ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೮ / ಕುಕ್ಕಿಲ ಸಂಪುಟ

ಅಷ್ಟತಾಳ:

ಕುಕ್ಕೂಕ್ಕೂ ಎಂದು । ಕೂಗಿಡ ಸತಿಯರು । ದಿಕ್ಕೆಲ್ಲ ಕೇಳಿತು । ಕುಕ್ಕೂಕ್ಕೂ।
ಅಕ್ಕೂ ಮತ್ತಿಕ್ಕೊ ಮರಕ್ಕೇರದಿರು ಬೊಮ್ಮ ರಕ್ಕಸನೈದನೆ ಕುಕ್ಕೂಕ್ಕೂ ॥
ಕೊಲುವನು ದನುಜ ಸಾಯಲು ಬೇಡ ಮರದಿಂದ ।
ಇಳಿಯಯ್ಯ ಶ್ರೀ ಕೃಷ್ಣ ಕುಕ್ಕೂಕ್ಕೂ॥
ಮೆಲುವನು ಭೇತಾಳ ಬ್ರಹ್ಮರಾಕ್ಷಸನಿಪ್ಪ ।
ಸ್ಥಳವದು ತಿಳಿಯಯ್ಯ ಕುಕ್ಕೂಕ್ಕೂ ।
ಸೀರೆಯನೊಯ್ಯರ ಶ್ರೀಕೃಷ್ಣ ನಿನಗಿಂಥ ।
ಚೋರ ವಿದ್ಯೆಯದೇಕೊ ಕುಕ್ಕೂಕ್ಕೂ
ಸೋರೆಯ ಮೊಸರ್ಬೇಣ್ಣ ಸೂರೆಯ ಮಾಳ್ ವಿ।
ಚಾರವಿದಲ್ಲಯ್ಯ ಕುಕ್ಕೂಕ್ಕೂ ॥
ಅಂಬರಗಳನೊಯ್ಯದುಚಿತವೆ ನಿನಗೆ ಪೀ ।
ತಾಂಬರ ಧಾರಿಯೆ ಕುಕ್ಕೂಕ್ಕೂ ।
ಈ ಶಂಬರ ವೈರಿಯ ಜನಕ ಈ ಬಗೆಯಲ್ಲಿ ।
ಡೊಂಬಿ ಏಳುವದಯ್ಯ? ಕುಕ್ಕೂಕ್ಕೂ ॥
ಮನೆಮನೆಗೈತಂದು ಕೆನೆಮೊಸರನ ತಿಂದು ।
ಜುಣುಗಾಡಿದಂತಲ್ಲ ಕುಕ್ಕೂಕ್ಕೂ॥
ಮನೆಯವರಿದ ಕೇಳಿದರೆ ನಿನ್ನನೆಳೆದೊಯ್ದು।
ದಣಿಸಿ ದಂಡಿಸುವರು ಕುಕ್ಕೂಕ್ಕೂ ॥
ಮತ್ತ್ವ ಕೂರ್ಮ ವರಾಹ ನರಸಿಂಹನಾದ ಶ್ರೀ ।
ಚಿತ್ರಜನಯ್ಯನ ಕುಕ್ಕೂಕ್ಕೂ ।
ಮತ್ತೆ ವಾಮನನಾದ ಕ್ಷತ್ರಿಯರನು ಕೊಂದ ।
ಉತ್ತಮ ರಾಮನ ಕುಕ್ಕೂಕ್ಕೂ ॥
ಹೊಡೆದಂಥ ಮಳೆಗಳ ದಿನ ಗೋವರ್ಧನವನ್ನು ।
ಕೊಡೆ ಮಾಡಿದವನಿಗೆ ಕುಕ್ಕೂಕ್ಕೂ ॥
ಮಡದಿಯ ವ್ರತವನ್ನು ಕೆಡಿಸಿ ವಾಜಿಯನ್ನೇರಿ ।
ನಡೆದ ನಾರಾಯಣ ಕುಕ್ಕೂಕ್ಕೂ ॥
ವಸನಂಗಳನು ಕದ್ದ ವಸುದೇವನಣುಗನೆ ।
ವಶವಾದ ನಿನ್ನ ಕುಕ್ಕೂಕ್ಕೂ ।
ವಸುಧೆಯೊಳಗೆ ಕಣ್ಣಪುರದ ಗೋಪಾಲನ । ಬಿಸರುಹ ಚರಣಕ್ಕೆ ಕುಕ್ಕೂಕ್ಕೂ ॥

ಏಕತಾಳ:

ಶ್ರೀಕೃಷ್ಣ : ಮರುಳುಗ । ಳಾದಿರೇನಿರೇ... ನೀ ।ರೆಯರ್ನೀವು ॥ ಪ ॥
ಮರುಳುಗ । ಘಾದಿರೇನೆ । ಕೆರೆಯಲ್ಲಿ । ನಿಂತುಕೊಂಡು ।
ತಿರವಳಿ । ದವರಂತೆ । ಮೊರೆಯಿಟ್ಟು । ಮರುಗುವರೆ ॥
ಬ್ರಹ್ಮರ । ಕಸ ತಿಂದ । ಡೆಮ್ಮವ । ರಿಗೆ ಕುಂದು ।
ಉಮ್ಮಳಿ । ಸುತ ನೀವು । ಸುಮ್ಮನೆ । ಕರೆವುದೇಕೆ ॥