಜನರಲ್ಲಿ ಇದೆಯೆಂದು ನನಗೆ ಅನಿಸುವದಿಲ್ಲ ಎಂದನು. ಲಕ್ಷ್ಮಣರಾಯರು ಸಾಹುಕಾರನ ಮತ ಬದಲಿಸಲು ವಿಶ್ವ ಪ್ರಯತ್ನ ಮಾಡಿದರು. ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ನಿರುಪಾಯರಾಗಿ “ಬಂದ ದಾರಿಗೆ ಸುಂಕವಿಲ್ಲ' ಎಂದು ಬರಿಗೈಯಿಂದ ಮುಂಬಯಿಗೆ ಮರಳಿದರು. ಅಲ್ಪ ಭಾಂಡವಲಿನಿಂದ ಬೇರೆ ಯಾವ ಉದ್ಯೋಗವನ್ನು ಪ್ರಾರಂಭಿಸಬಹುದು ? ಎಂಬ ವಿಚಾರದಲ್ಲಿ ಮಗ್ನರಾದರು. - ಹೀಗೆ ವಿಚಾರ ಮಾಡುವಾಗ, ಡಾಕ್ಟರರಿಗೂ ಔಷಧಿಗಳನ್ನು ತಯಾರಿಸು ವವರಿಗೂ (ಕೆಮಿಸ್ಟಿಗಳಿಗೂ) ಗುಳಿಗೆಗಳನ್ನು ಹಾಕಲು ಬೇಕಾಗುವ ಕಾಗದದ ಪೆಟ್ಟಿಗೆಗಳನ್ನು ಮಾಡಲು ಅಲ್ಪ ಬಂಡವಲಿನಿಂದ ಸಾಧ್ಯವೆಂಬ ಮಾತು ಅವರಿಗೆ ಹೊಳೆಯಿತು, ಕೂಡಲೆ ಆ ಬಗ್ಗೆ ಬೇಕಾಗುವ ಜ್ಞಾನವನ್ನು ಸಂಪಾದಿ ಸಿದರು. ಸುದೈವದಿಂದ ಈ ಕಾರ್ಯಕ್ಕೆ ಬೇಕಾಗುವ ಅಲ್ಪಸ್ವಲ್ಪ ಭಂಡವಲ ವನ್ನು. ಡಾ. ನಾನಾಸಾಹೇಬ ದೇಶಮುಖ ಮೊದಲಾದವರು ಒದಗಿಸಿದರು. ಅಷ್ಟರಿಂದಲೇ ಲಕ್ಷಣರಾಯರು ಅಮೇರಿಕೆಯ ಬರೈಸ್ ಕಂಪನಿಯ ಒಂದು ಚಿಕ್ಕ ಲೇಖ (ಗಾಡ) ವನ್ನೂ ಹಾಗೂ ಫರ್ಕ್ಕೂಟ ಕಂಪನಿಯ ಕಾಲಿನಿಂದ ತುಳಿಯುವ ಒಂದು ಸಣ್ಣ ಪ್ರೆಸ್ಸನ್ನು ತರಿಸಿದರು. ಇಷ್ಟರಿಂದಲೇ ಅವರ ಕಾರ್ಯವಾಗಲಿಲ್ಲ. ಇನ್ನಷ್ಟು ಬಂಡವಲಿನ ಅವಶ್ಯಕತೆಯೆನಿಸಿತು. ಈ ಹೆಚ್ಚಿನ ಹಣವನ್ನು ಎಲ್ಲಿಂದ ತರಬೇಕೆಂದು ರಾಯರು ಚಿಂತೆಗೊಳ