ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೧೭

ವಸ್ತುವನ್ನು ವಾಚಿಕವಾಗಿ ನಿರೂಪಿಸುವುದು, ಎಂದರೆ ಕಾವ್ಯರಚನೆ, ಕವಿಯ ಕೆಲಸ. ಭರತನ ಪ್ರಯೋಗದಲ್ಲಿ ಹಾಡುವುದು ನಟರ ಪಾಲಿನ ಕೆಲಸವಲ್ಲ. ಅದಕ್ಕಾಗಿ ಗಾಯಕಗಾಯಕಿಯರು ಬೇರೆ ಇದ್ದಾರೆ. ಅಂತೆಯೇ ಹಾಡುಗಳನ್ನು ರಚಿಸುವುದೂ ಕವಿಯ ಕರ್ತವ್ಯಗಳಲ್ಲಿ ಸೇರಿದ್ದಲ್ಲ. ಅವುಗಳನ್ನು ರಚಿಸುವುದಕ್ಕಾದರೂ, ಮುಖ್ಯವಾಗಿ ಗಾನನೃತ್ತ ಗಳ ಶಾಸ್ತ್ರೀಯ ಪರಿಜ್ಞಾನವೇ ಬೇಕಾಗಿರುವುದು ಹೊರತು ವಿಶೇಷ ಕವಿಪ್ರತಿಭೆಯ ಆವಶ್ಯಕತೆ ಇರುವುದಿಲ್ಲ. ಅವು ಅಂತಹ ಸಾಲಂಕಾರದ ರಚನೆಗಳಲ್ಲ. ಹಾಗೂ ನಾಟಕದ ಕಥಾವಸ್ತುವನ್ನು ಆಶ್ರಯಿಸಿರುವ ನಿಬಂಧಗಳೂ ಅಲ್ಲ. ಮೃದಂಗಾದಿ ವಾದ್ಯಗಳ ಛಂದೋಗತಿಗಳಿಗೆ ಮತ್ತು ನರ್ತನಕ್ಕೆ ಅನುಕೂಲವಾಗುವಂತೆ ತಾಳಪ್ರಧಾನವಾಗಿ ರಚಿಸಲ್ಪಡುವ, ಪ್ರಕರಣಾರ್ಥವಿಲ್ಲದ ಖಂಡಗೀತೆಗಳು (ತುಂಡುಪದ' ಅಥವಾ 'ಚುಟುಕಿನ ಪದ್ಯ'ಗಳು) ಆಗಿರುತ್ತವೆ. ಭರತನು ಕೊಟ್ಟಿರುವ ಆ ಗೀತೆಗಳ ಲಕ್ಷ್ಯಲಕ್ಷಣ ಗಳಿಂದ ಇದು ವ್ಯಕ್ತವಾಗುವುದು. ಆ ಲಕ್ಷಣಗಳ ಮುಖ್ಯಾಂಶಗಳು ಹೀಗಿರುತ್ತವೆ :

ನೃತ್ತಾನುಕೂಲವಾದ ಈ ಗೀತೆಗಳಿಗೆ 'ಧ್ರುವಾಪದ'ಗಳೆಂದು ಹೆಸರು ಇವುಗಳೆಲ್ಲಾ ಪ್ರಾಕೃತಭಾಷೆಯ ರಚನೆಗಳು; ಇವು ಶೂರಸೇನೀ ಪ್ರಾಕೃತದಲ್ಲಿರಬೇಕೆಂದು ಸಾಮಾನ್ಯ ನಿಯಮವನ್ನು ಹೇಳುತ್ತಾನೆ೧೬ ಇವುಗಳಲ್ಲಿ ಅನೇಕ ವಿಧದ ಖಂಡತಾಲಗಳುಳ್ಳ ನಾನಾ ರೂಪದ ವಿಚಿತ್ರ ಬಂಧಗಳಿವೆ, ಎಲ್ಲವೂ ಆನೆ, ಎತ್ತು, ಹಂಸ, ಕೋಗಿಲೆ, ಕಾಗೆ ಇತ್ಯಾದಿ ಮೃಗಪಕ್ಷಿಗಳನ್ನೂ, ವಾಯು, ಅಗ್ನಿ, ಸೂರ್ಯ, ಚಂದ್ರ, ವೃಕ್ಷ, ಸಾಗರ ಮುಂತಾದ ವಸ್ತುಗಳನ್ನೂ ಉದ್ದೇಶಿಸಿ, ಅಭಿನಯಾರ್ಥ ಸಂದರ್ಭಗಳಿಗೆ ಹೋಲುವಂತೆ ಅನ್ನೋಕ್ತಿರೂಪದಲ್ಲಿ ರಚಿಸಲ್ಪಡಬೇಕಾದಂಥವು. ನಾಟಕದಲ್ಲಿ ನಾಯಕನಾಯಿಕೆಯರ ಶೃಂಗಾರಾಭಿನಯದ ದೃಶ್ಯವಿರುವುದೆಂದಾದರೆ ಆಗ ಹಾಡಲಿಕ್ಕಿರುವ ಧ್ರುವದಲ್ಲಿ, ಗಂಡಾನೆಯೂ, ಹೆಣ್ಣಾನೆಯೂ ಅನ್ನೋನ್ಯ ಪ್ರೀತಿಯಿಂದ ಜೊತೆಯಾಗಿ ಕಾಡಿನಲ್ಲಿ ವಿಹರಿಸುತ್ತವೆ ಎಂಬ ಅರ್ಥವಿರುವುದು. ಅಥವಾ ಹಂಸಮಿಥುನವು ಸರೋವರದಲ್ಲಿ ಕ್ರೀಡಾಸಕ್ತವಾಗಿದೆ ಎಂಬ ಅನ್ನೋಕ್ತಿ ಇರುತ್ತದೆ. ಇನ್ನೊಂದು ಸಂದರ್ಭದಲ್ಲಿ ಕೋಪೋದ್ರಿಕ್ತನಾದ ರಾಜನ ಪ್ರವೇಶವಿರುವುದೆಂದಾದರೆ, ಆಗ ಹಾಡತಕ್ಕ ಗೀತೆ, ಮದ್ದಾನೆಯೊಂದು ಗಿಡಮರಗಳನ್ನು ಸಿಟ್ಟಿನಿಂದ ಪುಡಿಮಾಡುತ್ತಾ ಭಯಂಕರವಾದ ಕಾನನವನ್ನು ಪ್ರವೇಶಿಸುತ್ತದೆ ಎಂಬ ಅನ್ನೋಕ್ತಿಯಲ್ಲಿರಬಹುದು.


೧೬. ಭಾಷಾಂ ತು ಶೌರಸೇನೀಂ ಹಿ ಧ್ರುವಾಣಾಂ ಸಂಪ್ರಯೋಜಯೇತ್
ಯದಾಪಿ ಮಾಗಧೀ ಯತ್ರ ಕರ್ತವ್ಯಂ ನರ್ಕುಟಂ ತಥಾ|| ೨೪೯ ||

(ನಾ. ಶಾ. ಅ. ೫)

೧೭. ಧ್ರುವಾಣಾಮಾಶ್ರಯಾಃ ಕಾರ್ಯಾ ಔಪಮ್ಯಗುಣಸಂಭವಾ
ಉತ್ತಮಾಧಮ ಮಧ್ಯಾನಾಂ ನೃಣಾಂ, ಣಾಮಥಾಪಿ ಚ|| ೨೪೯ ||

(ನಾ. ಶಾ. ಅ. ೫)

ಏಕದ್ವಿಕಲಂ ತ್ರಿಕಲಾಶ್ಚತುಷ್ಕಲಾತೋಷಕಲಾ
ಕಾರ್ಯಾ ಧ್ರುವಾವಿಧಾನೇ ಪ್ರಾವೇಶಿಕ್ಕಂತರಾಕ್ಷೇಪಃ|| ೨೪೯ ||
ವ್ಯಾ-ಏಕಕಲಾನುಸಾರಶ್ಚ ಯಥಾಕ್ಷರವಿಧಿನಾ ವಿಚಿತ್ರ
ರೂಪ ಇತಿ ವುತ ಗುರು ಲಘುದ್ರುತಾತ್ಮತ್ಯುಕ್ತಂ ಭವತಿ(ನಾ. ಶಾ. ಅ. ೫)