ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ

ಎಲ್ಲಾ ಕಲ್ಪನೆಗಳನ್ನೂ ಯಶಸ್ವಿಯಾಗಿ ವಿವರಿಸಬಲ್ಲವು. ಆದುದರಿಂದಲೇ ಶ್ರೀ ಶಾರ್ಙ್ಗದೇವನು ಶಾರ್ದೂಲ, ಕಾಶ್ಯಪ, ಋಷ್ಟಿಕ, ದುರ್ಗಾಶಕ್ತಿಗಳಿಂದ ಬೀಜರೂಪವಾದ ಈ ಕಲ್ಪನೆಯನ್ನು ಪಡೆದುಕೊಂಡು (?) ನಾನ್ಯದೇವನನ್ನು ಅನುಸರಿಸಿ ವಿಸ್ತರಿಸಿ ಅನ್ವಯಿಸಿದ್ದಾನೆ. ಸಂಗೀತಶಾಸ್ತ್ರದ ತತ್ವಜಿಜ್ಞಾಸೆಗೂ ವಿಧಾನಶಾಸ್ತ್ರಕ್ಕೂ ಅವನಿಂದಾಗಿರುವ ಮಹೋಪಕಾರಗಳಲ್ಲಿ ಇದೂ ಒಂದು.

ಇವೆಲ್ಲವೂ ಇವರ ಸ್ವಂತ ಕಲ್ಪನೆಗಳೇ ಹೊರತು ಯಾವ ಗ್ರಂಥದಲ್ಲೇಯಾಗಲಿ ಇದಕ್ಕೆ ಆಧಾರವೂ ಇಲ್ಲ ಅವಕಾಶವೂ ಇಲ್ಲ. ಇದು ಸಂಗೀತಶಾಸ್ತ್ರದ ಅವಮಾನ, ಶಾರ್ಙ್ಗದೇವನಿಗೆ ಅವಮಾನ ! ಎಂದಷ್ಟೇ ಈ ಕುರಿತು ಹೇಳಲಿಕ್ಕಿರುವುದು.

ನಾನ್ಯದೇವನು ಈ ಶ್ರುತಿಜಾತಿಗಳಲ್ಲಿ ಅವಾಂತರಭೇದಗಳನ್ನು ಕಲ್ಪಿಸಿ ಹೆಸರಿಸುವುದಕ್ಕೆ ಅವನಿಗೆ ಉದ್ದಿಷ್ಟಾರ್ಥವೇನಾದರೂ ಇದ್ದರೆ ಅದು ನಾರದೀಯ ಶಿಕ್ಷೆಯನ್ನು ಅನುಸರಿಸಿ ಗಾನದಲ್ಲಿ ವಿಶೇಷ ರಂಜನಾರ್ಥಕ್ಕಾಗಿ ಸ್ವರೋಚ್ಚಾರದಲ್ಲಿ ಸಾಧಿಸತಕ್ಕ ಗುಣವಿಶೇಷ ಎಂಬುದಲ್ಲದೆ ಇನ್ನೊಂದಾಗಿರಲಾರದೆಂದು ಅವನ ಗ್ರಂಥದಿಂದಲೇ ನ್ಯಾಯವಾಗಿ ಅನುಮಾನವಾಗುವುದು; ಹೇಗೆಂದರೆ : ಆತನು ಒಂದು ಮತ್ತು ಎರಡು ಸ್ವರಗಳನ್ನು ಲೋಪಿಸಿ ಷಾಡವ, ಔಡವಗಳನ್ನು ಮಾಡುವಾಗ ಎಂದರೆ ಆರೇ ಸ್ವರಗಳಲ್ಲಿ ಹಾಗೂ ಐದೇ ಸ್ವರಗಳಲ್ಲಿ ಹಾಡುವಾಗ ಸ್ಥಾಯಿಯಲ್ಲಿ ಆ ಸ್ವರಗಳಿಗಿರುವಷ್ಟು ಸಂಖ್ಯೆಯ ಶ್ರುತಿಗಳು ಇಲ್ಲವೆಂದೇ ತಿಳಿಯಬೇಕು ಎನ್ನುತ್ತಾನೆ. <poem>ಉದ್ಯತೇಯಃ ಸ್ವರಶ್ಚಾತ್ರ ಪಾಡವೇ ಯದಿ ಚೌಡವೇ |
ಜ್ಲೇಯಸ್ತುಶ್ರುತಿಸಂಸರ್ಗೇ ಶ್ರುತಿಲೋಪಸ್ತದಾಬುಧ್ಯೆ:


ಗಾಂಧಾರೇಣ ನಿಷಾದೇನ ವಿಹೀನಃ ಪಾಡವೋ ಯದಾ |
ಗೇಯಸ್ವರೇಷು ಜಾಯಂತೇ ಶ್ರುತಯೋ ವಿಂಶತಿಸ್ತ್ರದಾ |
ಔಡವಿತಂಚ ನಿಷಾದ ಗಾಂಧಾರ ರಹಿತೇ ಯದಿ |

ಅಷ್ಟಾದಶೈವ ಶ್ರುತಯಃ ಸ್ಮೃತಾಃ ಶೇಷ ಸ್ವರೇಷ್ಟಥ


ಷಡ್ವರ್ಷಭವಿಹೀನೇ ಚ ತ್ಯಕ್ತಧೈವತಪಂಚಮೇ

ಔಡವಿತೇಥ ಶ್ರುತಯೋಬುಧ್ಯೆ: ಪಂಚದಶಸ್ಮೃತಾಃ


ಇತ್ಯಾದಿ (ಭ. ಭಾ. ಪು. ೧೦೫)

ಗಾಂಧಾರ ಅಥವಾ ನಿಷಾದ ಸ್ವರವಿಲ್ಲದ ಗಾನವಾದರೆ ಅದರಲ್ಲಿ ಇಪ್ಪತ್ತೇ ಶ್ರುತಿಗಳಿರುವುದೆಂದೂ ಅವೆರಡೂ ಇಲ್ಲದ ಔಡವದಲ್ಲಿ ೧೮ ಶ್ರುತಿಗಳಿರುವುದೆಂದು ಚತುಃ ಶ್ರುತಿ ತ್ರಿಶ್ರುತಿ ಸ್ವರಗಳೆರಡು ಲೋಪವಾದ ಔಡವಗಾನದಲ್ಲಿ ೧೫ದೇ ಶ್ರುತಿಗಳಿರುವುದೆಂದೂ ಹೇಳುತ್ತಾನೆ. ಉಚ್ಚ ನೀಚ ಶ್ರುತಿಗಳಾದರೆ ಸ್ವರ ಲೋಪವಾಗುವಾಗ ಅಷ್ಟು ಶ್ರುತಿಗಳೇ ಲೋಪವಾಗುವುವೆಂದು, ಅರ್ಥವಿಲ್ಲದ ಮಾತುಗಳನ್ನು ಅವನು ಹೇಳುತ್ತಿರಲಿಲ್ಲವೆಂಬುದರಲ್ಲಿ ಸಂದೇಹವೇ ಇಲ್ಲವಷ್ಟೆ?

ನಾನ್ಯದೇವನು ಗ್ರಾಮಭೇದಗಳನ್ನು ನಿರೂಪಿಸುವಾಗಲೂ ಅದಕ್ಕೆ ಪಂಚಮದ ಉತ್ಕರ್ಷಾಪಕರ್ಷದ ಶ್ರುತಿಭೇದವನ್ನು ಹೇಳಿದ ಮೇಲೆ ದೀಪ್ತಾಯತಾದಿ ಶ್ರುತಿಗಳು ಗ್ರಾಮಸ್ವರಗಳಲ್ಲಿ ವ್ಯತ್ಯಾಸವಾಗುವುದನ್ನು ಇದರಂತೆಯೇ ಹೇಳುತ್ತಾನೆ. ಆದರಿಂದಲೂ ಈ ದೀಪ್ತಾದಿಗಳು ಸ್ವರಗುಣಗಳೇ ಹೊರತು ಆ ಉಚ್ಚನೀಚ ಶ್ರುತಿಗಳಿಗೂ ಇವಕ್ಕೂ ಸಂಬಂಧವೇ ಇಲ್ಲವೆಂಬುದು ಸ್ಪಷ್ಟವಾಗಿದೆ.