ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
'ಬೆದಂಡೆ – ಚತ್ತಾಣ' / ೨೬೩

ಇಲ್ಲಿ ವಿಶೇಷಾರ್ಥ ಸೂಚಕವಾಗಿ ಸೇರಿದ್ದೆಂದೆಣಿಸಬೇಕು. ಈ ವಿದಂಡಿಕವೇ ತದ್ಧಿತ ವೃತ್ತಿಯಲ್ಲಿ ಕಾವ್ಯಕ್ಕೆ ವಿಶೇಷಣವಾಗಿ 'ವೈದಂಡಿಕು' ಎಂದು ನಪುಂಸಕ ಲಿಂಗದ ಸ್ವರೂಪ ವನ್ನು ಪಡೆದಿದೆ ಎಂದು ನ್ಯಾಯವಾಗಿ ಅನುಮಾನಿಸಬಹುದು. ಆದುದರಿಂದ 'ವೈದಂಡಿಕು' ಪದದ ತದ್ಭವ ರೂಪವಾದ ಬೆದಂಡೆ ಎಂಬ ಹೆಸರು, ಸಂಗೀತರೂಪದಲ್ಲಿ ಹಾಡತಕ್ಕು `ದಾಗಿದ್ದ 'ಪಾಡುಗಬ್ಬ' ಅಥವಾ 'ವರ್ಣಕ' ಎಂಬ ಕಾವ್ಯರಚನೆಗಳಿಗೆಲ್ಲ ಸಾಮಾನ್ಯವಾಗಿ ರೂಢಿಯಲ್ಲಿದ್ದುದಿರಬೇಕೆಂದು ತಿಳಿಯಬಹುದಾಗಿದೆ.

ಇನ್ನು ಚತ್ತಾಣವೆಂದರೆ, ಕವಿರಾಜಮಾರ್ಗದಲ್ಲಿ ಕೊಟ್ಟಿರುವ ಲಕ್ಷಣದ ಪ್ರಕಾರ ಕನ್ನಡದ ಭಾಷಾಜಾತಿಗಳ ರಚನೆಯಾಗಿರುವುದರಿಂದ ನ್ಯಾಯವಾಗಿ ಅದೂ ಹಾಡುಗಬ್ಬವೇ ಸರಿ, ಬೆದಂಡೆಗೂ ಇದಕ್ಕೂ ಇರುವ ವ್ಯತ್ಯಾಸವೆಂದರೆ- ಇದರಲ್ಲಿ ಕಂದವೃತ್ತಗಳು ಅದಕ್ಕಿಂತ ಹೆಚ್ಚು, ಮತ್ತು ಜಾತಿಗಳಲ್ಲಿ ಅಕ್ಕರ, ಚೌಪದಿ, ಗೀತಿಕೆ ತ್ರಿಪದಿ ಎಂಬ ನಾಲ್ಕ ಇರಬೇಕು ಎಂಬ ನಿಯಮ, ಎಂಬುದಿಷ್ಟೇ ಹೊರತು ಬೇರೇನೂ ಅಲ್ಲ. ಹೀಗೆ ಕಂದವೃತ್ತಗಳು ಅಧಿಕ ಸಂಖ್ಯೆಯಲ್ಲಿರುವ ಪ್ರಬಂಧಗಳು ಹಿಂದಿನ ದೇಶೀ ಸಂಗೀತ ಸಂಪ್ರದಾಯದಲ್ಲಿ ಪ್ರಶಸ್ತವಾದ ಗೇಯವಸ್ತುಗಳಾಗಿದ್ದುವೆಂದು ಸಂಗೀತಶಾಸ್ತ್ರಗ್ರಂಥ ಗಳಿಂದ ತಿಳಿಯಬಹುದು. ಪ್ರಬಂಧಗಾನದಲ್ಲಿ 'ಸೂಡಕ್ರಮ' 'ಆಲಿಕ್ರಮ' 'ಸಂಕೀರ್ಣ ಕ್ರಮ' (ಸೂಡಾಲಿಕ್ರಮ) ಎಂಬ ಮೂರು ವಿಧಾನಗಳಿದ್ದುವು. ಸೂಡಕ್ರಮ ಎಂದರೆ ಒಂದು ಕಟ್ಟಿನಲ್ಲಿರುವ ಅಥವಾ ನಿಯತ ವ್ಯವಸ್ಥೆಗೆ ಒಳಪಟ್ಟ ಕ್ರಮ ಎಂದರ್ಥ. 'ಸೂಡ' ಶಬ್ದಕ್ಕೆ ಸಾಮಾನ್ಯವಾಗಿ ಕಟ್ಟು ಎಂಬ ಅರ್ಥ. ಆದುದರಿಂದ ಸಂಗೀತದ ಪರಿಭಾಷೆಯಲ್ಲಿ ಪ್ರಬಂಧ ಶಬ್ದಕ್ಕೆ ಪರ್ಯಾಯವಾಗಿಯೂ ಅದು ಪ್ರಯೋಗಿಸಲ್ಪಟ್ಟಿದೆ. ಪ್ರಬಂಧಗಾನದಲ್ಲಿ 'ಸೂಡಕ್ರಮ' ಹಾಗೂ 'ಸೂಡಸ್ಥಪ್ರಬಂಧ'ಗಳು ಎಂದರೆ, ಮೊದಲು ದೊಡ್ಡದು ಆಮೇಲೆ ಅದಕ್ಕಿಂತ ಚಿಕ್ಕದು ಎಂಬಂತೆ ನಿಯತಾನುಕ್ರಮದಲ್ಲಿರುವ ಕೆಲವೊಂದು ಪ್ರಬಂಧಗಳನ್ನು ಅದೇ ಕಟ್ಟು ಪ್ರಕಾರ ಒಂದಾದ ಮೇಲೆ ಒಂದರಂತೆ ಹಾಡುವುದು ಎಂದರ್ಥ. ಹಾಗೆ ಒಗ್ಗಟ್ಟಿನಲ್ಲಿ ಹಾಡತಕ್ಕೆ ಏಲೆ ಮೊದಲಾದ ಎಂಟು ಪ್ರಬಂಧಗಳನ್ನು 'ಸೂಡಸ್ಥ ಪ್ರಬಂಧ ಗಳು' ಎಂದು ಕರೆಯಲಾಗಿದೆ. ಹೀಗೆ 'ಶುದ್ಧ ಸೂಡ' 'ಸಾಲಗಸೂಡ' ಎಂಬ ಎರಡು ವಿಧದ ಸೂಡ ಕ್ರಮಗಳು ಹಿಂದೆ ಪ್ರಸಿದ್ಧವಾಗಿದ್ದುವು. ಈ ಕುರಿತು ಹೆಚ್ಚಿನ ವಿವರಣಕ್ಕೆ ನಾನು ಈ ಮೊದಲು ಬರದಿರುವ 'ಸೂಡ-ಸೂಳಾದಿ-ಸಾಲಗ' ಎಂಬ ಲೇಖನವನ್ನು ನೋಡ ಬಹುದು. (ಕಲಾತಪಸ್ವಿ : ಬಲಿಪ ನಾರಾಯಣ ಭಾಗವತ ಸ್ಮಾರಕ ಗ್ರಂಥ), ಶುದ್ಧ ಸೂಡ ಕ್ರಮದ ಏಲಾದಿ ಪ್ರಬಂಧಗಾನದಲ್ಲಿ ಅಧಿಕಸಂಖ್ಯೆಯ ಕಂದವೃತ್ತಗಳಿರುವ ದೊಡ್ಡ ಪ್ರಬಂಧವನ್ನೇ ಮೊದಲಾಗಿ ಹಾಡಬೇಕು ಎಂಬ ನಿಯಮವಿರುತ್ತದೆ. ಸಂಗೀತ ರತ್ನಾಕರದ ಪ್ರಬಂಧಾಧ್ಯಾಯದಲ್ಲಿ ಈ ಲಕ್ಷಣಶ್ಲೋಕವು ಹೀಗಿದೆ :
ಕಂದವೃತ್ತಾದಿಕಃ ಕಶ್ಚಿತ್ ಪ್ರಬಂಧ ಗೀಯತೇ ಮಹಾನ್ |
ಅಲ್ಪ: ಪಶ್ಚಾತ್ ಪ್ರಗಾತವ್ಯ ಏಷ ಸೂಡಕ್ರಮೋ ಮತಃ ||


೧. ಶುದ್ಧಸೂಡ-ವಿಲಾ, ಕರಣ, ಡೇಂಕೀ, ಭರ್ವತ್ರವ್ಯಾ, ಜೋಂಬಡೇನ, ಚ |
ಲಂಭ, ರಾಜ್ಯ, ಕತಾಲೀ, ಭಿರಷ್ಟಭಿಃ ಸೂಡ ಉಚ್ಯತೇ || ಸಂ. ರ ||

ಸಾಲಗಸೂಡ ಆದ್ರೆ ಧ್ರುವಸ್ತತೋ ಮಂಠ ಪ್ರತಿಮಂಠ ನಿಸಾರುಕಾಃ |
ಅಡ್ಡ ತಾಲಸ್ತತೋ ರಾಸ ಏಕತಾಲೀತ್ಯಸೌಮತಃ ||