ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ಕೋಟ ಶಿವರಾಮ ಕಾರಂತರ 'ಸುಬ್ಬನ ಸಮಸ್ಯೆ' / ೧೮೩

ಒಪ್ಪುವ ವಿಷಯ. ಹಾಗಿದ್ದರೂ ಜನಸಾಮಾನ್ಯರಲ್ಲಿ ಕೆಲವರು ಹೆಸರನ್ನು ಮಾತ್ರ ಲಕ್ಷಿಸಿ ದೂರಸ್ಥವನಸ್ಪತಿ ನ್ಯಾಯ'ದಂತೆ ಇಬ್ಬರನ್ನು ಒಬ್ಬನೆಂದೂ, ಇಬ್ಬರ ಕೃತಿಗಳನ್ನು ಒಬ್ಬನದೆಂದೂ ಭ್ರಮಿಸುವುದುಂಟು. ಒಂದೇ ಹೆಸರಿನ ಕೃತಿಗಳನ್ನು ಬೇರೆ ಬೇರೆ ಹೆಸರಿನ ಕವಿಗಳು ರಚಿಸಿದ್ದರೂ ಅವೆಲ್ಲ ಒಬ್ಬನವೆಂದೇ ಅಥವಾ ಒಬ್ಬನದನ್ನು ಮತ್ತೊಬ್ಬನ ದಂದು ಸಹ ತಿಳಿದವರುಂಟು. ಹೀಗೆ ನಗರದ ಸುಬ್ಬನು ಬರೆದ 'ರಾವಣೋದ್ಭವ'ವನ್ನು ಪಾರ್ತಿಸುಬ್ಬನ ಕೃತಿ ಎಂದು ಭ್ರಮಿಸಿದವರಿದ್ದಾರೆ. ಅನ್ಯ ಕವಿಕೃತವಾದ ಇಂದ್ರಜಿತು ಕಾಳಗ, ಕುಂಭಕರ್ಣನ ಕಾಳಗ, ಪುತ್ರಕಾಮೇಷ್ಟಿ, ಸೀತಾ ಸ್ವಯಂವರ, ಬಾಲಲೀಲೆ ಮೊದಲಾದ ಹಲವು ಕೃತಿಗಳನ್ನು ಪಾರ್ತಿಸುಬ್ಬನ ಕೃತಿಗಳೆಂದೂ, ಆತನಿಂದ ರಚಿಸಲ್ಪಟ್ಟಿ ಬಾಲಲೀಲೆ, ಪುತ್ರಕಾಮೇಷ್ಟಿ, ಸೀತಾಸ್ವಯಂವರ ಇತ್ಯಾದಿಗಳನ್ನು ಇನ್ನೊಬ್ಬನ ಕೃತಿ ಗಳೆಂದೂ ಹಿಂದುಮುಂದು ನೋಡದೆ ಇಂದಿಗೂ ಹೇಳುತ್ತಾರೆ. ಇಂತಹ ಅವಿಚಾರಜನ್ಮ ವಾದ ಪ್ರಮಾದಗಳು ಪ್ರತಿಕಾರರಿಂದಲೂ ಮುದ್ರಣಕರ್ತರಿಂದಲೂ ಸಾಕಷ್ಟು ಸಂಘಟಿ ಸಿರುವುದೂ ನಿಜ. ಸಂಕುಚಿತ ಮನೋವೃತ್ತಿಯುಳ್ಳ ಸಾಮಾನ್ಯ ಜನರಲ್ಲಿ ಇನ್ನೊಂದು ವಿಧದವರೂ ಇದ್ದಾರೆ. ಯಾವನಾದರೊಬ್ಬ ಪ್ರಸಿದ್ಧ ವ್ಯಕ್ತಿಯಲ್ಲಿ ತಮಗೆ ಏನಾದರೊಂದು ವಿಧದ ಸಂಬಂಧವಿದೆ ಎಂದು ಹೇಳಿಕೊಂಡು ಆ ಮೂಲಕ ತಮಗೂ ಬೆಲೆ ಬರಬಹುದೆಂದು ತಿಳಿಯುವ ಬುದ್ದಿಯು ಅಂಥವರದು. ಎಲ್ಲಿಯೋ ಹುಟ್ಟಿ ಬೆಳೆದು ಕೀರ್ತಿಶೇಷರಾದ ಪ್ರಸಿದ್ಧ ಕವಿಗಳನ್ನೋ, ವಿದ್ವಾಂಸರನ್ನೂ, ಕಲಾವಿದರನ್ನೂ ತಮ್ಮ ಊರಿನವರು ಎಂದು ಹೇಳಿಕೊಂಡು ಅವರ ಹೆಸರಿನಿಂದಲಾದರೂ ತಮ್ಮ ಊರಿಗೆ ಒಂದಿಷ್ಟು ಚಾರಿತ್ರಿಕ ಮಹತ್ವವು ಬಂದರೆ ಬರಲಿ, ಆ ಮಹತ್ತಿನಲ್ಲಿ ಕಿಂಚಿತ್ತು ತಮಗೂ ಬರುವುದಲ್ಲವೇ ಎಂದು ಏನೇನೋ ಯತ್ನಗಳನ್ನು ಮಾಡುವರು.

ಹೀಗೆ ಪಾರ್ತಿಸುಬ್ಬ ಕವಿಯ ವಿಚಾರವಾಗಿಯೂ, ಹಲವು ವರ್ಷಕ್ಕೆ ಹಿಂದೊಮ್ಮೆ ಕುಂದಾಪುರದ ಮಹನೀಯರೊಬ್ಬರು ವಾದಿಸಿದ್ದರು. ಆ ಊರಲ್ಲಿ 'ಪಾರ್ತಿಬೆಟ್ಟು' ಎಂಬೊಂದು ಸ್ಥಳವಿದೆ, ಅಲ್ಲಿ ಸುಬ್ಬನೆಂಬ ವ್ಯಕ್ತಿಯೊಬ್ಬನಿದ್ದನೆಂದೂ ಹೇಳಿಕೆಯಿದೆ ಆತನು ಪರವೂರಿಗೆ ಹೋಗಿ ವಿದ್ಯಾಭ್ಯಾಸ ಮಾಡಿದಂತೆಯೂ ತಿಳಿದಿದೆ. ಅವನೇ ಯಕ್ಷಗಾನ ಕವಿ ಪಾರ್ತಿಸುಬ್ಬನಾಗಿರಬೇಕು; 'ಪಾರ್ತಿ' ಬೆಟ್ಟದವನಾದುದರಿಂದಲೆ ಅವನಿಗೆ ಪಾರ್ತಿಸುಬ್ಬನೆಂದು ಹೆಸರಾಯಿತು. ಅವನು ಹುಟ್ಟಿದ್ದಂತೂ ನಮ್ಮ ಬಡಗುತಿಟ್ಟಿನ ಕುಂದಾಪುರದಲ್ಲಿ – ಎಂದಾಗಿತ್ತು ಅವರ ವಾದದ ಸಾರ.

ಅಂದಿಗೆ ಏನೂ ಬೆಲೆಬಾರದೆ ಬಿದ್ದು ಹೋಗಿದ್ದ ಆ ವಾದವನ್ನು ಶ್ರೀ ಬೈಕಾಡಿ ವೆಂಕಟಕೃಷ್ಣರಾಯರು ಶ್ರೀ ಕಾರಂತರ 'ಸುಬ್ಬನ ವಾದ'ಕ್ಕೆ ಬೆಂಬಲವಾಗಿ ಬ್ರಹ್ಮಾವರದಿಂದ ಹೊರಟ 'ನಮ್ಮ ಅಜಪುರ' ಎಂಬ ಗ್ರಂಥದಲ್ಲಿ ಇದೀಗ ಪುನಃ ಎತ್ತಿಕೊಂಡಿದ್ದಾರೆ.

ಹೀಗೆಲ್ಲ ಸಾಮಾನ್ಯ ಜನರ ಭ್ರಾಂತಿ, ಅಜ್ಞಾನ, ದುರಾಗ್ರಹ ಇತ್ಯಾದಿ ಕುದ್ರ ಮನೋವೃತ್ತಿಯ ಪರಿಣಾಮವಾಗಿ ಕೆಲವೊಂದು ಅನ್ಯಾಯವೊ, ಅಪಚಾರವೂ ಸಂಘಟಿಸಿದರೆ ಆಶ್ಚರ್ಯವಿಲ್ಲ. ವಿಚಾರಶೂನ್ಯರು ಹೆಚ್ಚು ಕಡಮೆ ಸಮಾಜದಲ್ಲಿ ಇದ್ದೇ ಇರುತ್ತಾರೆ. ಅಂಥವರ ತಪ್ಪು ತಿಳುವಳಿಕೆಗಳನ್ನು ಜನಸಾಮಾನ್ಯರು ನಂಬಿ ಕೀರ್ತಿಶೇಷ ರಾದ ಕವಿಗಳ ಮತ್ತು ಅವರ ಕೃತಿಗಳ ವಿಚಾರದಲ್ಲಿ ಅಪಖ್ಯಾತಿ ಅಥವಾ ಅನ್ಯಾಯ ವಾಗದಂತೆ ಸತ್ಯಸಂಗತಿಗಳನ್ನು ಶೋಧಿಸಿ ಬೋಧಿಸುವುದು ವಿದ್ವಾಂಸರಾದ ವಿಮರ್ಶಕರ, ಸಂಶೋಧಕರ ಕೆಲಸ, ಅದಕ್ಕೆ ಬದಲು ವಿದ್ವಾಂಸರೇ ಇಂತಹ ತಪ್ಪು ತಿಳುವಳಿಕೆಗಳನ್ನು