ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೪/ಕುಕ್ಕಿಲ ಸಂಪುಟ


ಕಂಕಣ ಕೈಯ ತೊಳ್ಬಳೆ ಮುಂಗೈಸರಿಗೆ ಪ|
ದ್ಮಾ೦ಕಿತ ಹಸ್ತೆ ಕೇಸರಿಮಧ್ಯೆ|
ಕುಂಕುಮ ಗಂಧ ಕಸ್ತುರಿ ಪರಿಮಳ ಸರ್ವಾ|
ಲಂಕಾರವಾದಳಂಬುಜ ನಯನೆ||
ಕಂಬುಕಂಧರೆ ಚೆಲ್ವ ಕಳಕೀರ ಮೃದುವಾಣಿ |
ಪೊಂಬಾಳೆದೊಡೆ ತಳಿರ್ಪದಯುಗೆ |
ತುಂಬಿದ ಗುರುನಿತಂಬಿನಿ ಯುಟ್ಟಳೆಸೆವ ದಿ|
ವ್ಯಾ೦ಬರಗಳ ಮದಗಜಗಮನೆ ||
ಮೇಲು ಮುತ್ತಿನ ಹಾರ ಮೆರೆವ ಮೂಗುತಿಯ ನೀ |
ಲಾಳಕಿ ಧರಿಸಿದಳಳವಡಿಸಿ |
ಕಾಲಲಂದುಗೆ ಗೆಜ್ಜೆ ಕಂಕಣ ಕಡಗ ಹೊ|
ನ್ನೋಲೆ ಇಟ್ಟಳು ವರಕರಿಗಮನೆ ||
ರನ್ನದಕೊಪ್ಪು ಚಿನ್ನದ ತಾಲಿ ಬಾವಲಿ |
ಗನ್ನದ ಕಾಂಚಿ ಶರಾವಂತಿ ||
ಕನ್ನಡಿ ಕೊಳಗ ಮುದ್ರಿಕೆ ನೇವಳ ಮುಖ್ಯ |
ಸನ್ನಾಹದಿ೦ದ ಸಿ೦ಗರವಾದಳು ||
ಮರಳಿ ಮಂಜಟಿ ಗುಂಜಿಹಾರ ಕೊರಳಿಗಿಕ್ಕಿ |
ಕರದೊಳಾಂತೊಡನೆ ವೀಳೆಯಪಟ್ಟಿ |
ಪರಿಮಳಗಳ ಪೂಸಿ ಸಣ್ಣ ನಾಮವನಿಕ್ಕಿ |
ಮರಿಮೃಗನಯನೆ ತಾನೊಪ್ಪಿದಳು ||

ಅಷ್ಟತಾಳ :

ಬಂದಳು ಕೊರವಂಜಿ ನೀರೆ- ಮುದ |
ದಿಂದ ತ್ರಿಭುವನವಿಸ್ತಾರೆ|
ಸೌಂದರ್ಯ ವಯದ ಶರೀರೆ-ಮನ |
ಕುಂದದ ಶರಧಿ ಗಂಭೀರೆ-ಪೂರ್ಣ |
ಚಂದಿರ ವದನೆ ಆ ನಂದಿಪೂರದನೆ ಬಾ |
ಲೇಂದುಶೇಖರ ಶರಣೆಂದು ಸಂಸ್ತುತಿಸುತ್ತ ||

ಕಡುಮುದ್ದು ಸೊಬಗಿನರನ್ನೆ- ಎಡೆ |
ಬಿಡದಿಹ ಭಾಗ್ಯಸಂಪನ್ನೆ||-
ಸಡವಿನ ನಿಜಗುಣ ರನ್ನೆ-ಖ್ಯಾತಿ |
ವಡೆದ ಸಾರಸ್ವತ ವರ್ಣೆ ಕೂಡೆ |
ಬಡನಡು ಬಳುಕುತ್ತ ನಡೆಮೆಲ್ಲ ನಡಿಯಿಡು |
ತ್ತೊಡನೆ ಪೊಂಗೊಡಮೊಲೆಯಡಗಿಸಿಕೊಳ್ಳುತ್ತ ||

ಮಾತಿನ ಮಧುರ ಸುಗೀತೆ-ಶ್ರುತಿ |
ನೂತನ ಸಾರಸಂಗೀತೆ ||
ಪಾತಕ ದುರಿತ ವಿಘಾತೆ ಖಳ |
ವ್ರಾತ ತಿಮಿರ ಸುಪ್ರಭಾತೆ-ಹರಿ |