ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಬೇಕೆಂದರೆ ಲಕ್ಷ್ಮಣರಾಯರು ಇಂತಹ ನೂರಾರು ಜನರ ಸುಪ್ತಶಕ್ತಿಗಳನ್ನು ಜಾಗೃತಗೊಳಿಸಿ ಅವರಿಗೆ ಉತ್ತೇಜನವಿತ್ತು ಕಿರ್ಲೋಸ್ಕರವಾಡಿಯ ವಿಕಾಸ ವನ್ನು ಮಾಡಿದರು. - ಸ್ವಾತಂತ್ರ್ಯ ಸಿಕ್ಕರೂ ನಮ್ಮ ದೇಶದ ವಿಕಾಸವು ಇಷ್ಟೇಕೆ ಮಂದಗತಿ. ಯಿಂದ ಸಾಗಿದೆ ? ನಮ್ಮ ಹತ್ತರ ಹಣವಿಲ್ಲವೆ ? ತಜ್ಞರ ಅಭಾವವೇ ? ಹಾಗೆ ವಿಚಾರಮಾಡಿದರೆ, ಲಕ್ಷ್ಮಣರಾಯರಲ್ಲಿ ಏನಿದ್ದಿತು ? ಬರಿಗೈಯ ಈ ಗ್ರಹಸ ಅಲ್ಪ-ಸ್ವಲ್ಪ ಯಂತ್ರ ಸಾಮಗ್ರಿಗಳಿಂದ ಆಜ್ಞರಾದ ಕೆಲವೇ ಜನರನ್ನು ಕಟ್ಟ? ಕೊಂಡು ಅವರಲ್ಲಿ ಹುರುಸನ್ನು ತುಂಬಿ ಒಂದು ಬೀಳು ಬೈಲಿನಲ್ಲಿ ನಂದನವನ್ನು ನಿರ್ಮಿಸಲಿಲ್ಲವೇ ! ಇಂತಹ ಧೈಯವಾದಿಗಳ ಅಭಾವವೇ ಇದಕ್ಕೆ ಕಾರಣವೆಂದು ನನ್ನ ಮತ, ಸ್ವರಾಜ್ಯವನ್ನು ಸುರಾಜ್ಯ ಮಾಡಲು ನಮ್ಮಲ್ಲಿ ಹಣದ ಕಣಜಪಿಲ್ಲ ನಿಜ, ಆದರೆ ಚೀನ ಒಂದನ್ನು ಬಿಟ್ಟರೆ ನಮ್ಮಲ್ಲಿದ್ದ ಷ್ಟು ಮನುಷ್ಯ ಬಲ ಜಗತ್ತಿನ ಯಾವ ದೇಶದಲ್ಲಿದೆ ? ಅವರಲ್ಲಿಯ ಸುಪ್ತ ಉತ್ಸಾಹ, ಕತೃತ್ಯ, ಹಾಗು ಸಹಕಾರವೃತ್ತಿಗಳಿಗೆ ಪ್ರೋತ್ಸಾಹಕೊಟ್ಟು, ಕಾರ್ಯಪ್ರವೃತ್ತ ಮಾಡಿದರೆ ನಮಗೆ ಯಾವಕೊರತೆ ? ಜನತೆಯಲ್ಲಿ ಈ ವಿಧಾಯಕ ಕಾರ್ಯಕ್ಕೆ ಅಣಿಯಾಗಲು ಸ್ಫೂರ್ತಿಯನ್ನು ತುಂಬುವವರು ಯಾರು ಎಂಬುದೇ ಮುಖ್ಯ ಪ್ರಶ್ನೆ! ಸಾಮಾನ್ಯ ಜನರಿಂದ ಅಸಾಮಾನ್ಯ ಕಾರ್ಯಮಾಡಿಸಿಕೊಳ್ಳುವ ಸಾಮರ್ಥ್ಯ ಯಾರಲ್ಲವೆ ? ಈ ಕಾರ್ಯವು ಕೇವಲ ಮಾತಿನ ಮಲ್ಲರಿಂದ ಆಗದು, ಅವು ಉಚ್ಯಯೋಗ್ಯತೆಯು ವರೂ, ಕಲ್ಪ ಕರೂ, ಸಂಘಟಕರೂ, ಚತುರರೂ ಇದ್ದರೆ ಮಾತ್ರ ಇಂತಹ ವಿಕ್ರಮವನ್ನು ಸಾಧಿಸಬಲ್ಲರು, ಇಂತ. ಹರು ವಿರಳ. ಆದುದರಿಂದ ದೇಶವು ತೀವ್ರಗತಿಯಿಂದ ಮುಂದು ವರಿಯ, ಬೇಕೆಂದು ಬಯಸುವವರು ಪ್ರತಿ ಕ್ಷೇತ್ರದಲ್ಲಿಯೂ ಕಲ್ಪಕ ಹಾಗು ಹೊಸ ಹೊಸ ಯೋಜನೆಗಳನ್ನು ಯಶಸ್ವಿಯಾಗಿಸುವ ಆತ್ಮವಿಶ್ವಾಸವುಳ್ಳ ತರುಣರಿಗೆ ಸಾಹಸಮಾಡಲು ಅವಕಾಶ ಕಲ್ಪಿಸಿ ಕೊಡುವದೊಂದೇ ಉಪಾಯ, ಏಕೆಂದರೆ ಇಂತಹ ತರುಣರ ರಾಷ್ಟ್ರದ ರೂಪರೇಷೆಗಳನ್ನು ರೂಪಿಸಬಲ್ಲರ.. ಲಕ್ಷ್ಮಣರಾಯರು ಈ ಬಗೆಯ ಒಬ್ಬ ರಚನಾತ್ಮಕ ಕಾರ್ಯಕರ್ತರು. ಇದೇ ಅವರ ವೈಶಿಷ್ಟ, ಅದೇ ಆವರರ.