ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮ ಕಿರ್ಲೋಸ್ಕರವಾಡಿಯ ಸ್ಥಾಪನೆ ಕುಂಡಲವು ಸದರ್ನ ಮರಾಠಾ ರೇಲ್ವೆ ಮಾರ್ಗದಲ್ಲಿ ಒಂದು ಚಿಕ್ಕ ನಿಲ್ದಾಣವು, ಸುತ್ತು ಮುತ್ತಲಿನ ಕುಂಡಲ, ಪಲೂಸ ಬುರ್ಲಿ ಬುಧೆಂಡಿ ಮೊದಲಾದ ೩-೪ ಮೈಲುಗಳೊಳಗಿರುವ ಊರುಗಳಿಗೆ ಅನುಕೂಲವಿದ್ದಿತು. ಗಾಡಿಯು ಬಂದಾಗ ಮಾತ್ರ ಅಲ್ಲಿ ಮಾನವರ ಅಲ್ಪ ಸ್ವಲ್ಪ ಸುಳಿದಾಟ. ಈ ಸ್ಟೆಶನ್ನಿನಲ್ಲಿ ಗಾಡಿ ನಿಲ್ಲುತ್ತಿದ್ದುದು ಜನರ ಅನುಕೂಲತೆಗಲ್ಲ. ಗಾಡಿಗೆ ನೀರು ತುಂಬುವದಕ್ಕಾಗಿ, - ೧೯೧೦ ನೇ ಮಾರ್ಚದಲ್ಲಿ ಒಂದು ದಿನ ಮಧ್ಯಾನ್ಯ ಲಕ್ಷಣರಾಯರು ಅಂತೋಬಾ, ಫಳಣೀಕರ, ಟೋಪಣ್ಣಾ, ಬಡಗೇರ ಮತ್ತು ಆಳುಮಗನಾದ ಧನ್ಯಾ ಇಷ್ಟು ಜನರೊಂದಿಗೆ ಕುಂಡಲ ಸ್ಟೇಶನ್ನಿನಲ್ಲಿ ಇಳಿದರು. ಲಕ್ಷಣ ರಾಯರು ನಕಾಶವನ್ನು ಬಿಚ್ಚಿದರು. ತಮಗೆ ದೊರೆತ ಸ್ಥಳವನ್ನು ಅಲ್ಲಿದ್ದ ಜಾಲೀಮರದಿಂದ ದಿಟ್ಟಿಸಿ ನೋಡಿದರು, ಅಲ್ಲಿ ಅವರಿಗೆ ಕಂಡದ್ದೇನು ? ಗಿಡ. ಮರಗಳಿಲ್ಲದ ಒಂದು ದಿನ್ನಿ, ಅದರಲ್ಲಿ ಅಲ್ಲಲ್ಲಿ ಹಬ್ಬಿದ ಮುಳ್ಳುಗಳ್ಳಿ, ಮೋಡದ ಸುಳಿವು ಕೂಡ ಇಲ್ಲದ ವಿಶಾಲವಾದ ಆಕಾಶ, ಸ್ಟೇಶನ್ನಿನ ಹತ್ತರ ಸ್ಟೇಶನ್ ಮಾಸ್ಕರನ ಹಾಗೂ ಒಬ್ಬಿಬ್ಬ ಪೋರ್ಟರರ ಮನೆ, ಒಂದು ಚಿಕ್ಕ ಧರ್ಮಶಾಲೆ. ಬೆಳಗಾಂವಿಯಂತಹ ತಂಪಾದ ಹವೆಯಿಂದ ಬಂದ ಈ ಜನಕ್ಕೆ, ರಣಗುಟ್ಟುವ ಈ ಬಿಸಿಲಿನ ಈ ಭಯಾನಕ ದೃಶ್ಯ ಕಂಡು ಏನು ಅನಿಸಿರಬೇಕು ? ಹೋಳಿಹುಣ್ಣಿವೆಯ ಕರಿದಿನ, ಕಿರ್ಲೋಸ್ಕರವಾಡಿಯ ಮುಹೂರ್ತ ಮಾಡಲು ರಾಯರು ಹೊಟ್ಟರು, ಮಹತ್ವದ ಕಾರ್ಯ ಪ್ರಾರಂಭಿಸಲು ಈ ದಿನ ಒಳ್ಳೆಯದೋ ಕೆಟ್ಟದೋ ಈ ವಿಚಾರವೇ ಅವರಲ್ಲಿ ಸುಳಿದಿರಲಿಲ್ಲ. ಇಂತಹ ಭಾವುಕ ಕಲ್ಪನೆಗಳಲ್ಲಿ ಅವರಿಗೆ ವಿಶ್ವಾಸವಿರಲಿಲ್ಲ. ಇಂತಹ ಉರಿಬಿಸಿಲಿನಲ್ಲಿಯೇ ತಮ್ಮ ಸ್ಥಳವನ್ನು ನೋಡಲು ಹೊರಟ ದ್ದರು. ಸುತ್ತುಮುತ್ತು ಮುಳ್ಳುಗಳ್ಳಿ ಹಬ್ಬಿದ್ದರೆ ಕಾಲಲ್ಲಿ ನೆಗ್ಗಲಿ ಮುಳ್ಳುಗಳು, ಇಷ್ಟರಲ್ಲಿ ಒಂದು ನಾಗರಹಾವು ದಾರಿಯಲ್ಲಿ ಅಡ್ಡ ಬಂದು ಸರಸರನೆ ಮುಳ್ಳು