ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vy ಏಂಚಿನಬಳ್ಳಿ ಪ್ರೇಮವು ಅಷ್ಟಕ್ಕಷ್ಟೇ, “ನಿಮ್ಮ ರಂಟೆಗಳ ರಚನೆಯು ಚನ್ನಾಗಿದ್ದರೂ ನಿಮ್ಮ ಕುಳಗಳು ಬೇಗನೆ ಸವೆಯುತ್ತವೆ, ಆದ್ದರಿಂದ 'ಕೈತನಿಗೆ ಅವುಗಳನ್ನು ತರಿಸಲು ಉತ್ತೇಜನೀಯಲು ಬರುವದಿಲ್ಲ ಎಂದು ಶರಾ ಹೊಡೆದರು." ಅಧಿಕಾರಿಗಳಿಂದ ಬಂದು ಉತ್ತರದಿಂದ ಲಕ್ಷಣರಾಯರು ಧೃತಿಗೆಡ ಲಿಲ್ಲ: ಉತ್ತೇಜಿತರಾದರು. ಆ ದೋಷವು ಸತ್ಯವೋ ಅಸತ್ಯವೋ ಎಂಬುದನ್ನು ಒರೆಗೆ ಹಚ್ಚಲು ಟೊಂಕಕಟ್ಟಿದರು. ವಿಲಾಯತಿಯಲ್ಲಿಯ ಭಿನ್ನ ಭಿನ್ನ ಕಂಸ ನಿಯ ಕುಳಗಳನ್ನೆಲ್ಲ ತರಿಸಿದರು, ಅವೆಲ್ಲವೂ ಬೀಡಿನವಿದ್ದವು. ಸುತ್ತಿಗೆಯಿಂದ ಅವುಗಳನ್ನು ಹೊಡೆದು ನೋಡಿದಾಗ ಪ್ರತ್ಯಕ್ಷವಾಗಿ ಭೂಮಿಯೊಡನೆ ಘರ್ಷಣೆ ಹೊಂದುವ ಸೃಷ್ಣ ಭಾಗವು ಅತ್ಯಂತ ಕಠಿಣವಿದ್ದುದು ಕಂಡುಬಂದಿತು, ಅರಕ್ಕೆ ಕೂಡ ಸವೆಯದಷ್ಟು ಕಠಿಣವಿದ್ದುದೇ ಅವು ಬೇಗ ಸವೆಯದಿದ್ದುದಕ್ಕೆ ಕಾರಣ ವೆಂದು ಕಂಡುಬಂದಿತು. ಬೀಟಿನ ಭಾಗದ ಈ ಕವಚವನ್ನು ಇಷ್ಟು ಬಿರುಸು ಮಾಡಲು ಯಾವ ಉಪಾಯವನ್ನು ಯೋಚಿಸಿರಬಹುದೆಂಬ ಯೋಚನೆಯಲ್ಲಿ ರಾಯರು ಮಗ್ನ ರಾದರು, ಆಗ ಅವರು ಎಂದಿನಂತೆ ಯಾಂತ್ರಿಕ ಮಾಸಿಕ ಪುಸ್ತಕಗಳಿಗೆ ಶರಣು ಹೋದರು, ಆಗ ಅವರು ಕುಳಗಳಿಗೆ ಯಾವ ರೀತಿಯಿಂದ ನೀರು ಕುಡಿಸು ತಿರುವರೆಂಬುದನ್ನು ಕಂಡುಹಿಡಿದರು. ಬಿರುಸಿಗೆ ನೀರು ಕುಡಿಸುವ ಈ ತಂತ್ರವೇ ಕಾರಣವೆಂದು ತಿಳಿದು, ಆ ತಂತ್ರವನ್ನನುಸರಿಸಿದೊಡನೆ ಕಿರ್ಲೋಸ್ಕ ರರ ಕುಳಗಳೂ ಕೂಡ ವಿಲಾಯತಿಯ ಕುಳಗಳಂತೆಯೇ ಆದವು, ಅಷ್ಟರಿಂದ ರಾಯರು ಸಮಾಧಾನ ಹೊಂದದೇ ತನ್ನ ಪ್ರಯೋಗವನ್ನು ಮುಂದುವರಿಸಿ ವಿಲಾಯತಿಯ ಕುಳಗಳಿಗಿಂತಲೂ ತಮ್ಮ ಕುಳಗಳು ಬಳಕೆಯಲ್ಲಿ ಶ್ರೇಷ್ಟವಾಗು ಏವಂತೆ ಮಾಡಿದರು. ಒಕ್ಕಲುತನದ ಖಾತೆಯವರಿಗೆ ಈಗ ಹೆಸರಿಡಲು ಮಾರ್ಗ ಉಳಿಯ ಲಿಲ್ಲ, “ತಂದೆಯನ್ನಾದರೂ ತೋರಿಸು ಇಲ್ಲವೇ ಶ್ರಾದ್ಧ ಮಾಡು.” ಎಂಬಂತಹ ಪ್ರಶ್ನೆಯು ಅವರನ್ನು ಎದುರಿಸಿತು, ಆಗ ಅವರು ಮರು ಮಾತನಾಡದೆ ತಮ್ಮ ಮೊದಲಿನ ಆರೋಪವನ್ನು ತಿರುಗಿ ತೆಗೆದುಕೊಂಡು ಕಿರ್ಲೋಸ್ಕರ ರಂಟೆಗಳಿಗೆ ಮನ್ನಣೆಯನ್ನಿತ್ತರು. 'ಹತ್ತುಲಕ್ಷ.ಕಬ್ಬಿಣ.ರಂಟೆಗಳು ಇಂದು ದೇಶದಲ್ಲೆಲ್ಲ ಪ್ರಸಾರವಾಗಿವೆ.