23 ಮಿಂಚಿನಬಳ್ಳಿ ವಿಶಾಲವಾದ ಬೈಲುಪ್ರದೇಶವು ಸಿಗಲು ಶಕ್ಯವಿದೆಯೇ ? ಎಂದು ಶೋಧಿಸಿದರು. ಪ್ರಯತ್ನಗಳೆಲ್ಲ ನಿಷ್ಪಲವಾದವು, ಮುನಸೀಪಾಲಟಿಯು ಕೊಟ್ಟ ಅವಧಿಯು ಮುಗಿಯುತ್ತ ಬಂದಿತು. ಕಿರ್ಲೋಸ್ಕರ ಬಂಧುಗಳು ಚಿಂತೆಗೊಳಗಾದರು. ದೈವಲೀಲೆಯು ವಿಚಿತ್ರವಾದುದು. ಯಾವ ದೈವವು ಅವರನ್ನು ಈ ಸಂಕಟ ದಲ್ಲಿ ನೂಕಿತ್ತೋ ಅದರಿಂದ ಪಾರಾಗಲು ಅದೇ ದೈವವು ಮಾರ್ಗದರ್ಶನ ಮಾಡಿತು. ಲಕ್ಷ್ಮಣರಾಯರು ಚಿಂತೆಗೊಳಗಾದಾಗ ಒಂದು ದಿನ ಶ್ರೀಮಂತ ಬಾಳಾ ಸಾಹೇಬಸಂತ ಪ್ರತಿನಿಧಿ ಹಾಗೂ ಔಂಧದ ಪೋಲಿಟಿಕಲ್ ಎಂಜಿನೀಯರರಾದ ಜೇಕಬ ಮತ್ತು ಬಾಪೂಜಿ ಇಸ್ರಾಯೇಲ ಈ ಮೂವರೂ ಲಕ್ಷ ಣರಾಯರ ಅತಿಥಿಗಳಾಗಿ ಬಂದರು. ಶ್ರೀ ಬಾಳಾಸಾಹೇಬರು ಈಗ ರಾಜ್ಯದ ಗದ್ದುಗೆಯ ಸ್ನೇರಿದ್ದರು, ಅಂತಸ್ತಿನಲ್ಲಿ ಇವರೆಲ್ಲರೂ ದೊಡ್ಡವರು. ಆದರೆ ಗಾಢವಾದ ಗೆಳೆತನದಲ್ಲಿ ಇದಕ್ಕೆ ಸ್ಥಾನವಿದೆಯೆ ? ಈ ಮೂವರೂ ಮತ್ತು ಸಾತಾರೆಯ ವಕೀಲರಾದ ಮಾಣಕಜಿ ಡೋನಾಭಾಯ ಇವರೆಲ್ಲರೂ ಮೆಶಾನಿಕ ಲಾಜದ ಸಭಾಸದರಿದ ಮೂಕ, ಬೆಳಗಾವಿಯಲ್ಲಿ ಆ ಶಾಖೆಯ ಕೇಂದ್ರವಿದ್ದುದರಿಂದ ಅದರ ಸಭೆಗಾಗಿ ಆ ಜನ ಒಂದು ಲಕ್ಷ್ಮಣರಾಯರ ಅತಿಥಿಗಳಾಗುತ್ತಿದ್ದರು. .ಶ್ರೀಮಂತರೂ, ಜೇಕಬ ಹಾಗೂ ಬಾಪೂಜಿ ಮತ್ತು ಲಕ್ಷ್ಮಣರಾಯರು ಕೂಡಿ ಡಮಣಿಯಲ್ಲಿ ಬೆಳಗಾಂವಿಗೆ ಹೊರಟರು. ಆಗ ಶ್ರೀಮಂತರು ಲಖು ಮಾಮಾ ನೀವು ನಿಮ್ಮ ಸ್ಥಳವನ್ನು ಬೇಗನೆ ಬಿಡಬೇಕಾಗಿದೆಯೆಂದು ಕೇಳು ತೇನೆ. ಹೀಗಿದ್ದರೆ ನೀವು ನಿಮ್ಮ ಕಾರ್ಖಾನೆ ಸಂತವಾಗಿ ನಮ್ಮ ಸಂಸ್ಟಾ ನಕ್ಕೆ ಏಕೆ ಬರಬಾರದು ? ಈಗ ನಾನು ನಿಮ್ಮ ಗೆಳೆಯನೆಂದು ಮಾತನಾಡು ತಿರದೆ ಔಂಧದ ಅಧಿಪತಿಯೆಂದು ಮಾತನಾಡುತ್ತಿರುವೆ. ಇದು ನಿಮಗೆ ಒಪ್ಪಿತ ವಾದರೆ ನಿಮಗೆ ಬೇಕಾದಷ್ಟು ಸ್ಥಳವನ್ನೂ ಅಲ್ಪಸ್ವಲ್ಪ ಭಂಡವಲವನ್ನೂ ಕೊಡ ಬಹುದು. ಈಗ ಹೇಳಿರಿ, ಇದಕ್ಕೆ ನಿಮ್ಮ ಸಿದ್ದತೆಯಿದೆಯೆ ? ಎಂದರು. - ಅನಪೇಕ್ಷಿತ ಹಾಗೂ ಆಕಸ್ಮಿಕವಾಗಿ ಬಂದ ಈ ಪ್ರಶ್ನೆಗೆ ಲಕ್ಷಣ ರಾಯರು ಒಮ್ಮೆಲೆ ಹೇಗೆ ಉತ್ತರ ಕೊಡಬಲ್ಲರು ? ಆಗ ಅವರು ಇದನ್ನು ಪ್ರಚಾರ ಮಾಡಲು ನನಗೆ ಸ್ವಲ್ಪ ಸಮಯ ಬೇಕು. ಅಲ್ಲದೆ ರಾಮೂ ಅಣ್ಣಾ ಹಾಗೂ ಕೆ. ಕೆ. ಯವರ ಅಭಿಪ್ರಾಯವನ್ನು ಕೇಳಿಕೊಳ್ಳುವದು ಅವಶ್ಯವಿದೆ.” ಎಂದರು, ಶ್ರೀಮಂತರು ಆಳಿಗೆ ಗಾಡಿ ನಿಲ್ಲಿಸಲು ಹೇಳಿ ತಾವು ನುರಳಬಹುದು,
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೭೭
ಗೋಚರ