ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೮ / ಕುಕ್ಕಿಲ ಸಂಪುಟ

-ಇಂತಹ ವಿಷಯಗಳನ್ನು ಆಧರಿಸಿಯೇ ಮುಳಿಯ ತಿಮ್ಮಪ್ಪಯ್ಯನವರು ತಮ್ಮ “ಪಾರ್ತಿಸುಬ್ಬ” ಗ್ರಂಥವನ್ನು (೧೯೪೫, ಬಾಳಿಗಾ ಎಂಡ್ ಸನ್ಸ್, ಮಂಗಳೂರು) ಬರೆದುದಾಗಿದ್ದು, ಅದರಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.

ಹೀಗೆ ನಿಶ್ಚಿತವೆಂಬಂತಿದ್ದ ವಿಚಾರವನ್ನು ಮೊದಲಾಗಿ ಪ್ರಶ್ನಿಸಿದವರು ಡಾ| ಶಿವರಾಮ ಕಾರಂತರು. ಅವರು, ಈ ಪ್ರಸಂಗಗಳ ಕರ್ತೃ ಪಾರ್ತಿಸುಬ್ಬನಲ್ಲವೆಂದೂ, ಅಜಪುರದ ಸುಬ್ಬನೆಂದೂ, ಕಣ್ಣಪುರ ಎಂದರೆ ಕುಂಬಳೆಯೇ ಆಗಬೇಕಿಲ್ಲ, ಬೇರೆ ಇರಬಹುದೆಂದೂ ವಾದಿಸಿದರು. ಸುಬ್ಬನ ಕರ್ತೃತ್ವ, ಕಾಲ, ದೇಶ, ಕೃತಿಗಳು- ಇವುಗಳೆಲ್ಲ ಹೊಸ ಚರ್ಚೆಗೆ ಒಳಗಾಗುವಂತೆ ಮಾಡಿದರು.

ಡಾ| ಕಾರಂತರು ಹೀಗೆ ಹೇಳುವುದಕ್ಕೂ ಪ್ರಬಲ ಕಾರಣಗಳಿದ್ದುವು. ಅವು ಏನೆಂದರೆ-

೧. ಪಾರ್ತಿಸುಬ್ಬನ ಕುರಿತು ಮುಳಿಯ ತಿಮ್ಮಪ್ಪಯ್ಯನವರು ಮತ್ತು ಕರ್ನಾಟಕ ಕವಿಚರಿತ್ರೆಕಾರರು ಸೂಚಿಸಿದ್ದ ಕಾಲದ ಅವಧಿ (೧೭೫೦-೧೮೫೦)ಗೆ ಮೊದಲೇ ಪ್ರತಿಗೊಂಡ, ಅವನದೆನ್ನಲಾದ ಪ್ರಸಂಗಗಳು ಅವರಿಗೆ ಸಿಕ್ಕಿದ್ದು.

೨. ಉತ್ತರ ಕನ್ನಡದ ಕರ್ಕಿಯಲ್ಲಿ ಅವರಿಗೆ ದೊರತ ರಾಮಾಯಣ ಪ್ರಸಂಗಗಳ ಸಂಪುಟದಲ್ಲಿ, ಮೇಲೆ ಉದ್ದರಿಸಿದ ಪದ್ಯದ ಪಾಠಾಂತರವಿದ್ದು, ಅದರಲ್ಲಿ 'ಪಾರ್ವತೀನಂದನ' ಎಂಬ ಪದ ಇಲ್ಲದಿರುವುದು.

೩. ಕರ್ಕಿ ತಾಡವಾಲೆ ಸಂಪುಟದಲ್ಲಿದ್ದ, ವೆಂಕಟಕವಿ ವಿರಚಿತ ಮೈರಾವಣ ಕಾಳಗದಲ್ಲಿ ಬರುವ “...ಅಜಪುರದ ಬಂಧಕುದೊಳುದಿಸಿದ ಸುಜನಸುರಧೇನು ವೆಂಕಟಾತ್ಮಜ ನೆನಿಪ ಸುಬ್ಬಾಭಿಧಾನನ ನಿಜಪದಯುಗಳ...” ಎಂಬ ಮಾತುಗಳು. ಇವು ಅಜಪುರದ ಸುಬ್ಬನ ಮಗ ವೆಂಕಟನು, ತನ್ನ ತಂದೆಯ ಬಗ್ಗೆ ಮಾಡಿದ ಸ್ತುತಿ ಇದರಿಂದಾಗಿ, ಮೈರಾವಣ ಕಾಳಗದ ಕವಿಯ ತಂದೆ ಸುಬ್ಬನೇ, ರಾಮಾಯಣ ಪ್ರಸಂಗಗಳ ಕರ್ತೃ ಎಂಬ ಊಹೆ.

ಹಾಗಾಗಿ ಪಾರ್ತಿಸುಬ್ಬನೆಂಬ ವ್ಯಕ್ತಿ ಇದ್ದಿರಬಹುದು, ಆದರೆ, ಪ್ರಸಂಗಗಳ ಕವಿ ಅವನಲ್ಲ ಎಂದು ಅವರ ಮಂಡನೆ.

ಹೀಗೆ ಆರಂಭವಾದ ಚರ್ಚೆಯಲ್ಲಿ ಹಲವು ಪ್ರಶ್ನೆಗಳು ಮುಂದೆ ಬಂದುವು ಯಕ್ಷಗಾನ ಕವಿಗಳಾದ ಸುಬ್ಬರಷ್ಟು ಮಂದಿ? ಅವರ ಕೃತಿಗಳಾವುವು? ಕಾರಂತರು ಉಲ್ಲೇಖಿಸಿದ ಅಜಪುರದ ಸುಬ್ಬನ ಊರು ಯಾವುದು? ಬ್ರಹ್ಮಾವರವೊ, ಆಡುವಳ್ಳಿಯೋ? ಕಣ್ಣಪುರ ಯಾವುದು? ಮಧೂರು (ಮಧುಪುರ) ಯಾವುದು? ಪಾರ್ತಿಸುಬ್ಬನ ಕಾಲ, ವಂಶ, ಜಾತಿ ಯಾವುವು? ಪಾರ್ತಿಸುಬ್ಬನದೆನ್ನುವ ಕೃತಿಗಳು ಯಾವುವು? ಯಾವುವು ಅವನವಲ್ಲ? ಎಂಬ ಪ್ರಶ್ನೆಗಳು ಪರಿಶೀಲನೆಗೆ ಒಳಗಾದುವು. ಜತೆಗೆ, ಪಾರ್ತಿಸುಬ್ಬ, ಅಜಪುರದ ಸುಬ್ಬ (ವೆಂಕಾರ್ಯನ ಮಗ), ನಗಿರೆ ಸುಬ್ಬ (ದೈವಜ್ಞ ವಿಠಲ - ಗೌರಿಯವರ ಮಗ) ಈ ಮೂವರ ಸ್ಥಳ, ಕೃತಿಗಳ ಬಗೆಗೂ ಗೊಂದಲ ವುಂಟಾಯಿತು. ಹಲವಾರು ದಾಖಲೆಗಳು, ಹೇಳಿಕೆಗಳು, ಪುರಾವೆಗಳು ಮಂಡಿಸಲ್ಪಟ್ಟುವು. ಪಾರ್ತಿಸುಬ್ಬನೇ ಆ ಕವಿ, ಆತನು ಕುಂಬಳೆಯವನು, ಕಣ್ಣಪುರವು ಕುಂಬಳೆಯೇ ಎಂದು ಒಂದು ಪಕ್ಷ. ಪಾರ್ತಿಸುಬ್ಬನೆಂಬ ವ್ಯಕ್ತಿ, ಪ್ರಸಂಗಕರ್ತೃವಲ್ಲ, ರಾಮಾಯಣ ಪ್ರಸಂಗ ಗಳು, ಕೃಷ್ಣಲೀಲೆ ಮೊದಲಾದ ಪ್ರಸಂಗಗಳ ಕರ್ತೃ ಬೇರೊಬ್ಬ (ಒಂದೋ ಅಜಪುರದ -