೧೫೬ / ಕುಕ್ಕಿಲ ಸಂಪುಟ
ರೂಪಕ:
ವಿಶ್ವನಾಯ । ಕಾ- । ನಿನ್ನ ವಾಕ್ಯ । ವ ।
ವಿಶ್ವಾಸವೆಂ । ದು । ನಂಬಿದೆನಿಂ । ದು- ॥ ೧ ॥
ಎನ್ನ ವೈರಿ । ಯ- । ಮುಂದೆ ಮಾಡಿ । ನೀ- ।
ಕಣ್ಣಿನಲ್ಲಿ । ಯೇ- । ಕಂಡೆ ಚೆನ್ನ । ನೆ- ॥ ೨ ॥
- - - - - - - - - - - - - - - - -
ವಾಲಿಯು ನಿ । ನ್ನ- । ಕಾಣಲಿರ್ವ । ರ- ।
ಆಳುಭೇದ । ವ- । ಅರಿಯದಾದೆ । ನು- ॥ ೩ ॥
ಹೀಗೆ ಬಿಂಬಪ್ರತಿಬಿಂಬ ಭಾವವಿರುವ ನೂರಾರು ಪದ್ಯಗಳಿವೆ. ಎಲ್ಲವನ್ನೂ ಉದಾಹರಿಸುವುದಕ್ಕೆ ಇದು ಸಮಯವಲ್ಲ, ಯಥಾವಕಾಶ ನೋಡೋಣ. ಪ್ರಕೃತ ಶೂರ್ಪಣಖಿಯ ಕರ್ಣನಾಸಕುಚಚ್ಛೇದನವು ಕಥಕಳಿಯಲ್ಲಿರುವುದಕ್ಕೆ ರಾಮನಾಟದ 'ಖರವಧಂ' ಸಂಧಿಯ ಈ ಒಂದು ಪದ್ಯವನ್ನು ಪರಿಭಾವಿಸಿರಿ.
ವೃತ್ತಂ:
ಶ್ರೀ ರಾಮನೋಡು ಜನಕಾತ್ಮಜ ಚೊಲ್ಲು ಮಪ್ಲೋಳ್ ।
ವೀರೇಣ ಸಾ ರಘುವರಸ್ಯ ಸಹೋದರೇಣ ।
ಆರಾನ್ನಿಕೃಷ್ಣ ಘನಕರ್ಣಕುಚಾತಿ ಘೋರಾ ।
ಶ್ರೀ ರಾಘವಂ ನಿರನುನಾಸಿಕ ಮೇತ್ಯ ಚೆನ್ನಾಳ್ ॥
ಪಾರ್ತಿಸುಬ್ಬನ ಪಂಚವಟಿ ಪ್ರಸಂಗದಲ್ಲಿ ಈ ಪದ್ಯದಿಂದ ಅದು ಸ್ಪಷ್ಟವಾಗುತ್ತದಷ್ಟೆ.
ಇತ್ತ ಬಾರೆಂದಸುರೆ ಹಸ್ತವ
ನೆತ್ತಿ ತವಕದೊಳೆರಡು ಮೊಲೆಗಳ
ನೊತ್ತಿ ಎಳೆದಾ ಖಡುಗದಿಂದಲೆ ಕತ್ತರಿಸಿದ ।
ಕೆತ್ತಿದನು ನಾಸಿಕವ...
ಕೊಟ್ಟಾರಕರದ ರಾಜನು ಈ ಕುಚಚ್ಛೇದನ ಪ್ರಕರಣವನ್ನು ಕಂಬ ರಾಮಾಯಣದಿಂದ ಆಯ್ದುಕೊಂಡನೆಂದು ಕೇರಳದ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಇನ್ನು ಶ್ರೀ ಕಾರಂತರು ಬ್ರಹ್ಮಾವರದವನೆಂದು ಹೇಳುವ, ಆಡುವಳ್ಳಿಯ ವೆಂಕಾರ್ಯನ ಮಗ ಸುಬ್ಬನು ಈ ರಾಮಾಯಣ ಐರಾವತ ಮೊದಲಾದ ಪ್ರಸಂಗಗಳನ್ನು ರಚಿಸಿದನೆಂಬ ಶ್ರೀಯುತರ ಕಲ್ಪನೆಯು ಅತ್ಯಂತ ದುರೂಹ್ಯವೆಂಬುದು ಇದೊಂದು ನಿದರ್ಶನದಿಂದ ಸುವೇದ್ಯವಾಗುವುದು- ವೆಂಕಾರ್ಯನ ಮಗ ಸುಬ್ಬನು ಕೇವಲ ಕಂದಪದ್ಯಗಳಲ್ಲಿಯ ಹನುಮದ್ರಾಮಾಯಣವೆಂಬ ಬೃಹತ್ ಕಾವ್ಯವನ್ನು ಬರೆದ ಕವಿ, ಶುದ್ಧವಾದ ಕಂದ ಪದ್ಯಗಳನ್ನು ರಚಿಸುವುದರಲ್ಲಿ ಆತನು ಸಿದ್ಧಹಸ್ತನೆಂಬುದು ಸರ್ವಶ್ರುತ. ಪಾರ್ತಿಸುಬ್ಬನ ರಚನೆಗಳಲ್ಲಿ ಕಂದ ಪದ್ಯಗಳು ಅತಿ ವಿರಳ. ಇದ್ದುವು ಸಹ ಛಂದೋ ಭಂಗದಲ್ಲಿವೆ. ತನಗೆ ಕಂದ ಪದ್ಯಗಳನ್ನು ರಚಿಸುವುದಕ್ಕೆ ತಿಳಿಯುವುದಿಲ್ಲ ಎಂದು ಆತನು ತನ್ನ ಐರಾವತ ಪ್ರಸಂಗದ ಕೊನೆಗೆ ವಿನಯದಿಂದ ಹೇಳಿಕೊಂಡಿದ್ದಾನೆ. 'ಅರಿಯೆ ಲಕ್ಷಣ ಕಂದಪದ್ಯವಡಿ ಪ್ರಾಸು...' ಎಂಬ ಆ ವಾರ್ಧಿಕ ಷಟ್ನದಿಯು ಅಚ್ಚಾದ 'ಐರಾವತ'