ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೨೧

ಅನುಬದ್ಧಾ, ವಿಲಂಬಿತಾ, ಅಡ್ಡಿತಾ, ಅಪಕೃಷ್ಣಾ ಎಂಬ ಆರು ಜಾತಿಭೇದಗಳಿವೆ.೨೫ 'ಶೀರ್ಷಕಾ' ಎಂದರೆ ಇತರ ಎಲ್ಲವಕ್ಕಿಂತ ದೊಡ್ಡದಾದ ಹಾಗೂ ಪ್ರಥಮ ಪ್ರವೇಶದಲ್ಲಿ ಹಾಡತಕ್ಕ ಪ್ರದಾನ ಕೃತಿ, ಶಿರಃಸ್ಥಾನದಲ್ಲಿರುವ ಗೀತೆ ಎಂಬ ಅರ್ಥವಾಗಿದೆ. 'ಉದ್ಧತಾ' ಎಂಬುದು ರೌದ್ರಾದ್ಭುತ ಸನ್ನಿವೇಶಗಳ ಉದ್ಧತ ನೃತ್ತಕ್ಕೆ ಉಚಿತವಾದುದು ಎಂಬ ಅರ್ಥದಲ್ಲಿ ಬಂದ ಹೆಸರು. 'ಅಡ್ಡಿ ತಾ' ಎಂದರೆ ಶೃಂಗಾರರಸೋಚಿತವಾದ ಉತ್ಕೃಷ್ಟ ಗುಣವುಳ್ಳದ್ದು ಎಂದು ಅರ್ಥ. 'ಅಡ್ಡಿ ತಾತೂತ್ಕಟ ಗುಣಾ ಶೃಂಗಾರರಸ ಸಂಭವಾ (ಭ.ನಾ. ೩೨) 'ಅಪಕೃಷ್ಣಾ' ಎಂದರೆ ದುಃಖ, ದುರ್ಗತಿ, ಕಷ್ಟ ಕಾರ್ಪಣ್ಯಾದಿ ಸಂದರ್ಭಕ್ಕೆ ಉಚಿತವಾದುದು ಎಂಬ ಅರ್ಥ. 'ವಿಲಂಬಿತಾ' ಎಂಬುದು ದುಃಖಾತಿರೇಕ ವಿಪ್ರಲಂಭ ವಿಲಾಪಾದಿ ಸಂದರ್ಭಗಳಲ್ಲಿ ವಿಲಂಬಿತ ಲಯದಲ್ಲಿ ಹಾಡಬೇಕಾದ್ದು ಎಂಬರ್ಥ. 'ಅನುಬಂಧ' ಎಂದರೆ ವಿಶೇಷ ಸಂದರ್ಭಗಳಲ್ಲಿ ಆಕಸ್ಮಾತ್ ಸಂಭವಿಸಬಹುದಾದ ಪರಿಸ್ಥಿತಿಗೆ ತಕ್ಕಂತೆ ರಾಗತಾಳಲಯಾದಿಗಳಲ್ಲಿ ತತ್ಕಾಲೋಚಿತವಾದ ವ್ಯತ್ಯಾಸವನ್ನು ಮಾಡಿ ಪ್ರಸಂಗಾವಧಾನದಿಂದ ಪ್ರಯೋಗಿಸುವ ಪ್ರತ್ಯುತ್ಪನ್ನ ಕೃತಿ ಎಂಬ ಅರ್ಥವಿರುವುದು (ಆಫ್-ಹ್ಯಾಂಡ್ ಕಾಂಪೊಸಿಷನ್).

ಔಪಮ್ಮಗುಣವನ್ನಾಶ್ರಯಿಸಿದ ಅನ್ನೋಕ್ತಿ ರಚನೆಗಳಾಗಿರುವುದರಿಂದ ಇವನ್ನು ಯಾವ ನಾಟಕದಲ್ಲಿ ಬೇಕಿದ್ದರೂ ಪ್ರಯೋಗಿಸಬಹುದಾಗಿದೆ. ಹಾಗೆ ಸರ್ವಪ್ರಯೋಗ ಸಾಮಾನ್ಯವೆಂಬುದರಿಂದಲೂ ಇವಕ್ಕೆ ಧ್ರುವಗಳು ಎಂಬ ಹೆಸರು ಸಾರ್ಥಕವಾಗಿದೆ (ಧ್ರುವಾ, ಸ್ತ್ರೀಲಿಂಗ, ಗೀತೆ), ಈ ಗೀತೆಗಳನ್ನು ಹಾಡುವಾಗ ದುಃಖಾತಿರೇಕ, ತೀವ್ರ ಸಂತಾಪ, ವ್ಯಾಧಿ, ಮೂರ್ಛ, ಮೋಹ, ದೀರ್ಘಾಲೋಚನೆ, ನಿರ್ವೇದ, ದೈನ್ಯ ಇತ್ಯಾದಿ ಕೆಲವೊಂದು ಸಂದರ್ಭಗಳನ್ನು೨೬ ಬಿಟ್ಟು ಉಳಿದ ಸಂದರ್ಭಗಳಲ್ಲೆಲ್ಲ ಪಾತ್ರಗಳು ಕುಣಿಯಬೇಕು. ಆ ಕುಣಿತದಲ್ಲಿ ಸಾಮಾನ್ಯವಾಗಿ ಅಂಗವಿಕ್ಷೇಪಗಳು ಹೆಚ್ಚು


೨೫. ಶೀರ್ಷಕಾ ಚೋದ್ಧತಾ ಚೈವ ಹೈನುಬದ್ಧಾ ವಿಲಂಬಿತಾ
ಅಡ್ಡಿತಾಚಾsಪಕೃಷ್ಣಾ ಚ ಷಟ್‌ಪ್ರಕಾರಾ ಧ್ರುವಾ ಸ್ಮೃತಾǁ ೩೨೯ ǁ
ಶಿರಃಸ್ಥಾನೀಯ ಮೇತದ್ಧಿ ಯಸ್ಮಾತ್ತಸ್ಮಾತ್ತು ಶೀರ್ಷಕಂ
ಉದ್ಧ ತಾ ತೂದ್ಧ ತಾ ಯಸ್ಮಾತ್ತಸ್ಮಾಜ್ಞೆಯಾ ಯಥಾ ಬುದ್ಯೇ

ಯತಿಂ ಲಯಾನ್ ವಾದ್ಯಗತಿಂ ಪದಂ ವರ್ಣಾನ್ ಸ್ವರಾಕ್ಷರಂ
ಅನುಬದ್ಧಾತಿ ಯತ್ವಂ ಅನುಬದ್ಧಾ ಭವೇತ್ತುಸಾ
ಆಕ್ರೀಡಿತಪ್ರವೃತ್ತೋ ಯಶ್ಚತುರ್ಥಲಯಕಾರಕಃ
ನಾಸ್ಕೋಪಚಾರಜನಿತಃ ಸೋನುಬಂಧಃ ಪ್ರಕೀರ್ತಿತಃ
ಅಡ್ಡಿತಾ ಕೂತ್ಕಟಗುಣಾ ಶೃಂಗಾರರಸಸಂಭವಾ
ಅನ್ಯಭಾವೇಷು ಕೃಷ್ಣಾ ಚ ಕೃಷ್ಣ ಹೇತುಷು ಗೀಯತೇ
ಯಸ್ಮಾತ್ ಕಾರುಣ್ಯಸಂಯುಕ್ತಾ ಹೂವಕೃಷ್ಣಾ ಭವೇತ್ತತಃǁ೩೩೫ǁ

ವ್ಯಾ- ಏತತ್ಯಾದ್ಯಕ್ಷರಾಂತಂ ಯಸ್ಕಾಂ ಧ್ರುವಾಯಾಮೇವಮಿತಿ
ಪ್ರಯೋಗೌಚಿತ್ಯೇನ ಕವಿರ್ನಾಟ್ಯಾಚಾರ್ಯೋ ವರ್ಣಕವಿ
ರ್ಗಾತಾ ನಟೋವಾ ಯತ್ರಾನುಬದ್ಧಾತಿ ಸಾ'ಧ್ರುವಾ ಅನುಬದ್ಧಾ |
ಯತ್ಯಾದೇರಕ್ಷರಾಂತಸ್ಯ ವ್ಯಾಮಿಶ್ರೀಕರಣಾತ್ಮಾ ವರ್ಣಕವೇಃ ಕ್ರಿಯಾವಿಶೇಷಃ

೨೬. ಅಧ್ರುವಾಸ್ತು ಪ್ರವೇಶಾಃ ಸುರ್ಗಾಯತೋ ರುದತಸ್ತಥಾ
ಸಂಭ್ರಮ ಪ್ರೇಷಣೆ ಚೈವ ಹ್ಯುತ್ಸಾತೇ ವಿಸ್ಮಯೇ ತಥಾǁ ೩೨೭ ǁ