ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೦ / ಕುಕ್ಕಿಲ ಸಂಪುಟ

(ಕ್ರಿ. ಶ. ೧೪೯೭)ರಲ್ಲಿ ಆ ದೇವಸ್ಥಾನದಲ್ಲಿ ಮೊದಲಾಗಿ ಪ್ರಯೋಗಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ. ಇದು ಸಪ್ರಮಾಣವಾಗಿದೆಯೆಂದು 'ಕಥಕಳಿಪ್ರಕಾರಂ' (Kathakali Prakaram by Panniseril Nanu Pillai, Kottayam. 1965) Dow ಗ್ರಂಥದಲ್ಲಿ ಸವಿಮರ್ಶವಾಗಿ ಸಮರ್ಥಿಸಲಾಗಿದೆ.
ಮೊದಲು ಪಾರ್ತಿಸುಬ್ಬನ ಕಾಲನಿರ್ಣಯಕ್ಕೆ ಪ್ರಾಮಾಣಿಕ ಆಧಾರ ದೊರೆಯ ದಿದ್ದುದರಿಂದ, ಈಗ ಸು. ೧೫೦ ವರ್ಷಕ್ಕೆ ಹಿಂದೆ ಆ ಕಣಿಪುರದಲ್ಲಿದ್ದ ಅದೇ ಹೆಸರಿನ ಇನ್ನೊಬ್ಬ ವ್ಯಕ್ತಿಯೇ ಈತನೆಂಬ ತಪ್ಪು ತಿಳುವಳಿಕೆ ಸಾಕಷ್ಟು ಹಿಂದಿನಿಂದಲೇ ರೂಢ ಮೂಲವಾಗಿತ್ತು. ಇದಕ್ಕೆ ಕಾರಣವೆಂದರೆ, ಮಧೂರು (ಮದವೂರು) ಗಣಪತಿ ದೇವಸ್ಥಾನ ದಲ್ಲಿ ೧೭೯೭ನೇ ಇಸವಿಯ ಪಿಂಗಳ ಸಂವತ್ಸರದಲ್ಲಿ ನಡೆದಿದ್ದ ಮೂಡಪ್ಪ ಸೇವೆ ಎಂಬ ಉತ್ಸವಕ್ಕೆ ಸಂಬಂಧಪಟ್ಟ ಒಂದು ಲೆಕ್ಕದ ದಾಖಲೆ, ಅದರಲ್ಲಿ, ಉತ್ಸವದ ಬೇರೆ ಬೇರೆ ವಿನಿಯೋಗಕ್ಕೆ ಹಾಗೂ ಬ್ರಾಹ್ಮಣ ಭೋಜನಕ್ಕೆ ಬೇಕಾಗುವ ದವಸಧಾನ್ಯಾದಿಗಳ ವಿವರ ಮತ್ತು ಬೇರೆ ಬೇರೆ ಕ್ರಿಯಾಭಾಗಗಳನ್ನು ನಡೆಸುವ ಬಗ್ಗೆ ಸೀಮೆಯೊಳಗಿನ ಯಾವ ಯಾವ ಗ್ರಾಮಗಳಿಂದ ಎಷ್ಟೆಷ್ಟು ಜನರು ಬರತಕ್ಕದ್ದು ಎಂಬ ವಿವರಗಳನ್ನು ಪ್ರತ್ಯೇಕ ಕಲಮುಗಳಲ್ಲಿ ಬರೆಯಲಾಗಿದೆ. ವಿನಿಯೋಗಗಳ ವಿವರ ಬರೆದಿರುವ ಮೊದಲ ಕಲಮಿನ ಶಿರೋಲೇಖನ ಸಮೇತ, ಕೆಲಸಕಾರ್ಯಗಳಿಗೆ ಬರತಕ್ಕವರ ಪೈಕಿ ಕಣಿಪುರ ಪಾರ್ತಿಸುಬ್ಬನ ಹೆಸರಿರುವ ನಾಲ್ಕನೆಯ ಕಲಮಿನ ಮೊದಲ ಭಾಗವನ್ನು ಕೆಳಗೆ ಪಡಿಯಚ್ಚಿನಲ್ಲಿ ಕೊಡಲಾಗಿದೆ. (ಒದಗಿಸಿಕೊಟ್ಟವರು- ದಿ| ಕೂಡಲು ಈಶ್ವರ ಶ್ಯಾನುಭೋಗರು)
ಚಿತ್ರ ೪-೨ (ಒಂದನೇ ಕಲಮು) ಯದಾಸ್ತು ಮದ ಊರ ಶ್ರೀ ಮಹಾ ಗಣಪತಿ ದೇವರ ಸಂನ್ನಿಧಿಯಲ್ಲು ಆಗುವಂತ್ರ ಮೂಡಪ್ಪದ ಲೆಬ್ಬಿ- ಪ್ರಾಕು ಲೆ ದಾಖಲೆ ಪ್ರಕಾರ, ಪಿಂಗಳ ಸಂ ವತ್ಸರದಾ ವಯಿಶಾಖ ಬಳಯು ಆದಿತ್ಯ ವಾರ ದಿವ್ಯ ನಡವ ಬಗ್ಗೆ ಬರದ ಲೆಬ್ಬಿದ ನಖಲು ಗಣಪತಿಯಿಡುವದು ಮೆಲಾಗ್ರ ಹಚ್ಚುವಲ್ಲಿ ಬಡಗ ಅ೦ಬಲದಲು ಯಿಡುವ ಗಣಪ ೧ರ ವಿವರ- ಚಿತ್ರ ೪-೧ ವಿವರ- - ಕಲಮು) ಸ್ಥಾನಿಕರು ಮೆಲಾಗ್ರಕೆ ಹಚ್ಚುವ ಬಗ್ಗೆ ಬ್ರಾಂಹರ ಯೆಂಜಿಲುತ್ತೆಗವ ಬಗ್ಗೆ- ಬಂಟರಿಗೆ ಯಿಕ್ಕುವ ಬಗೆ ಸಹಾ- ಪೆರಡಾಲ ಅಪ್ಪಯನ (ಅಪಯ್ಯನ?) ಮುಖಾಂತ ಜನ ೬೦ರ ವಿವರ- ಕುಂಬಳೆ ಮಾಗಣೆಯಿಂದ- ಕಣಿಪುರದಿ೦ದಾ ಪಾರ್ತಿಸುಬ್ಬ ಜನ ಇದು