ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - ಬಯಲಾಟ / ೯೧

ಪ್ರಬಂಧ ಎಂಬ ವಿಶಿಷ್ಟಾರ್ಥವಿರುತ್ತದೆ. 'ಸಂಗೀತ ರತ್ನಾಕರ'ದ ಪ್ರಬಂಧಾಧ್ಯಾಯದ ಈ ಶ್ಲೋಕಗಳನ್ನು ಪರಿಶೀಲಿಸಿರಿ-
ಯತ್ತು ವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಂ |
ದೇಶಿರಾಗಾದಿಷ್ಟು ಪ್ರೋಕ್ಕಂ ತದ್ಗಾನಂ ಜನರಂಜನಂ ||

ಈ ಗಾನ (ಪ್ರಬಂಧ)ಗಳು ದೇಶಭಾಷಾ ರಚನೆಗಳಾಗಿರುವುದರಿಂದ ಆ 'ಸಾಹಿತ್ಯ'ಕ್ಕೆ 'ಮಾತು' ಎಂದೇ ಲಕ್ಷಣಗ್ರಂಥಗಳಲ್ಲಿ ಕರೆದಿರುವುದನ್ನು ಲಕ್ಷಿಸಬಹುದು- ('ಮಾತು'- ಸಂಸ್ಕೃತ ಶಬ್ದವಲ್ಲ).
ವಾಙ್ಮಾತುರುಚ್ಯತೇ ಗೇಯಂ ಧಾತುರಿತ್ಯಭಿಧೀಯತೇ
ವಾಗ್ವರ್ಣ ಸಮುದಾಯಸ್ತು ಮಾತುರಿತ್ಯುಚ್ಯತೇ ಬುಧೈ: ಇತ್ಯಾದಿ.

ವಾಗ್ಗೇಯಕಾರನೆಂದರೆ ಮಾತು (ಸಾಹಿತ್ಯ) ಮತ್ತು ಧಾತು (ಸರಿಗವಾದಿ ಸ್ವರವಿಧಿ ಅಥವಾ ರಾಗ ನಿರ್ದೇಶ) ಇವುಗಳಲ್ಲಿ ರಚನಾ ಸಾಮರ್ಥ್ಯವುಳ್ಳವನು ಎಂದರ್ಥ-
ಮಾತುಧಾತುದ್ವಯೋ: ಕರ್ತಾಪ್ರೋಕ್ತೋ ವಾಗ್ಗೇಯಕಾರಕಃ |

ಯಕ್ಷಗಾನಗಳು ಅಂತಹ 'ವಾಗ್ಗೇಯಕಾರ ರಚನೆ'ಗಳೆಂದು ಲಕ್ಷಣಕಾರರು ಹೇಳಿದ್ದಾರೆ. ಈಗ ಸುಮಾರು ೩೦೦ ವರ್ಷಕ್ಕೆ ಹಿಂದಿನವನಾದ ಆಂಧ್ರದ ಪ್ರಸಿದ್ಧ ಯಕ್ಷಗಾನ ಕವಿ ಆದಿಭಟ್ಟ, ನಾರಾಯಣದಾಸನೆಂಬುವನು ಆ ಕುರಿತು ಹೀಗೆ ಹೇಳಿದ್ದಾನೆ:

"ಯಕ್ಷಗಾನಮು ಗೂಡ ವಾಗ್ಗೇಯಕಾರ ಪ್ರಣೀತಮುಲೇ, ಶ್ರುತಿಲಯಾತ್ಮ ಕಮೈನ ರಾಗ ವೈವಿಧ್ಯಮು ಜಾತಿ ಮೂರ್ಛನಾಯುತ ಮೈನ ಸ್ವರಾಲಾಪಮುಗಲಿಗಿನ ಗೇಯ ರಚನ."

ಅಂತೆಯೇ ಇದು ವೀಣಾದಿ ವಾದ್ಯದೊಂದಿಗೆ ಹಾಡಲ್ಪಡುತ್ತಿತ್ತು ಎಂಬುದನ್ನೂ ತಂಜಾವೂರಿನ ವಿಜಯರಾಘವ ನಾಯಕನ ಆಸ್ಥಾನ ಕವಿಯಾಗಿದ್ದ ಚೆಂಗ ಕಾಳ ಕವಿ ಎಂಬುವನು 'ರಾಧಾವಿಲಾಸ'ವೆಂಬ ತನ್ನ ಕಾವ್ಯದಲ್ಲಿ ವರ್ಣಿಸಿರುವುದನ್ನು ನೋಡಬಹುದು-

ಯಕ್ಷಗಾನಂಬುನು ರಾವಣಹಸ್ತ, ಮುಡುಕು, ದಂಡ ಮೀಟಲು (ಚೆಂಗುಲು), ಜೇಕಟ, ತಾಳಮುಲನು, ಜೋಲ, ಸುವ್ವಾಲ, ಧವಳಂಬುಲೇ ಲಲಮರ, ಕೊಂದತಿವಲು ಏನಿಪಿ೦ಚಿರ೦ದಮುಗನು.”

ಆಂಧ್ರದ ಲಕ್ಷಣ ಗ್ರಂಥಗಳಲ್ಲಿ 'ಯಕ್ಷಗಾನ ಲಕ್ಷಣ'ವೆಂದು ಕೊಟ್ಟಿರುವುದು ಯಾವ ಯಾವ ವಿಧದ ಪದ್ಯಗಳು, ಹಾಡುಗಳು ಆ ರಚನೆಯಲ್ಲಿ ಬರುತ್ತವೆ ಎಂಬುದನ್ನೇ ಅಲ್ಲಿಯ ಪ್ರಾಚೀನತಮ ಕಾವ್ಯಲಕ್ಷಣ ಗ್ರಂಥವೆನ್ನಲಾದ 'ಲಕ್ಷಣ ದೀಪಿಕಾ' ಎಂಬುದರಲ್ಲಿ ಅದು ಹೀಗಿದೆ :

"ಯಕ್ಷಗಾನ೦ಬುನನ್ ವಲಯು ಪದ೦ಬುಲು, ದರವುಲು, ನೇಲಲು, ಧವಳಂಬುಲು, ಮಂಗಳ ಹಾರತುಲು, ಶೋಭನಂಬುಲು, ನುಯ್ಯಾಲು ಜೋಲಲು, ಜಕ್ಕುಲರೇಕು ಪದಂಬುಲು, ಕಂದವೃತ್ತಾದುಲು, ಚಂದಮಾಮ ಸುದ್ದುಲು, ಅಷ್ಟಕಂಬುಲು, ಏಕಪದ, ದ್ವಿಪದ, ತ್ರಿಪದ, ಚತುಷ್ಪದ, ಷಟ್ಟದಾಷ್ಟಪದುಲುನಿವಿಯಾದಿಗಾಗಲ್ಲು ನನ್ನಿಯು ಲಯಪ್ರಮಾಣಂಬುಲುನೊಪ್ಪಿ ಮೃದುಮಧುರ ರಚನಲ ಪ್ರಸಿದ್ಧಂಬೈನ ಕವಿತ್ವಂಬುಲು" ('ಲಕ್ಷಣ ದೀಪಿಕಾ' -ಪ್ರಾಚ್ಯಲಿಖಿತ ಪುಸ್ತಕ ಭಂಡಾರ. ಡಿ. ನಂ. ೧೩೨೯).