ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕುರಿತು ಬರೆದ ಎರಡು ಚಿಕ್ಕ ಬರಹಗಳು ('ರಾಷ್ಟ್ರಮತ' ಪತ್ರಿಕೆಯಲ್ಲಿ ಪ್ರಕಟಿತವಾದವು ಗಳು) ದೊರೆಯದ ಕಾರಣ, ಅವುಗಳನ್ನು ಸೇರಿಸಿಲ್ಲ. ಎಂತಿದ್ದರೂ, ಸುಬ್ಬನ ಸಮಸ್ಯೆಯ ಕುರಿತು ಕಾರಂತರ ನಿಲುಮೆಯೂ ಅನಂತರ ಬದಲಾಗಿರುವುದರಿಂದ, ಆ ಎರಡು ಬರಹ ಗಳು ಇಲ್ಲದಿರುವುದು ದೊಡ್ಡ ಲೋಪವಲ್ಲ ಎಂದು ಭಾವಿಸುತ್ತೇನೆ. ನಾಟ್ಯಶಾಸ್ತ್ರ ಮತ್ತು ರಂಗಭೂಮಿಯ ಕುರಿತು 'ಸೂಡ-ಸೂಳಾದಿ-ಸಾಲಗ' ವಿಚಾರದಲ್ಲಿ ಒಂದೊಂದು ಲೇಖನ ವನ್ನು ಮಾತ್ರ ಆರಿಸಿಕೊಂಡಿದೆ.

ಅರಿಕೆ
ಈ ಸಂಪುಟವು ಸಮಗ್ರ ಎಂದು ಹೇಳಲು ಸಾಧ್ಯವಿಲ್ಲ. ಕುಕ್ಕಿಲರ ಒಂದೆರಡು ಲೇಖನಗಳು ಗಮನಕ್ಕೆ ಬಾರದೆ ಬಿಟ್ಟು ಹೋಗಿರಬಹುದು. ಇನ್ನು, ಪುನರಾವರ್ತನೆಯ ವಿಚಾರ. ಬೇರೆ ಬೇರೆ ಸಂದರ್ಭಗಳಿಗಾಗಿ ಬರದ ಬಿಡಿ ಬಿಡಿ ಲೇಖನಗಳಾದುದರಿಂದ ಕೆಲವು ವಿಷಯಗಳು ಪುನಃ ಪುನಃ ಬಂದಿರುವುದು ಸಹಜ. ಅಂತಹ ಅಂಶಗಳನ್ನು ಕಡಿತ ಗೊಳಿಸಬಹುದಿತ್ತು. ಆದರೆ, ಒಟ್ಟು ಲೇಖನಗಳ ಅಂಗಭಂಗವಾಗಬಾರದೆಂಬುದರಿಂದ, ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಕುಕ್ಕಿಲ ಕೃಷ್ಣ ಭಟ್ಟರ ಈ ಲೇಖನಗಳಲ್ಲಿ ವಿವೇಚಿಸಲ್ಪಟ್ಟ ಎಲ್ಲ ವಿಷಯಗಳ ಕುರಿತು, ಈ ಸಂಪಾದಕನಿಗೆ ಪಾಂಡಿತ್ಯವಿಲ್ಲ, ಆಸಕ್ತಿ ಮಾತ್ರ ಇದೆ. ಇಲ್ಲಿಯ ವಿಷಯಗಳ ಕುರಿತು ಮತ್ತು ಕುಕ್ಕಿಲರ ಕುರಿತು ಇರುವ ಅಭಿಮಾನವ ಸಂಪಾದಕತ್ವಕ್ಕೆ ಕಾರಣ. ಇದರಲ್ಲಿ ಬಂದಿರುವ ತೀರ ತಾಂತ್ರಿಕ ಪಾರಿಭಾಷಿಕ ವಿಷಯಕವಾದ ಸಂಸ್ಕೃತ ಶ್ಲೋಕಗಳ ಕರಡಚ್ಚು ತಿದ್ದುವಿಕೆಯು ಸಮರ್ಪಕವಾಗಿ ಆಗಿದೆ ಎಂಬ ಧೈರ್ಯವಿಲ್ಲ. ಈ ಕುರಿತು ಅಭಿಜ್ಞರು ಔದಾರದಿಂದ ಮನ್ನಿಸಿ ತಪ್ಪುಗಳನ್ನು ಸೂಚಿಸಬೇಕಾಗಿ ಕೋರುತ್ತೇನೆ.

'ಕುಕ್ಕಿಲ ಪ್ರಶಸ್ತಿ'ಯಲ್ಲಿ ಅವರ ಜೀವನ-ಸಾಧನೆಗಳ ಪರಿಚಯದ ಲೇಖನವನ್ನು ಮೊದಲು ನೀಡಿ, ಅನಂತರ ಅವರನ್ನು ವಿವಿಧ ಕೋನಗಳಿಂದ ಕಂಡ ಮಹನೀಯರ ಲೇಖನಗಳನ್ನು ಅಳವಡಿಸಿದೆ. ಈ ವಿಭಾಗಕ್ಕಾಗಿ, ದಿ। ಸೇಡಿಯಾಪು ಅವರು ಲೇಖನವನ್ನು ಬರೆದು ಕೊಟ್ಟಿರುವುದು ನಮಗೆ ವಿಶೇಷ ಅಭಿಮಾನದ ಸಂಗತಿಯಾಗಿದೆ.

ಕೃತಜ್ಞತೆಗಳು
ಮೊದಲ ಭಾಗದ ಹೆಚ್ಚಿನ ಲೇಖನಗಳನ್ನು ಒದಗಿಸಿಕೊಟ್ಟವರು ಶ್ರೀ ಕುಕ್ಕಿಲ ನಾರಾಯಣ ಭಟ್ಟರು. ಅವರು ಎರಡನೆಯ ಭಾಗಕ್ಕಾಗಿ ಲೇಖನವನ್ನೂ ಬರೆದಿದ್ದಾರೆ. ಅವರೂ, ಅವರ ಸೋದರ-ಸೋದರಿಯರೂ ಲೇಖನಗಳ ಪ್ರಕಾಶನಕ್ಕೆ ಅನುಮತಿ ನೀಡಿದ್ದಾರೆ. ಈಯೆಲ್ಲ ಸಹಕಾರಕ್ಕಾಗಿ ಅವರೆಲ್ಲರಿಗೆ ಕೃತಜ್ಞನಾಗಿದ್ದೇನೆ.

ಲೇಖನಗಳನ್ನು ಒದಗಿಸುವುದರಲ್ಲಿ, ಜೋಡಿಸುವುದರಲ್ಲಿ ನನಗೆ ನೆರವು ನೀಡಿದ ಈರ್ವರು ಮಿತ್ರರು- ವಿದ್ವಾಂಸರಾದ ಪ್ರೊ। ಅಮೃತ ಸೋಮೇಶ್ವರ ಮತ್ತು ಡಾ। ಪಾದೇಕಲ್ಲು ವಿಷ್ಣು ಭಟ್ಟರು. ಶ್ರೀ ಅಮೃತರು ಕುಕ್ಕಿಲರ ಕ್ಷೇತ್ರಕಾರದಲ್ಲಿ ಸಹಭಾಗಿ, ಪಾರ್ತಿಸುಬ್ಬನ ಚರ್ಚೆಯಲ್ಲಿ ಅವರ ಸಮರ್ಥಕರು, ಡಾ। ವಿಷ್ಣು ಭಟ್ಟರು ಕುಕ್ಕಿಲರನ್ನು ಹತ್ತಿರದಿಂದ ಬಲ್ಲವರು, ಅಭಿಮಾನಿ, ಕುಕ್ಕಿಲ ಪ್ರಶಸ್ತಿಗಾಗಿ ಇವರಿಬ್ಬರೂ ಲೇಖನ ಗಳನ್ನೂ ಒದಗಿಸಿದ್ದಾರೆ. ಶ್ರೀ ವಿಷ್ಣು ಭಟ್ಟರು ಕರಡಚ್ಚನ್ನೂ ತಿದ್ದುವಲ್ಲಿ ಸಹಕಾರಿ