ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ ಸ್ಥಳಾಂತರಿಸಲ್ಪಟ್ಟು ಕಾರ್ಯವು ಅಖಂಡವಾಗಿ ನಡೆಯುವಂತೆ ಮಾಡಿದುದು ಲಕ್ಷ್ಮಣರಾಯರ ಬುದ್ದಿವಂತಿಕೆಯ ದ್ಯೋತಕವು. - ಗಿಡ ಮರಗಳಿಲ್ಲದೆ ಊರು ಶೋಭಿಸುವದೆಂತು? ಆದರೆ ಕಲ್ಲು ಬಂಡೆಗಳಿಂದ ತುಂಬಿದ ಈ ಮರಡಿಯಲ್ಲಿ ಗಿಡಗಳು ಬೆಳೆಯುವ ಬಗೆಹೇಗೆ ? ಅದಕ್ಕಾಗಿ ಲಕ್ಷ್ಮಣರಾಯರು ಹೊಸ ಸೃಷ್ಟಿ ಯನ್ನೇ ಮಾಡಿದರು, ಆಳುದ್ದ ತಗ್ಗು ತೆಗೆದು ಅದರಲ್ಲಿ 'ಮಣ್ಣು ಗೊಬ್ಬರಗಳನ್ನು ತುಂಬಿ ಆಶೋಕ, ಸಿಲ್ವರ ಓಕ ಇಂಡಿಯನ್ ಕಾಕ, ಗುಲ್ ಮೊಹರ ಮೊದಲಾದ ಗಿಡಗಳನ್ನು ಹಚ್ಚಿದರು. ಊರು ಬಲಿಯ ಹತ್ತಿದರೂ ಕಿರಾಣಿ ಅಂಗಡಿ ಇರಲಿಲ್ಲ, ಕುಂಡಲದ ಸಂತೆಗೆ ಗಾಡಿ ಕಳಿಸಿ ಎಲ್ಲರಿಗೂ ಬೇಕಾಗುವ ಸಾಹಿತ್ಯವನ್ನು ತರಿಸಿ, ಹಂಚುತ್ತಿದ್ದರು. ಮಾಯಪ್ಪಾದೇವಸ್ಥಾನದಲ್ಲಿ ಏಳೆಂಟು ಹುಡುಗರಿಂದ ಶಾಲೆಯು ಪ್ರಾರಂಭವಾಯಿತು. ಜರಂಡೀಕರರು ಮಾಸ್ಕರರಾದರು. - ಹೀಗೆ ಈ ಚಿಕ್ಕ ಹಳ್ಳಿಯು ರೂಪವನ್ನು ತಾಳಹತ್ತಿತು. ಆ ವರ್ಷ ಮಳೆಯಲ್ಲಿ ಭೂತ ಸಂಚಾರವಾಗಿತ್ತೋ ಏನೋ, ಪ್ರಾರಂಭವಾದ ಮಳೆಯು ಅಖಂಡವಾಗಿ ಹೊಡೆಯಹತ್ತಿತು. ಈ ಅತಿವೃಷ್ಟಿಗೆ ಮನೆಗಳೆಲ್ಲ ಬಿದ್ದವು. ಊರೆಲ್ಲ ಕೆಸರುಮಯವಾಯಿತು, ನಿಲ್ಲಲು ಬೆಚ್ಚಗಿನ ಸ್ಥಳವೇ ಇಲ್ಲದಾಯಿತು. ಇಂತಹ ಮಳೆಯಲ್ಲಿಯೇ ಒಬ್ಬ ಕೆಲಗಾಗಾರನ ಹೆಂಡತಿಯು ಬೇನೆತಿನ ಹತ್ತಿದಳು. ಈ ಪರಿಸ್ಥಿತಿಯಲ್ಲಿ ಆಕೆಗೆ ಸಹಾಯ ಮಾಡುವವರಾರು ? ಕು. ಸೌ|| ರಾಧಾಬಾಯಿ ಹಾಗೂ ಗಂಗಾಬಾಯಿ ಜಾಂಭೆಕರರು ಆಕೆಯ ನೆರವಿಗಾಗಿ ಧಾವಿಸಿದರು, ತಲೆಯ ಮೇಲೆ ಎರಡು ತಗಡು ನಿಲ್ಲಿಸಿದರು. ಆಕೆಯು ಸುರಕ್ಷಿತವಾಗಿ ಅವಳಿ-ಜವಳಿ ಮಕ್ಕಳನ್ನು ಹೆತ್ತಳು, ಹೊಸ ಊರನ್ನು ಕಟ್ಟುವದೆಂದರೆ ಸಾಮಾನ್ಯ ಕೆಲಸವಲ್ಲ. ಎಷ್ಟು ಬಗೆಯ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆಂಬುದಕ್ಕೆ ಈ ಉದಾಹರಣೆಯು ಸಾಕ್ಷಿಯಾಗಿದೆ. ಮಳೆ ನಿಂತಿತು. ಬಿದ್ದ ಮನೆಗಳನ್ನೆಲ್ಲ ಕಟ್ಟಬೇಕಾಗಿದ್ದಿತು. ಬಲೆಯಲ್ಲಿ ಬಿದ್ದ ಎರಳೆಯಂತೆ ರಾಯರ ಗತಿಯಾಗಿದ್ದಿತು. ಬಿಳಿಮಣ್ಣು ಬೆರೆಯದೆ ಹೆಂಟೆಗಳು ಗಟ್ಟಿಯಾಗಲಾರನೆಂದು ತಿಳಿದು ಬಿಳಿಮಣ್ಣುಳ, ನಖಾತನೀಯವರ ಹೊಲಕೊಳ್ಳವ ಯೋಚನೆ ಮಾಡಿದರು, ಆದರೆ ಕೈಯಲ್ಲಿ ಹಣವಿರಲಿಲ್ಲ. ರಾಜಾಸಾಹೇಬರನ್ನು ಕೇಳುವ ಮನಸ್ಸಿರಲಿಲ್ಲ. ಹಳೆಯ ಗೆಳೆಯರಾದ ಗಿಂಡೆಯವರಿಗೆ ೧೦ ಸಾವಿರ ರೂಪಾಯಿ ಕಳಿಸಲು ಚೀಟಿ ಬರೆದು ಕೆ, ಕೆ, ಯವರನ್ನು